ಪಡೀಲ್ ಮಸೀದಿಯಲ್ಲಿ ಮಿಲಾದ್ ಆಚರಣೆ, ಮಿನಾರ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

padeel1

ಪುತ್ತೂರು: ಪಡೀಲ್ ಮೊಹಿನುಲ್ ಇಸ್ಲಾಂ ಜುಮ್ಮಾ ಮಸೀದಿ ಯಲ್ಲಿ ಮಿಲಾದ್ ಆಚರಣೆ ಹಾಗೂ ಮಸೀದಿಗೆ ನೂತನವಾಗಿ ಕಟ್ಟಿಸಿದ ಮಿನಾರ್‌ನ ಉದ್ಘಾಟನೆಯು ದ.12ರಂದು ಜರಗಿತು.

ಪುತ್ತೂರು ಮುದರ್ರಿಸ್ ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್‌ರವರು ನೂತನ ಮಿನಾರ್ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿ, ವಿಶ್ವ ವಿಮೋಚಕ ಹುಟ್ಟಿನಿಂದ ಮರಣದ ವರೆಗೆ ಒಂದೇ ಒಂದು ತಪ್ಪು ಮಾಡದ ದೋಷ ರಹಿತರಾದ ಪ್ರವಾದಿ ಹಝ್ರತ್ ಮುಹಮ್ಮದ್ ಪೈಗಂಬರರವರ ಆದರ್ಶಗಳು ಅವರ ನಡೆನುಡಿ ವಿಶ್ವವನ್ನು ಅಂಧಕಾರದಿಂದ ಪ್ರಕಾಶನದ ಕಡೆಗೆ ತಂದ ಮಹಾನ್ ಪುರುಷರಾಗಿದ್ದಾರೆ. ಅವರ ಆದರ್ಶಗಳು ನಮಗೆ ದಾರಿದೀಪವಾಗಿದೆ. ಅವರ ನಡೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಮಿನಾರ್ ಉದ್ಘಾಟನೆಗಾಗಿ ತಮ್ಮ ತನ-ಮನ-ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರಿಗೂ ಅಲ್ಲಾಹನ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿರವರು ಮಾತನಾಡಿ, ಮಸೀದಿಯ ಮಿನಾರ್‌ಗಳು ಧಾರ್ಮಿಕ ಚಿಹ್ನೆಯಾಗಿದೆ. ಪ್ರವಾದಿ ಮುಹಮ್ಮದ್ ಪೈಗಂಬರರವರ ಆದರ್ಶತೆಗಳು ಮತ್ತು ಮಾನವ ಕುಲ ಕೋಟಿಗೆ ಅವರು ನೀಡಿದ ಅಮೋಘ ಕೊಡುಗೆಗಳು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾರ್ಗ ದರ್ಶನ ನೀಡುವಂತಾಗಬೇಕು ಎಂದರು. ನಾವು ಎಷ್ಟು ಸತ್ಪರ್ಮಗಳನ್ನು ಮಾಡಿದರೂ ಮನುಷ್ಯತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ನಾವು ಮಾಡಿದ ಸತ್ಕರ್ಮಗಳಿಗೆ ಫಲ ಇಲ್ಲದಂತಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಅನ್ಸಾರು ದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಯು. ಅಬ್ದುಲ್ಲಾ ಹಾಜಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಕಮ್ಮಾಡಿ ಇಬ್ರಾಹಿಂ ಹಾಜಿಯವರು ಆಗಮಿಸಿದ್ದರು. ಪುತ್ತೂರು ಎಪಿಎಂಸಿ ನಿರ್ದೇಶಕ ವಿ.ಎಚ್. ಅಬ್ದುಲ್ ಶಕೂರ್ ಹಾಜಿ ಸಂದರ್ಭೋಚಿತವಾಗಿ ಮಾತನಾಡಿ, ಶುಭಹಾರೈಸಿದರು.

ಸನ್ಮಾನ: ಮಸೀದಿ ಮಿನಾರನ್ನು ಶೀಘ್ರದಲ್ಲಿ ನಿರ್ಮಿಸಿಕೊಟ್ಟ ಇಂಜಿನಿಯರ್ ಅಬ್ದುಲ್ಲಾ ಹಾಜಿಯವರನ್ನು ಇದೇ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ಪುತ್ತೂರು ಮುದರ್ರಿಸ್ ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್‌ರವರು ಶಾಲು ಹೊದಿಸಿ ಸನ್ಮಾನಿಸಿದರು.

ವೇದಿಕೆಯಲ್ಲಿ ಸಾಲ್ಮರ ಸೈಯ್ಯದ್‌ಮಲೆ ಜುಮ್ಮಾ ಮಸೀದಿ ಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ, ಪುತ್ತೂರು ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಜೊತೆ ಕಾರ್ಯದರ್ಶಿ ಶೇಖ್ ಜೈನುದ್ದೀನ್, ಪಡೀಲ್ ಮೊಹಿನುಲ್ ಇಸ್ಲಾಂ ಜುಮ್ಮಾ ಮಸೀದಿ ಮದ್ರಸ ಸಮಿತಿಯ ಉಪಾಧ್ಯಕ್ಷ ಆತೂರ್ ಇಬ್ರಾಹಿಂ ಹಾಜಿ, ಮದ್ರಸ ಅಧ್ಯಾಪಕರುಗಳಾದ ಅಬ್ದುಲ್ ಅಝೀರh ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್ ಉಪಸ್ಥಿತರಿದ್ದರು. ಪಡೀಲ್ ಮೊಹಿನುಲ್ ಇಸ್ಲಾಂ ಜುಮ್ಮಾ ಮಸೀದಿ ಮದ್ರಸ ಸಮಿತಿಯ ಅಧ್ಯಕ್ಷ ಯು. ಮುಹಮ್ಮದ್ ಹಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಸೀದಿ ಮದ್ರಸ ಬೆಳೆದು ಬಂದ ಹಾದಿಯ ಬಗ್ಗೆ ಹಾಗೂ ಮಿನಾರ್ ಕಟ್ಟಲು ಮುಂದೆ ಬಂದವರ ಬಗ್ಗೆ ವಿವರಿಸಿ ಈ ಮಸೀಸಿಯ ಅಭಿವೃದ್ಧಿಯ ಬಗ್ಗೆ ಸಹಾಯ, ಸಹಕಾರ ನೀಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಚಿಕ್ಕಪುತ್ತೂರು ವಂದಿಸಿದರು. ಕಮಿಟಿಯ ಪದಾಧಿ ಕಾರಿಗಳಾದ ಹುಸೈನ್ ಗಾರ್ಬಲ್, ಅಬ್ದುಲ್ ರಝಾಕ್ ಆರ್. ಟಿ., ಅಬ್ದುಲ್ ರಝಾಕ್ ಆರ್.ಪಿ., ಅಬ್ದುಲ್ ಅಝೀರh ಪಡೀಲ್, ಮೊದೀನ್ ಹಾಜಿ ಪಡೀಲ್, ಅಬ್ದುಲ್ ರಹಿಮಾನ್ ಪಡೀಲ್, ಫಾರೂಕ್ ಶೈನಿ, ಪುತ್ತುಂಞಿ ಪಡೀಲ್, ಅಬ್ದುಲ್ ಖಾದರ್ ಪುತ್ತು ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಾದಿಕ್, ಸಿನಾನ್‌ರವರು ಸಹಕರಿಸಿದರು.

ಮೌಲೂದ್ ಪಾರಾಯಣ: ಆರಂಭದಲ್ಲಿ ಪಡೀಲ್ ಮೊಹಿನುಲ್ ಇಸ್ಲಾಂ ಮಸೀದಿಯ ಖತೀಬ್ ಹನೀಫ್ ದಾರಿಮಿ ನೆಕ್ಕಿಲಾಡಿರವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.