34 ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಸುಂದರ ಗೌಡ ನಿಧನ

Puttur_Advt_NewsUnder_1
Puttur_Advt_NewsUnder_1

nekkiladyಉಪ್ಪಿನಂಗಡಿ: 34 ನೇ ನೆಕ್ಕಿಲಾಡಿ ಗ್ರಾಮದ ಕನಡಾರು ನಿವಾಸಿ, 34 ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಸುಂದರ ಗೌಡ ಎಂ.ಕೆ(38ವ)ರವರು ಮೆದುಳಿನ ರಕ್ತಸ್ರಾವದಿಂದ ಮಂಗಳೂರಿನ ಪಡೀಲ್ ಬಳಿ ಇರುವ ಫಸ್ಟ್‌ನ್ಯೂರೋ ಆಸ್ಪತ್ರೆಯಲ್ಲಿ ದ.13ರಂದು ಮುಂಜಾನೆ ನಿಧನರಾದರು.

ದ.11ರಂದು ರಾತ್ರಿ ವೇಳೆ ಮನೆಯಲ್ಲಿ ಕುಸಿದ ಬಿದ್ದ ಇವರನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಡೀಲ್ ಬಳಿ ಇರುವ ಫಸ್ಟ್‌ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆಫಲಕಾರಿಯಾಗದೇ ದ.೧೩ರಂದು ಮುಂಜಾನೆ ನಿಧನರಾದರು. ಮೃತರು ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದು, ಅಂಬೆಲ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇದಲ್ಲದೇ ವಿವಿಧ ಸಂಘಟನೆಗಳಲ್ಲೂ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಮೃತರು ತಾಯಿ ಜಯಂತಿ, ಪತ್ನಿ ಗೀತಾ, ಮಗಳು ಸುದೀಕ್ಷಾ, ಸಹೋದರರಾದ ಗೋಪಾಲಕೃಷ್ಣ ಎಂ.ಕೆ, ಬಾಲಚಂದ್ರ ಎಂ.ಕೆ, ಸುರೇಶ್ ಎಂ.ಕೆ, ಸಹೋದರರಿಯರಾದ ರೋಹಿಣಿ, ಕಲಾವತಿ, ಅಶ್ವಿನಿಯವರನ್ನು ಅಗಲಿದ್ದಾರೆ.

ಮೃತರ ಮನೆಗೆ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯೆ ಸುಜಾತ ಆಚಾರ್ಯ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ತಾಲೂಕು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ ರೈ, ತಾಲೂಕು ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಸುನೀಲ್ ದಡ್ಡು, ಜಿ.ಪಂ.ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ತಾ.ಪಂ.ಮಾಜಿ ಸದಸ್ಯ ಉಮೇಶ್ ಶೆಣೈ, ಉಪ್ಪಿನಂಗಡಿ ಸಿಎ ಬ್ಯಾಂಕ್ ನಿರ್ದೇಶಕಿ ಸುಜಾತ ರೈ ಅಲಿಮಾರ, ಯತೀಶ್ ಶೆಟ್ಟಿ ಸುವ್ಯ, ೩೪ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆಸ್ಕರ್ ಆಲಿ, ಮಾಜಿ ಅಧ್ಯಕ್ಷೆ ಅಮಿತಾ ಹರೀಶ್, ಮಾಜಿ ಸದಸ್ಯ ಕಿಶೋರ್ ಕೊಳಕ್ಕೆ, ಕೋಡಿಂಬಾಡಿ ಗ್ರಾ.ಪಂ. ಸದಸ್ಯರಾದ ರಾಮಚಂದ್ರ, ಬಾಬು ಗೌಡ ಭಂಡಾರದ ಮನೆ, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯ ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ರಾಜಗೋಪಾಲ ಹೆಗ್ಡೆ, ಎ.ಪಿ.ಎಂಸಿ ನಿರ್ದೆಶಕ ಗುರುನಾಥ್ ಪಿ.ಎನ್, ಜಯಾನಂದ.ಕೆ, ೩೪ ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ರಾಧಾಕೃಷ್ಣ ರೈ ಅಲಿಮಾರ, ವಿಜಯಕುಮಾರ್, ಪದ್ಮಯ್ಯ ಗೌಡ, ರಾಜೀವ ಪೂಜಾರಿ, ಕಾರ್ಯದರ್ಶಿ ರಾಜೇಶ್ ನಾಯಕ್, ಉಪ್ಪಿನಂಗಡಿ ಕಾಳಿಕಾಂಬ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಹರೀಶ್ ನಾಯಕ್ ನಟ್ಟಿಬೈಲು, ರಾಜೇಶ್ ರಾವ್ ಶಾಂತಿನಗರ, ಕೆ.ಎನ್ ಸದಾನಂದ ಕಾರ್‌ಕ್ಲಬ್, ಆದರ್ಶ ಕಜೆಕ್ಕಾರು, ಅಂಬೆಲ ಪಂಜುರ್ಲಿ-ಕಲ್ಕುಡ ದೈವಸ್ಥಾನ ಸಮಿತಿ ಅಧ್ಯಕ್ಷ ಕುಶಾಲ ಗೌಡ ನೆಕ್ಕಿಲಾಡಿ ಗುತ್ತು, ಸದಸ್ಯ ರಮೇಶ್ ಗೌಡ ಬೇರಿಕೆ, ಜಯಕುಮಾರ್ ಜೈನ್, ಆನಂದ ಕೊಳಕ್ಕೆ, ನಾರಾಯಣ ಗೌಡ ನೆಕ್ಕಿಲಾಡಿ ಗುತ್ತು ಸೇರಿದಂತೆ ಅನೇಕರು ಮೃತರ ಮನೆಗೆ ಭೇಟಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.