ಮೆಸ್ಕಾಂ ಮತ್ತು ಸುದ್ದಿ ಬಿಡುಗಡೆ ಬಗ್ಗೆಯ ಅಪಪ್ರಚಾರವನ್ನು ಖಂಡಿಸಬೇಕಲ್ಲವೇ? ಅಪಪ್ರಚಾರ ಮಾಡಿದವರನ್ನು ಗುರುತಿಸಿ, ಹುಡುಕಿ ಮನಃಪರಿವರ್ತಿಸಲು ಕರೆ

Puttur_Advt_NewsUnder_1
Puttur_Advt_NewsUnder_1
ಡಾ.ಯು.ಪಿ ಶಿವಾನಂದ ups@suddimahithi,.com
ಡಾ.ಯು.ಪಿ ಶಿವಾನಂದ
[email protected],.com

ವಾಟ್ಸಪ್, ಫೇಸ್ಬುಕ್‌ಗಳಲ್ಲಿ ’ಪುತ್ತೂರು ಸುದ್ದಿ ಬಿಡುಗಡೆ ಕಛೇರಿ ಮೇಲೆ ಮೆಸ್ಕಾಂ ಅಧಿಕಾರಿಗಳಿಂದ ಧಾಳಿ. ೧.೨೫ ಲಕ್ಷ ದಂಡ’ಎಂಬ ಶಿರೋನಾಮೆಯಡಿಯಲ್ಲಿ ಮೆಸ್ಕಾಂ ಸಂಸ್ಥೆ ಮತ್ತು ಸುದ್ದಿ ಬಿಡುಗಡೆ ಬಗ್ಗೆ ಬಂದ ಅವಹೇಳನಕಾರಿ ಸಂದೇಶವನ್ನು ವಿಚಾರಿಸಿ ಸತ್ಯಾಸತ್ಯತೆಯನ್ನು ತಿಳಿಯಲು ಸೋಮವಾರದ ಪತ್ರಿಕೆಯಲ್ಲಿ ಕರೆಕೊಟ್ಟಿದ್ದೇವೆ. ಅದರಲ್ಲಿ ಪ್ರಸ್ತಾಪಿತವಾದ ವಿಷಯ ಸರಿಯಾಗಿದ್ದರೆ ಪುತ್ತೂರಿನ ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ಸುದ್ದಿ ಬಿಡುಗಡೆಗೆ ಶಿಕ್ಷೆ ನೀಡುವುದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದೇವೆ. ಅದು ಅಪಪ್ರಚಾರವಾಗಿದ್ದರೆ ಸತ್ಯಾಂಶವನ್ನು ತಮಗೆ ರವಾನಿಸಿದವರಿಗೆ ತಿಳಿಸುವಂತೆ ಮಾಡಿ ಆ ಮೂಲಕ ಅಪಪ್ರಚಾರವನ್ನು ತಡೆಗಟ್ಟಬೇಕೆಂದು ವಿನಂತಿ ಮಾಡಿzವೆ. ಸಂದೇಶ ರವಾನಿಸಿದವರ ಉದ್ದೇಶವೇನೆಂದು ತಿಳಿಯಲು ಪ್ರಯತ್ನಿಸಬೇಕೆಂದು ಕೇಳಿಕೊಂಡಿzವೆ.

ಮೆಸ್ಕಾಂನವರು ತಪ್ಪು ಮಾಡದಿರುವಾಗ ಅಪಪ್ರಚಾರದಿಂದ ಜನತೆ ರಕ್ಷಿಸಬೇಕಲ್ಲವೇ?: ಮೆಸ್ಕಾಂ ಸರಕಾರದ ಒಂದು ಸಂಸ್ಥೆಯಾಗಿದ್ದು ಅದರಲ್ಲಿರುವ ಅಧಿಕಾರಿಗಳು ತಪ್ಪು ಮಾಡಿದ್ದರೆ ಅದನ್ನು ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ  ನಮ್ಮ ಊರಿನಲ್ಲಿರುವ ಎಲ್ಲರಿಗೂ ಪರಿಚಯವಿರುವ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳೊಡನೆ ವಿಚಾರಿಸದೆ, ಪರಿಶೀಲಿಸದೆ ಸತ್ಯಾಂಶವನ್ನು ತಿರುಚಿ ತಮ್ಮ ಸಂದೇಶದಲ್ಲಿ  ’30 ವರ್ಷ ಅಕ್ರಮವಾಗಿ ವಿದ್ಯುತ್ ಬಳಸಿದ್ದಕ್ಕೆ ಕೇವಲ 1.23 ಲಕ್ಷ ದಂಡ ಅತ್ಯಂತ ಕಡಿಮೆ. ಹೆಚ್ಚಿನ ದಂಡ ಬೀಳದಂತೆ ಅಧಿಕಾರಿಗಳ ಮೇಲೆ ಕಿಲಾಡಿ ಸಂಪಾದಕ ತನ್ನ ಪ್ರಭಾವ ಬಳಸಿರುವ ಶಂಕೆ ಇದೆ’ ಎಂದು ಅಪಪ್ರಚಾರ ಮಾಡಿರುವುದನ್ನು ವಿರೋಧಿಸುವುದು ಸಾರ್ವಜನಿಕರಾದ ನಮ್ಮೆಲ್ಲರ ಕರ್ತವ್ಯವಲ್ಲವೇ. ಮೆಸ್ಕಾಂ ಸಿಬ್ಬಂದಿಗಳ ಗೌರವಕ್ಕೆ ಹಾನಿ ಮಾತ್ರವಲ್ಲ ಸಾರ್ವಜನಿಕರ ಸೇವೆ ಮಾಡುವ ಆಸಕ್ತಿಯನ್ನು ಕುಂದಿಸುವವರನ್ನು ಗುರುತಿಸಿ ಅವರನ್ನು ಖಂಡಿಸಬೇಕಲ್ಲವೇ? ಮೆಸ್ಕಾಂ ಸಿಬ್ಬಂದಿಗಳು ತಪ್ಪು ಮಾಡದಿರುವಾಗ ಅವರ ರಕ್ಷಣೆಗೆ ಜನತೆ ನಿಲ್ಲದಿದ್ದರೆ ಅಂತಹ ಸಂದೇಶಗಳನ್ನು ಕಳುಹಿಸುವವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಿದಂತಾಗುವುದಿಲ್ಲವೇ.

ಅಪಪ್ರಚಾರ, ಬ್ಲ್ಯಾಕ್‌ಮೇಲ್‌ನಿಂದ ಕುಟುಂಬಗಳ ನಾಶವಾಗಬಹುದು, ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು: ಅಂತಹ ಅಪಪ್ರಚಾರದ, ಅವಹೇಳನದ ಸಂದೇಶದಿಂದ ಸುದ್ದಿ ಬಿಡುಗಡೆ ಬಳಗಕ್ಕೆ, ಅಭಿಮಾನಿಗಳಿಗೆ, ಓದುಗರಿಗೆ ಆಗಿರುವ ಮಾನಸಿಕ ಹಿಂಸೆ ನಿಮಗೆ ತಿಳಿದೇ ಇದೆ. ವಾಟ್ಸಪ್, ಫೇಸ್ಬುಕ್‌ಗಳ ಅಪಪ್ರಚಾರದಿಂದ ತೊಂದರೆಗೊಳಗಾದ ಬಹಳಷ್ಟು ಜನರು ಇಂದು ಸಮಾಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೇಸ್ ಆಗುವುದಿಲ್ಲ. ಆದುದರಿಂದ ಜನರು ಕೇಳಲು, ವಿಚಾರಿಸಲು ಹೆದರುತ್ತಾರೆ. ನೋವನ್ನು ಸಹಿಸಿಕೊಳ್ಳುತ್ತಾರೆ ಎಂಬುದೇ ಅಂತಹವರಿಗೆ ರಕ್ಷಣೆಯಾಗಿದೆ. ಮಾತ್ರವಲ್ಲ ತಮ್ಮ ಬ್ಲ್ಯಾಕ್‌ಮೇಲ್ ಕೆಲಸವನ್ನು ಜಾಸ್ತಿ ಮಾಡಲು ಪ್ರೋತ್ಸಾಹಕ್ಕೆ ಕಾರಣವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನಾಳೆ ನಮ್ಮ ನಿಮ್ಮಲ್ಲಿ ಯಾರ ಬಗ್ಗೆಯಾದರೂ, ನಿಮ್ಮ ಮನೆಯ ಮಹಿಳೆಯರ ಬಗ್ಗೆ, ಸಂಸ್ಥೆಯವರ ಬಗ್ಗೆಯಾದರೂ ಅಪಪ್ರಚಾರ ಬ್ಲ್ಯಾಕ್‌ಮೇಲ್ ಮಾಡಲು ಅವರು ಹಿಂಜರಿಯುವುದಿಲ್ಲ. ಆದುದರಿಂದ ವಾಟ್ಸಪ್, ಫೇಸ್ಬುಕ್‌ಗಳನ್ನು ಒಳಿತನ್ನು ಮಾಡಲು ಉಪಯೋಗಿಸದೆ ಅವಹೇಳನ ಬ್ಲ್ಯಾಕ್‌ಮೇಲ್ ಮಾಡುವವರನ್ನು ತಡೆಗಟ್ಟಲೇಬೇಕು. ಇಲ್ಲದಿದ್ದರೆ ಎಷ್ಟೋ ಸಂಸ್ಥೆಗಳು, ಕುಟುಂಬಗಳು, ವ್ಯಕ್ತಿಗಳು, ಮಹಿಳೆಯರು ನಾಶವಾಗಬಹುದು, ಸಮಾಜದಲ್ಲಿ ಗಲಭೆ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕಟೀಲು ದೇವಿಗೆ ಅಪಪ್ರಚಾರ ಮಾಡಿದವರ ಮೇಲೆ ಜನತೆಯ ಒತ್ತಡಕ್ಕೆ ಮಣಿದು ಕೇಸ್ ದಾಖಲಾಗಿದ್ದರೂ ಫೇಸ್‌ಬುಕ್‌ನಿಂದ ಸಾಕ್ಷ್ಯಾಧಾರ ದೊರಕದಿರುವುದರಿಂದ ಶಿಕ್ಷೆಯಾಗುವ ಸಾಧ್ಯತೆ ಕಡಿಮೆ, ಮಕ್ಕಳ ಸಾವನ್ನು ಸ್ವಾಗತಿಸಿದವರಿಗೆ ಶಿಕ್ಷೆಯಾಗಲಿಲ್ಲ. ಬದುಕಲು ರಕ್ತ ಬೇಕಾದವರನ್ನು ಅಪಹಾಸ್ಯ ಮಾಡಿದವರಿಗೆ ಶಿಕ್ಷೆಯಾಗಲಿಲ್ಲ. ಆದರೆ ಅವರ ಕೃತ್ಯದ ಬಗ್ಗೆ ಜನರು ಪ್ರತಿಭಟನೆ ಮಾಡಿದ್ದಾರೆ. ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇನ್ನು ಮುಂದೆ ಆ ರೀತಿ ಮಾಡಿದರೆ ತೊಂದರೆಯಾದೀತೆಂಬ ಸಂದೇಶ ನೀಡಿದ್ದಾರೆ. ಅದೇ ರೀತಿಯ ಪ್ರಯತ್ನ ಪುತ್ತೂರಿನಲ್ಲಿ ಆಗಬೇಕಾಗಿದೆ.

ಅಪಪ್ರಚಾರ ಮಾಡುವವರು ಪಶ್ಚಾತ್ತಾಪ ಪಡುವಂತಾಗಲಿ: ಆ ನಿಟ್ಟಿನಲ್ಲಿ ಪ್ರಾಯೋಗಿಕ ಪ್ರಯತ್ನವಾಗಿ ಮೆಸ್ಕಾಂ ಮತ್ತು ಸುದ್ದಿ ಬಿಡುಗಡೆಯ ಬಗ್ಗೆ ಅಪಪ್ರಚಾರದ ಸಂದೇಶ ಕಳುಹಿಸಿದವರನ್ನು ಗುರುತಿಸಿ ಖಂಡಿಸುವ ಕೆಲಸ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಅದಕ್ಕೆ ಬಹಳ ಸರಳವಾದ ವಿಧಾನವಿದೆ. ಅಂತಹ ಸಂದೇಶ ಸ್ವೀಕರಿಸಿದ ವ್ಯಕ್ತಿಗಳು, ಗ್ರೂಪ್‌ಗಳು ತಮಗೆ ಅಂತಹ ಸಂದೇಶ ಕಳುಹಿಸಿದವರನ್ನು ಗುರುತಿಸಿ ಅವರಿಗೆ ಸತ್ಯ ಸಂಗತಿಯನ್ನು ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಸಂದೇಶ ಕಳುಹಿಸಿದವರನ್ನು ಸಂಪರ್ಕಿಸಿ ಅವರಿಗೆ ಅದನ್ನು ಯಾರು ಕಳುಹಿಸಿದ್ದೆಂದು ತಿಳಿಯಲು ಹೇಳಬೇಕು. ಆ ರೀತಿ ಅವರವರಿಗೆ ಕಳುಹಿಸಿದ್ದು ಯಾರೆಂದು ಕೇಳುತ್ತಾ ಮೇಲೆ ಮೇಲೆ ಹೋದರೆ ಮೂಲ ಸಂದೇಶ ಕಳುಹಿಸಿದವರು ಸಿಕ್ಕೇ ಸಿಕ್ಕುತ್ತಾರೆ. ಆಗ ಅವರನ್ನು ಗುರುತಿಸಿ ಅವರ ಉzಶವನ್ನು ಕೇಳಬಹುದು. ಅವರಿಗೆ ಶಿಕ್ಷೆಯಂತೂ ಆಗುವುದಿಲ್ಲ. ಆದರೆ ಅವರು ಒಂದೋ ಸಮರ್ಥನೆ ನೀಡಲಿ ಇಲ್ಲದಿದ್ದರೆ ತಮ್ಮ ಕೆಲಸಕ್ಕೆ ಪಶ್ಚಾತ್ತಾಪ ಪಟ್ಟು ತಪ್ಪು ಒಪ್ಪಿಕೊಳ್ಳುವಂತೆ ಮಾಡಬಹುದು. ಅದು ಸಾಧ್ಯವಾಗದಿದ್ದರೆ ಅವರ ಬಗ್ಗೆ ಎಚ್ಚರಿಕೆಯನ್ನು ಸಮಾಜಕ್ಕೆ ನೀಡಿ ಅವರಿಂದಾಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು. ಈ ಪ್ರಕರಣದಲ್ಲಿ ಈ ಸರಳ ವಿಧಾನವನ್ನು ಉಪಯೋಗಿಸಿ ಮೆಸ್ಕಾಂ ಮತ್ತು ಸುದ್ದಿ ಬಿಡುಗಡೆ ಮೇಲಿನ ಅಪಪ್ರಚಾರವನ್ನು ನಿವಾರಿಸಿ ಅದಕ್ಕೆ ಕಾರಣಕರ್ತರಾದವರನ್ನು ಗುರುತಿಸಿ ಇನ್ನು ಮುಂದೆ ಆ ರೀತಿ ಮಾಡದಂತೆ ಅವರ ಮನಸ್ಸನ್ನು ಪರಿವರ್ತಿಸಲು ಸಹಾಯ ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಈ ಮೇಲೆ ಹೇಳಿದ ರೀತಿಯಲ್ಲಿ ಮಾಡಿದರೆ ಇನ್ನು ಮುಂದೆ ಅಪಪ್ರಚಾರ ಮಾಡುವವರಿಗೆ ಸಮರ್ಥನೆ ದೊರಕುವುದಿಲ್ಲ. ಅದನ್ನು ರವಾನೆ ಮಾಡಲು ಧೈರ್ಯ ಬರುವುದಿಲ್ಲ. ಒಂದು ವೇಳೆ ಮಾಡಿದರೆ ಸಿಕ್ಕಿಬೀಳುತ್ತೇವೆ ಮತ್ತು ಸಮಾಜ ಅದನ್ನು ಸಹಿಸುವುದಿಲ್ಲ ಎಂಬ ಹೆದರಿಕೆ ಉಂಟಾಗುವುದು ಸಹಜ. ಜನತೆ ಕೂಡಾ ಯಾವುದೇ ಸಂದೇಶವನ್ನು ನೋಡಿದಾಗ ಅದು ಅಪಪ್ರಚಾರದ ಸಂದೇಶವಾಗಿದೆಯೇ ಎಂಬ ಸಂಶಯವಿದ್ದರೆ ಅದನ್ನು ವಿಚಾರಿಸಿ ನೋಡುವುದು ಮತ್ತು ತಮಗೆ ಆ ಸಂದೇಶ ಕಳುಹಿಸಿದವರೊಡನೆಯೂ ವಿಚಾರಿಸಿದರೆ ಅಂತಹ ಅಪಪ್ರಚಾರದ ಸಂದೇಶ ರವಾನೆಯಾಗುವುದನ್ನು ತಡೆಯಬಹುದೆಂದು ಆ ಮೂಲಕ ಜನತೆಗೆ, ಸಮಾಜಕ್ಕೆ ಆಗುವ ನೋವನ್ನು, ತೊಂದರೆಯನ್ನು ಕಡಿಮೆ ಮಾಡಬಹುದೆಂದು ಹೇಳಲು ಇಚ್ಛಿಸುತ್ತೇನೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.