ಪುಣಚ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ಮೂಲ್ಯ ನಿಧನ

Puttur_Advt_NewsUnder_1
Puttur_Advt_NewsUnder_1

punachaಪುಣಚ: ಪುಣಚ ಗ್ರಾಮದ ಪಟಿಕಲ್ಲು ನಿವಾಸಿ ವಿಶ್ವನಾಥ ಮೂಲ್ಯ (46ವ.) ಅಸೌಖ್ಯದಿಂದಾಗಿ ಮಂಗಳವಾರ ಮಂಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಇವರು ಪುಣಚ ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷರಾಗಿ, ಅಜ್ಜಿನಡ್ಕ ಭಜನಾ ಮಂದಿರದಲ್ಲಿನ ಸಕ್ರೀಯ ಕಾರ್ಯಕರ್ತರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಜ್ಜಿನಡ್ಕ ಒಕ್ಕೂಟದ ಮಾಜಿ ಉಪಾಧ್ಯಕ್ಷರಾಗಿ, ಸಮಾಜದ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡವರಾಗಿದ್ದರು.

ಗಣ್ಯರ ಭೇಟಿ: ಮೃತರ ಮನೆಗೆ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಯಸ್.ಆರ್.ರಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಕ್ಷೇತ್ರ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪಕ್ಷದ ಹಿರಿಯರಾದ ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ ಬಪ್ಪಳಿಗೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಜಯಶ್ರೀ ಕೋಡಂದೂರು, ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಸದಸ್ಯೆ ಕವಿತಾ ಸುಬ್ಬನಾಯ್ಕ, ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಸದಸ್ಯರಾದ ಉದಯಕುಮಾರ್ ದಂಬೆ, ಲಲಿತ ಅಜ್ಜಿನಡ್ಕ, ನಾರಾಯಣ ನಾಯ್ಕ, ಪುಣಚ ಬಿ.ಜೆ.ಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಹರೀಶ್ ಯಂ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪ್ರಭು, ಜಯಶ್ಯಾಂ ನೀರ್ಕಜೆ, ರಾಮಕೃಷ್ಣ ಬಿ ಮೂಡಂಬೈಲು, ಜಗದೀಶ ಮಾರಮಜಲು, ಗುರುವಪ್ಪ ಡಿ, ಜಗದೀಶ ಯಂ., ನಾರಾಯಣ ಮೂಲ್ಯ ಮುಂತಾದ ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು.

ಮೃತರು ತಾಯಿ ಸಾವಿತ್ರಿ, ಪತ್ನಿ ಬೇಬಿ ಮತ್ತು ಮಕ್ಕಳಾದ ಹಿತೇಶ್, ಕಾರ್ತಿಕ್, ಮಿಥುನ್‌ರವರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.