ಮೊಟ್ಟೆತಡ್ಕ ಕೊರಗಜ್ಜ, ಅಗ್ನಿ ಕಲ್ಲುರ್ಟಿ ಕ್ಷೇತ್ರದಲ್ಲಿ ನಾಳೆ ತಿಂಗಳ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1

 

mottethadka-1ಪುತ್ತೂರು: ಕಲೆ, ಕಾರಣಿಕಗಳಿಂದ ಪ್ರಸಿದ್ಧವಾಗಿರುವ, ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ಮಜಲು ಶ್ರೀ ಕೊರಗಜ್ಜ ಅಗ್ನಿಕಲ್ಲುರ್ಟಿ ಕ್ಷೇತ್ರದಲ್ಲಿ ಕೊರಗಜ್ಜ ಮತ್ತು ಅಗ್ನಿ ಕಲ್ಲುರ್ಟಿ ದೈವಗಳ ತಿಂಗಳ ನೇಮೋತ್ಸವವು ದ.15ರಂದು ರಾತ್ರಿ ನಡೆಯಲಿದೆ.

ಸಂಜೆ ಅಗ್ನಿ ಕಲ್ಲುರ್ಟಿ ನೇಮ ನಡೆದ ಬಳಿಕ ರಾತ್ರಿ ಕೊರಗಜ್ಜ ನೇಮ, ಅಗೇಲು ಸೇವೆ ನಡೆದು ಪ್ರಸಾದ ವಿತರಣೆಯಾಗಲಿದೆ.ಬಳಿಕ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ.ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕ್ಷೇತ್ರದ ದರ್ಶಿ ಮಣಿ ಕೆ.ತಿಳಿಸಿದ್ದಾರೆ.ಕ್ಷೇತ್ರದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಮತ್ತು ರವಿವಾರ ಪ್ರಶ್ನಾ ಚಿಂತನೆ ಮೂಲಕ ಜನರ ಕಷ್ಟ ಕಾರ್ಪಣ್ಯ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶವೂ ಇದೆ ಎಂದವರು ಹೇಳಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.