ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ಪ್ರಸ್ತುತಗೊಂಡ ’ಬುದ್ದನೆಡೆಗೆ’ ನಾಟಕ

Puttur_Advt_NewsUnder_1
Puttur_Advt_NewsUnder_1

budha1budha2ಪುತ್ತೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ’ಬುದ್ದನೆಡೆಗೆ’ ಐತಿಹಾಸಿಕ ನಾಟಕ ದ. 9 ರಂದು ಇಲ್ಲಿನ ಪುರಭವನದಲ್ಲಿ ಪ್ರಸ್ತುತಗೊಂಡಿತು. ಬೌದ್ಧ ಧರ್ಮಗುರು ಬುದ್ಧನ ಜೀವನ ಚರಿತ್ರೆ ಸಾರ್ವಕಾಲಿಕ ಆದರ್ಶ ತತ್ವಗಳ ಸಾರಾಂಶ. ಇದನ್ನು ಕಥೆಯಲ್ಲೋ, ಇತಿಹಾಸದಲ್ಲೋ ಓದಿದಾಗಲೇ ಸ್ಪಷ್ಟವಾದ ತತ್ವಾದರ್ಶಗಳು ಅನಾವರಣಗೊಳ್ಳುತ್ತವೆ. ಇಂತಹುದರಲ್ಲಿ ರಂಗಕಲೆಯ ಮೂಲಕ ಪ್ರಸ್ತುತಪಡಿಸಿದಾಗ ಇನ್ನಷ್ಟು ಪರಿಣಾಮಕಾರಿ ಎಂಬುದನ್ನು ಕಾಲೇಜಿನ ವಿದ್ಯಾರ್ಥಿನಿ ಕಲಾವಿದರು ಸಾದರಪಡಿಸಿದರು. ರಂಗಶಂಕರ ಸಂಸ್ಥೆ ಅರ್ಪಿಸುವ ವಿನೂತನ ರಂಗ ಪ್ರಯೋಗದ ಮೂಲಕ ಬುದ್ದನ ಜೀವನ ಚರಿತ್ರೆ ಹಾಗೂ ತತ್ವಗಳ ಸಾರಾಂಶ ಒಳಗೊಂಡ ಬುದ್ದನೆಡೆಗೆ ನಾಟಕ ಪ್ರೇಕ್ಷಕರಿಂದ ಪ್ರಶಂಸೆಗೊಳಪಟ್ಟಿತು. ಆ ಮೂಲಕ ರಂಗಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರು ಛಾಪು ಮೂಡಿಸಿದ್ದಾರೆ. ಬುದ್ದನ ಆದರ್ಶ ತತ್ವಗಳನ್ನು ವಿನೂತನ ಪ್ರಯೋಗದ ಮೂಲಕ ಅನಾವರಣ ಮಾಡಲಾಗಿದೆ. ತ್ರಿಪಿಟಿಕ ದಲ್ಲಿನ ಮೂಲ ಕಥೆಯನ್ನು ಆಧರಿಸಿ ಬುದ್ಧನ ಜೀವನ ಚರಿತ್ರೆಯ ಸಾಹಿತ್ಯವನ್ನು ಇಲ್ಲಿ ಬಣ್ಣಿಸಲಾಗಿದೆ. ಬೌದ್ಧ ಧರ್ಮದ ಭಾಷೆಯಾದ ಪಾಳೀ ಭಾಷೆಯ ಅಂಶಗಳನ್ನೂ ಇಲ್ಲಿ ಸೇರಿಸಿಕೊಂಡಿರುವುದು ವಿಶೇಷವಾಗಿದೆ. ಪಂಚಶೀಲ ತತ್ವಗಳ ಮೂಲಕ ಬುದ್ಧನ ಸರ್ವತತ್ವಗಳ ಆದರ್ಶಗಳನ್ನು ಇದರಲ್ಲಿ ಬಿಂಬಿಸಲಾಗಿದೆ.

ರಾಜ್ಯ ಸಂಸದೀಯ ಕಾರ‍್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಭೇಟಿ ನೀಡಿ ವಿದ್ಯಾರ್ಥಿ ಕಲಾವಿದರಿಗೆ ಶುಭ ಹಾರೈಸಿದರು. ಸದಾನಂದ ಬಿ. ಮುಂಡಾಜೆ ಸಾಹಿತ್ಯ ರಚಿಸಿರುವ ನಾಟಕವನ್ನು ಕೃಷ್ಣಪ್ಪ ಬಂಬಿಲ ವಿನ್ಯಾಸದೊಂದಿಗೆ ನಿರ್ದೇಶಿಸಿದ್ದಾರೆ. ರಂಗಪರಿಕರದಲ್ಲಿ ಪ್ರತಾಪ್ ಚೆಂತಿಮಾರು, ವಿಕೇಶ್ ಬಂಟ್ವಾಳ ಹಾಗೂ ಸಂಗೀತದಲ್ಲಿ ನವೀನ್ ಕಾಂಚನ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿ’ಸೋಜ ಹಾಗೂ ಉಪನ್ಯಾಸಕ ವೃಂದ ತಂಡದ ಮಾರ್ಗದರ್ಶಕರಾಗಿದ್ದು, ಮುಂದೆ ಹಲವು ಸ್ಪರ್ಧೆಗಳಲ್ಲಿ ಈ ತಂಡ ಭಾಗವಹಿಸಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.