Breaking News

ಮಾಣಿ: ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ತಟ್ಟಿಯಂಗಡಿ, ಮರಕ್ಕೆ ಡಿಕ್ಕಿಹೊಡೆದ ಬಸ್ಸು

Puttur_Advt_NewsUnder_1
Puttur_Advt_NewsUnder_1

mani

ವಿಟ್ಲ: ಖಾಸಗಿ ಬಸ್ಸೊಂದು ರಸ್ತೆ ಬದಿಯ ತಟ್ಟಿ ಅಂಗಡಿಗೆ ಡಿಕ್ಕಿ ಹೊಡೆದು ಬಳಿಕ ಸಮೀಪದಲ್ಲಿದ್ದ ಮರಕ್ಕೆ ಡಿಕ್ಕಿಹೊಡೆದ ಘಟನೆ ಡಿ.13ರಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಮಾಣಿ ಜಂಕ್ಷನ್‌ನಲ್ಲಿ ನಿಂತಿದ್ದ ಲಾರಿಯೊಂದರ ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ಲಾರಿಯನ್ನು ಹಿಂದಕ್ಕೆ ತೆಗೆದಿದ್ದು, ಈ ವೇಳೆ ಹಿಂಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಬಂದಿದ್ದು ಅದರ ಚಾಲಕ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ರಸ್ತೆಯ ಬಲಭಾಗದಲ್ಲಿದ್ದ ಯಾಕೂಬ್‌ರವರ ತಟ್ಟಿಯಂಗಡಿಗೆ ಡಿಕ್ಕಿಯಾಗಿ ಬಳಿಕ ಎದುರಿನಲ್ಲಿದ್ದ ಮರವೊಂದಕ್ಕೆ ಡಿಕ್ಕಿಯಾಗಿದೆ. ಇದರಿಂದಾಗಿ ಬಸ್ಸಿನ ಮುಂಭಾಗ ಹಾಗು ತಟ್ಟಿಯಂಗಡಿಗೆ ಹಾನಿಯಾಗಿದೆ. ಘಟನೆಯಿಂದ ಉಪ್ಪಿನಂಗಡಿ ಬಳಿಯ ಇಳಂತಿಲ ನಿವಾಸಿ ರಾಮಕೃಷ್ಣ(36.ವ)ರವರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಕೇಸು ದಾಖಲಾಗಿಲ್ಲ ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.