ಕರ್ಣಾಟಕ ಬ್ಯಾಂಕ್ ವಿಸ್ತೃತಗೊಂಡು ಶುಭಾರಂಭ, ಮಿನಿ ಇ-ಲಾಬಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

karnataka1 karnataka3 karnataka2

ಪುತ್ತೂರು: ಕರ್ಣಾಟಕ ಬ್ಯಾಂಕ್‌ನ ಪುತ್ತೂರು ಶಾಖೆಯು ಹೆಚ್ಚಿನ ಸೇವೆಯೊಂದಿಗೆ ವಿಸ್ತೃತಗೊಂಡು ಇಲ್ಲಿನ ಎಸ್.ಬಿ.ಬಿ ಸೆಂಟರ್‌ನ ನೆಲಮಹಡಿಗೆ ಸ್ಥಳಾಂತರಗೊಂಡಿದ್ದು ಇದರ ಶುಭಾರಂಭ ಹಾಗೂ ಮಿನಿ ಇ-ಲಾಬಿ ಉದ್ಘಾಟನೆಯು ದ. ೧೩ರಂದು ಸಂಜೆ ನಡೆಯಿತು. ಈ ಹಿಂದೆ ಬೋನಂತಾಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕ್ ವಿವಿಧ ಹೊಸ ಸೌಲಭ್ಯಗಳೊಂದಿಗೆ ಸ್ಥಳಾಂತರಗೊಂಡಿತ್ತು.

ಸಮಾಜದೊಂದಿಗಿನ ಸ್ಪಂದನೆ ಬ್ಯಾಂಕ್‌ನ ಏಳ್ಗೆಗೆ ಪೂರಕ:

ಎಡನೀರು ಮಠದ ಶ್ರೀ ಕೇಶವಾನಂದಭಾರತೀ ಮಹಾಸ್ವಾಮಿಯವರು ನೂತನ ಶಾಖಾ ಪ್ರಾಂಗಣ ಹಾಗೂ ಇ-ಲಾಬಿಯನ್ನು ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮಹಾಲಿಂಗೇಶ್ವರ ಮತ್ತು ದೇವಿಯ ಸನ್ನಿಧಿಯಲ್ಲಿರುವ ಈ ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿದೆ. ಈ ಬ್ಯಾಂಕ್‌ನ ವೈಶಿಷ್ಟ್ಯವೆಂದರೆ ಸಮಾಜದೊಂದಿಗಿನ ಸ್ಪಂದನೆ. ಈ ಕುರಿತು ನನಗೆ ಸ್ವಂತ ಅನುಭವವೂ ಇದೆ. ನಾನೇನು ನಿಮ್ಮ ಬ್ಯಾಂಕ್‌ನ ಶೇರ್ ಹೋಲ್ಡರ್ ಅಲ್ಲ. ಆದರೂ ನಿಮ್ಮ ಬ್ಯಾಂಕ್‌ನವನಾಗಿzನೆ ಎಂದ ಅವರು ಬ್ಯಾಂಕ್ ಕೇವಲ ವ್ಯವಹಾರಿಕವಾಗಿರದೆ ಹಲವಾರು ಕಾರ್ಯಕ್ರಮಗಳಲ್ಲಿ ಸಹಕಾರ ಮಾಡುವ ಅನುಭವವೂ ಇದೆ ಎಂದರು.

೨೦೨೦ ಕ್ಕೆ ಬ್ಯಾಂಕ್ ಗುರಿ ರೂ. ೧.೮ ಸಾವಿರ ಕೋಟಿ ವ್ಯವಹಾರ: ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ೪ನೇ ಶಾಖೆಯಾಗಿ ಮೂಡಿ ಬಂದ ಪುತ್ತೂರಿನ ಬ್ಯಾಂಕ್ ಸಿಬಂದಿಗಳ ಪರಿಶ್ರಮದಿಂದ ರೂ. ೨೦೦ ಕೋಟಿ ವ್ಯವಹಾರ ಮಾಡುತ್ತಾ ಬಂದಿದೆ. ನಮ್ಮಲ್ಲಿ ಡೆಪೋಸಿಟ್ ಜಾಸ್ತಿ, ಸಾಲ ಕಡಿಮೆ ಆಗಿದೆ. ಹಾಗೆಂದು ಸಾಲ ಹೋಗಿಲ್ಲ ಎಂದರ್ಥವಲ್ಲ. ಸಾಲ ಕೇಳಿದಾಗ ಕೊಟ್ಟಿzವೆ. ಸಾಲ ಪಡಕೊಂಡವರು ತ್ವರಿತವಾಗಿ ಸಾಲವನ್ನು ಮರು ಪಾವತಿಸಿದ್ದು ಉತ್ತಮ ಗ್ರಾಹಕರನ್ನು ಬ್ಯಾಂಕ್ ಪಡೆದು ಕೊಂಡಿದೆ ಮುಂದಿನ ಈ ೨೦೧೭ಕ್ಕೆ ರೂ. ೧ಲಕ್ಷ ಕೋಟಿ ವ್ಯವಹಾರದ ಗುರಿ ಹೊಂದಿದ್ದು, ೨೦೨೦ನ್ನು ವಿಷನ್ ಆಗಿ ತೆಗೆದು ಕೊಂಡು ರೂ. ೧.೮೦ಸಾವಿರ ಕೋಟಿ ವ್ಯವಹಾರ ಮಾಡುವ ಗುರಿಯನ್ನು ಹೊಂದಿzವೆ ಎಂದರು.

ಶತಮಾನದ ಹೊಸ್ತಿಲಲ್ಲಿರುವ ಬ್ಯಾಂಕ್:

ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಮಹಾಬಲೇಶ್ವರ ಭಟ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಭಾಗಗಳ ಅಂಚನ್ನೂ ತಲುಪಿರುವ ಬ್ಯಾಂಕ್ ಹುಟ್ಟಿದ್ದು ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ. ೧೯೨೪ ರಲ್ಲಿ ಸ್ಥಾಪನೆಗೊಂಡ ಬ್ಯಾಂಕ್ ಶತಮಾನೋತ್ಸವದ ಹೊಸ್ತಿಲಲ್ಲಿದೆ ಅಂದು ವ್ಯಾಸರಾಯ ಆಚಾರ್ಯರವರು ಬ್ಯಾಂಕ್‌ನ್ನು ಮುನ್ನಡೆಸಿದರು. ಅಂದು ಬ್ಯಾಂಕ್‌ಗೆ ಚಿಹ್ನೆಯನ್ನು ಕೊಟ್ಟವರು ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರು. ಪುತ್ತೂರಿನಲ್ಲಿ ೧೯೪೪ಕ್ಕೆ ನಾಲ್ಕನೆ ಶಾಖೆಯಾಗಿ ಸ್ಥಾಪನೆಗೊಂಡ ಬ್ಯಾಂಕ್ ಪ್ರಥಮವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಟ್ಟಡದಲ್ಲಿ ವ್ಯವಹರಿಸುತ್ತಿತ್ತು. ಆನಂತರ ಸ್ಥಳೀಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಇದೀಗ ೨೮ ವರ್ಷಗಳ ಬಳಿಕ ಹೆಚ್ಚು ವಿಸ್ತೃತಗೊಂಡು ೩ನೇ ಸ್ಥಳಾಂತರವಾಗಿದೆ. ರಾಜ್ಯದಲ್ಲಿ ೧೩೩೦ ಎಟಿಎಂ, ರೂ.೪,೩೦೦ ಕೋಟಿ ಶೇರ್ ಹೋಲ್ಡರ‍್ಸ್, ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದರು.  ಬ್ಯಾಂಕಿಂಗ್‌ನಲ್ಲಿ ತಂತ್ರಜ್ಞಾನ ಆವಿಷ್ಕಾರದ ಉತ್ಕೃಷ್ಟತೆಯನ್ನು ಸಾಧಿಸಿ, ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ನೀಡುವ ನೆಲೆಯಲ್ಲಿ ಬ್ಯಾಂಕು ಅಂತರ್ಜಾಲ ಸೇವಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು ಮನಿಕ್ಲಿಕ್ ಸೌಲಭ್ಯದ ಮೂಲಕ ಬಿಲ್ ಪಾವತಿ, ಹಣ ವರ್ಗಾವಣೆ ಎನ್. ಇ. ಎನ್ ಟಿ., ಆರ್. ಟಿ. ಜಿ. ಎಸ್. ಸವಲತ್ತಿನೊಂದಿಗೆ ಎಸ್. ಎಂ. ಎಸ್. ಬ್ಯಾಂಕಿಂಗ್ ಸೌಲಭ್ಯ ಸಹ ಲಭ್ಯವಾಗುತ್ತದೆ. ತನ್ಮೂಲಕ ಗ್ರಾಹಕರು ಕಚೇರಿಯಲ್ಲಿ ಅಥವಾ ಮನೆಯಲ್ಲಿಯೇ ಕುಳಿತು ಬ್ಯಾಂಕಿಂಗ್ ವ್ಯವಹಾರವನ್ನು ಸ್ವಯಂ ಶಕ್ತರಾಗಿ ಮಾಡಬಲ್ಲವರಾಗಿದ್ದಾರೆ. ತಮ್ಮ ಖಾತೆಗಳ ವಹಿವಾಟು ನಿರ್ವಹಿಸಲು ಎಸ್. ಎಂ. ಎಸ್. ಅಲರ್ಟ್ಸ್ ಸವಲತ್ತಿಗೂ ಗ್ರಾಹಕರು ಚಂದಾದಾರರಾಗಬಹುದು ಎಂದು ವಿವರಣೆ ನೀಡಿದರು. ಬಂಗಾರಡ್ಕ ರಾಮ್ ಭಟ್ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ.ಜಗನ್ನಿವಾಸ್ ರಾವ್ ಅನಿಸಿಕೆ ವ್ಯಕ್ತಪಡಿಸಿದರು. ಕಟ್ಟಡದ ಮಾಲಕ ವಾಸುದೇವ ಭಟ್‌ರವರನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಕೇಶವ ಪ್ರಾರ್ಥಿಸಿದರು. ಬ್ಯಾಂಕ್‌ನ ಎ.ಜಿ.ಎಂ. ನಾಗರಾಜ್ ಹೆಬ್ಬಾರ್ ಸ್ವಾಗತಿಸಿ, ಪುತ್ತೂರು ಕರ್ಣಾಟಕ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಶ್ರೀಹರಿ ವಂದಿಸಿದರು. ಆಶಾ ಜಿ ಕಾರ್ಯಕ್ರಮ ನಿರೂಪಿಸಿದರು. ಡಿಜಿಎಂ ನಿರ್ಮಲ್ ಕುಮಾರ್ ಜೈನ್, ಉಪ್ಪಿನಂಗಡಿ ಬ್ಯಾಂಕ್‌ನ ಮೆನೇಜರ್ ಗುಣವಂತ ಭಟ್, ಸುಳ್ಯ ಬ್ಯಾಂಕ್‌ನ ಶೈಲೇಶ್, ಮಂಗಳೂರಿನ ಶೋಭಾ ರಾವ್, ಶರತ್ ಹೊಳ್ಳ ಮತ್ತು ಪುತ್ತೂರಿನ ಅನೇಕ ಗ್ರಾಹಕ ಬಾಂಧವರು ಈ ಸಂದರ್ಭದಲ್ಲಿ ಬ್ಯಾಂಕ್‌ಗೆ ಆಗಮಿಸಿ ಶುಭ ಹಾರೈಸಿದರು. ಉಪಪ್ರಬಂಧಕರಾಗಿ ಪ್ರಮೋದ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕೆಬಿಎಲ್ ಸ್ಮಾರ್ಟ್ಸ್ ಮೊಬೈಲ್ ಆಪ್ ಮೊಬೈಲ್ ಬ್ಯಾಂಕಿಂಗ್ ಸೇವೆ 

ಮೊಬೈಲ್‌ನಲ್ಲಿ ಕರ್ಣಾಟಕ ಬ್ಯಾಂಕ್‌ನ ಆಪ್ ಡೌನ್ ಲೋಡ್ ಮಾಡಿ ಬಳಿಕ ಅದರ ಮೂಲಕ ವ್ಯವಹಾರ ನಡೆಸಿ. ಕ್ಷಣಮಾತ್ರದಲ್ಲೇ ನಿಮಗೆ ಹಣವನ್ನು ರವಾನೆ ಮತ್ತು ಇತರ ಬ್ಯಾಂಕಿಂಗ್ ವ್ಯವಹಾರ, ಉದ್ಯಮ ವ್ಯವಹಾರ ನಡೆಸಬಹುದು ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಮಹಾಬಲೇಶ್ವರ ಭಟ್ ಹೇಳಿದರಲ್ಲದೆ ಮಿನಿ ಇ-ಲಾಬಿಯೂ ಕ್ಯಾಶ್ ಡಿಪೋಸಿಟರ್ ಹಾಗೂ ಎಟಿಎಂ ಯಂತ್ರಗಳನ್ನು ಹೊಂದಿರುವ ಕೇಂದ್ರವಾಗಿದ್ದು ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದರು.

ಉಪಕೃತರಾದರೆ ಸ್ಮರಿಸುವಂತಿರಬೇಕು

ಬ್ಯಾಂಕ್‌ಗಳಲ್ಲಿ ಅದೆಷ್ಟೋ ಮಂದಿ ಸಾಲ ಪಡೆಯುತ್ತಾರೆ. ಅದರಿಂದ ತಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದಿದವರಿದ್ದಾರೆ. ಆದರೆ ಅವರು ತನ್ನ ಅಭಿವೃದ್ಧಿಗೆ ಕಾರಣಕ್ಕೆ ಉಪಕೃತ ಮಾಡಿದವರನ್ನು ನೆನೆಸುವುದು ಕರ್ತವ್ಯ. ಇಂತಹ ಕಾರ್ಯ ಗ್ರಾಹಕರು ಮಾಡಿದರೆ ಮುಂದೆ ಬ್ಯಾಂಕ್ ಇನ್ನೂ ಅಭಿವೃದ್ಧಿ ಮತ್ತು ಹೊಸ ಹೊಸ ಯೋಜನೆಗಳನ್ನು ತರಲು ಸಹಕಾರವಾಗಲಿದೆ ಎಂದು ಎಡನೀರು ಶ್ರೀಗಳು ಹೇಳಿದರು.

ಹಳ್ಳಿಗಳ ಕಡೆ ಬ್ಯಾಂಕ್

ಉತ್ತಮ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕರ್ಣಾಟಕ ಬ್ಯಾಂಕ್ ಮುಂದೆ ಹಳ್ಳಿಗಳ ಕಡೆ ಹೋಗಲಿದೆ. ಕೆಲವೊಂದು ಹಳ್ಳಿಗಳನ್ನು ಈಗಾಗಲೆ ಗುರುತಿಸಿಕೊಂಡಿದ್ದು ಅಲ್ಲಿ ಶಾಖೆ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಕೊಲ, ಗೋಳ್ತಮಜಲು, ಕೇಪು, ಇರಾ, ವಿಟ್ಲ, ಬಾಳೆಪುಣಿಯಲ್ಲಿ ಬ್ಯಾಂಕ್ ತನ್ನ ಶಾಖೆಯನ್ನು ತೆರಯಲಿದ್ದು ಆ ಮೂಲಕ ಕರ್ಣಾಟಕ ಬ್ಯಾಂಕ್ ಒಂದು ಬಲಿಷ್ಠ ಬ್ಯಾಂಕ್ ಆಗಿ ಫ್ಯಾಮಿಲಿ ಬ್ಯಾಂಕ್‌ನ ಪಂಚ್‌ಲೈನ್ ಹೊಂದಲಿದೆ ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಯರಾಮ ಭಟ್ ಹೇಳಿದರು.

whatsapp-image-2016-12-13-at-5-05-47-pm

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.