ಮಂಗಲ್‌ಸ್ಟೋರ್‌ನಲ್ಲಿ ಕ್ಯಾಂಪ್ಕೋದ ಕಲ್ಪ ಚಾಕೋಲೇಟ್ ಬಿಡುಗಡೆ

mangal

ಪುತ್ತೂರು: ಕ್ಯಾಂಪ್ಕೋದ ಕಲ್ಪ ಚಾಕೋಲೇಟ್ ನಗರದಲ್ಲಿರುವ ಮಂಗಲ್ ಸ್ಟೋರ್‌ನಲ್ಲಿ ಬಿಡುಗಡೆಯಾಯಿತು. ಬಿಡುಗಡೆಗೊಳಿಸಿ ಮಾತನಾಡಿದ ಮಾಸ್ಟರ್ ಪ್ಲಾನರಿಯ ಮಾಲಕ ಆನಂದ್ ಕುಮಾರ್ ರವರು ನಮ್ಮೂರಿನ ಉತ್ಪನ್ನಗಳನ್ನು ನಾವು ಉಪಯೋಗಿಸಿ, ಉಳಿದವರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಉತ್ತಮ ಕಾರ್ಯ ಮಾಡಿದೆ. ಅದರಲ್ಲೂ ಮಂಗಲ್ ಸ್ಟೋರ್ ನಲ್ಲಿ ಬಿಡುಗಡೆಯಾಗಿರುವುದು ಗ್ರಾಹಕರಿಗೆ ತುಂಬಾ ಸಂತೋಷ ತಂದಿದೆ ಎಂದರು. ಈ ಉತ್ಪನ್ನವನ್ನು ಗ್ರಾಹಕರು ಹೆಚ್ಚಾಗಿ ಖರೀದಿಸಿ ಸಂಸ್ಥೆಯನ್ನು ಉನ್ನತಿಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

ಮಂಗಲ್ ಸ್ಟೋರ್‌ನ ರಾಘವೇಂದ್ರ ನಾಯಕ್, ಸುದರ್ಶನ್ ನಾಯಕ್, ಅರುಣಾ ನಾಯಕ್, ಸವಿತಾ, ಲಕ್ಷ್ಮೀ ನಾಯಕ್, ತಿಮ್ಮಪ್ಪಯ್ಯ ಮುಳಿಯ, ಕ್ಯಾಂಪ್ಕೋದ ಮಹೇಶ ಕುಮಾರ್ ಪಿ.ಬಿ, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಚಾಕಲೇಟ್‌ನ ವಿಶೇಷತೆ: ಐ.ಸಿ.ಎ.ಆರ್ ಅಧೀನದಲ್ಲಿರುವ ಸಿ.ಪಿ.ಸಿ.ಆರ್.ಐ ಯವರು ಅಭಿವೃದ್ಧಿಪಡಿಸಿದ ತೆಂಗಿನ ಮರದ ಗೊನೆಯ ನೀರಿನಿಂದ ತಯಾರಿಸಿದ ಕಲ್ಲುಸಕ್ಕರೆಯ ಮೂಲಕ ಕಲ್ಪ ಡಾರ್ಕ್ ಚಾಕೋಲೇಟ್ ವಿಶಿಷ್ಟ ತಾಂತ್ರಿಕತೆಯೊಂದಿಗೆ ತಯಾರಾಗಿದೆ. ಇದು ೧೦೦% ನೈಸರ್ಗಿಕವಾಗಿದ್ದು, ಯಾವುದೇ ಕೃತಕವಾದ ಕೆಮಿಕಲ್ ವಸ್ತುಗಳನ್ನು ಬಳಸದೆ ತಯಾರಾಗಿದೆ. ಇದರಲ್ಲಿ ಪಾಮ್‌ಶುಗರ ಇರುವ ಕಾರಣ ಚಾಕೋಲೇಟನ್ನು ಉಪಯೋಗಿಸಿದ ನಂತರ ನೇರವಾಗಿ ರಕ್ತಕ್ಕೆ ಸಕ್ಕರೆ ಪ್ರಮಾಣ ತಲುಪುವುದಿಲ್ಲ. ಇದರಿಂದ ಸಂಪೂರ್ಣ ಆರೋಗ್ಯಕರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.