ಉಪ್ಪಿನಂಗಡಿ: ಬಸ್‌ನಿಲ್ದಾಣದಲ್ಲಿ ವೃದ್ಧೆ ಶವ ಪತ್ತೆ

Puttur_Advt_NewsUnder_1
Puttur_Advt_NewsUnder_1

vrudhe

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್‌ನಿಂದ ಕೊಡುಗೆಯಾಗಿ ನೀಡಿದ್ದ ಶಿಶುಗಳಿಗೆ ಹಾಲುಣಿಸುವ ಕೊಠಡಿಯಲ್ಲಿ ವೃದ್ದೆಯೊಬ್ಬರ ಶವ ದ.13ರಂದು ಪತ್ತೆಯಾಗಿದೆ.

ಕಳೆದ ಕೆಲ ದಿನಗಳಿಂದ ಮಹಿಳೆ ಬಸ್ ನಿಲ್ದಾಣದಲ್ಲಿ ಸುತ್ತಾಡಿಕೊಂಡಿದ್ದು ರಾತ್ರಿ ವೇಳೆ ಬಸ್ ನಿಲ್ದಾಣದಲ್ಲೇ ಮಲಗುತ್ತಿದ್ದರು. ದ.13ರಂದು ಮಧ್ಯಾಹ್ನದ ವೇಳೆಗೆ ಇವರು ಬಸ್ ನಿಲ್ದಾಣದಲ್ಲಿ ಮಲಗಿದ್ದ ರೀತಿಯಲ್ಲಿಯೇ ಮೃತಪಟ್ಟಿದ್ದರು. ಆಕೆಯ ಬಳಿ ಇದ್ದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಔಷಧಿಗಳು, ಎಣ್ಣೆ, ಮೊದಲಾದ ವಸ್ತುಗಳಿದ್ದು, ಒಂದಷ್ಟು ನಗದು ಹಣವೂ ಇತ್ತು. ವೃದ್ದೆಯ ಮೃತದೇಹವನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಯಾರಾದರೂ ವಾರಿಸುದಾರರು ಕಂಡುಬಂದಲ್ಲಿ ತಕ್ಷಣವೇ ಉಪ್ಪಿನಂಗಡಿ ಪೊಲೀಸ್ ಠಾಣೆ ( ೦೮೨೫೧-೨೫೧೦೫೫) ಯನ್ನು ಸಂಪರ್ಕಿಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.