ಒಡಿಯೂರು ಸಂಸ್ಥಾನದಲ್ಲಿ ದತ್ತಜಯಂತ್ಯುತ್ಸವ, ದತ್ತ ಮಹಾಯಾಗ ಸಪ್ತಾಹ ಸಮಾಪ್ತಿ, ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1

odiyooru*ಹಾದಿ ತಪ್ಪುವ ಯುವ ಶಕ್ತಿಗಳನ್ನು ಸರಿದಾರಿಗೆ ತರುವಲ್ಲಿ  ಧಾರ್ಮಿಕ ಶ್ರದ್ಧಾಕೇಂದ್ರಗಳ ಪಾತ್ರ ಮಹತ್ವದ್ದು: ಮಾಣಿಲ ಶ್ರೀ

*ಯುವ ಪೀಳಿಗೆಯನ್ನು ಒಗ್ಗೂಡಿಸುವ ಕಾರ್ಯ  ಕ್ಷೇತ್ರದಿಂದಾಗುತ್ತಿದೆ : ಶೇಣವ

ವಿಟ್ಲ: ಮನುಷ್ಯನ ಮನಸ್ಸು ಕಲ್ಮಶವಾಗಿದ್ದರೆ ಭಗವಂತ ನೆಲೆಸಲು ಸಾಧ್ಯವಿಲ್ಲ.ಬದುಕು ಬಲೆಯಾಗದೆ ಕಲೆಯಾಗ ಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಡಿ.13ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ದತ್ತಜಯಂತ್ಯುತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದತ್ತ ಜಯಂತಿಗೂ ನಿತ್ಯಾನಂದರಿಗೂ ಸಂಬಂಧವಿದೆ. ಭಗವಾನ್ ದತ್ತಾತ್ರೇಯ ಆತ್ಮ ನಿಷ್ಠ ಸಂಸ್ಕೃತಿಯನ್ನು ಸಮಾಜಕ್ಕೆ ತಿಳಿಸಿದವರು. ಭಾರತ ದೇಶದ ಮಹತ್ವ ಆಧ್ಯಾತ್ಮಕವಾಗಿರುವುದರಿಂದ ದೇಶಕ್ಕೆ ವಿಶೇಷ ಶಕ್ತಿ ಇದೆ. ಎತ್ತಿನ ಹೊಳೆ ಯೋಜನೆ ಕರಾವಳಿಯನ್ನು ಬತ್ತಿಸುವ ಯೋಜನೆ, ಸಾಧ್ಯವಾದರೆ ಸಮುದ್ರದ ನೀರನ್ನು ಶುದ್ಧೀಕರಿಸಿ ತೆಗೆದುಕೊಂಡು ಹೋಗುವ ಯೋಜನೆಯನ್ನು ಸರಕಾರ ಮಾಡಲಿ. ಇಲ್ಲವಾದಲ್ಲಿ ಎತ್ತಿನ ಹೊಳೆ ಯೋಜನೆ ಕರಾವಳಿಯನ್ನು ಬತ್ತಿಸುವ ಯೋಜನೆಯಾಗಲಿದೆ. ಹೋರಾಟದ ಮನೋಭಾವ ಜನಪರವಾಗಿ ಹೋದಾಗ ಯಶಸ್ಸು ಲಭಿಸುತ್ತದೆ. ಜೀವನದ ಮೌಲ್ಯವನ್ನು ಬದುಕಿನಲ್ಲಿ ರೂಢಿಸಿಕೊಂಡು ಆತ್ಮೋನ್ನತಿಯ ಕಡೆಗೆ ಸಾಗುವ ಕಾರ್ಯವಾಗಬೇಕು. ಗೋ ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರವನ್ನು ಎಚ್ಚರಗೊಳಿಸುವ ಕಾರ್ಯವಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಹಾದಿ ತಪ್ಪುವ ಯುವ ಶಕ್ತಿಗಳಿಗೆ  ಆದ್ಯಾತ್ಮಿಕ ಸಿಂಚನ ನೀಡಿ ಅವರನ್ನು ಸರಿ ದಾರಿಗೆ ತರುವಲ್ಲಿ ಧಾರ್ಮಿಕ ಶೃದ್ಧಾಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಜಾಗದಲ್ಲಿ ಗುರುಸೇವೆ ಮೂಲಕ ಮಂತ್ರಾಕ್ಷತೆ ಪಡೆದರೆ ಜೀವನದಲ್ಲಿ ಮಾಡಿದ ಪಾಪ ಕಾರ್ಯವನ್ನು ಕಳೆಯಬಹುದಾಗಿದೆ. ಆಧ್ಯಾತ್ಮದ ಧೀಶಕ್ತಿ ಮನೆಮನದಲ್ಲಿ ಬೆಳಗಿದಾಗ ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪುತ್ತದೆ. ಸಂತ ಸ್ವಾಮೀಜಿಗಳಿಗೆ ಸಂಪತ್ತಿನ ಆಸೆಯಿಲ್ಲ. ಸ್ವಾಮೀಜಿಗಳಿಗೆ ಲೋಕವೇ ಸಂಪತ್ತು ಎಂದು ಹೇಳಿದರು.

ದ.ಕ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಜಗದೀಶ ಶೇಣವರವರು ಮಾತನಾಡಿ ಸಣ್ಣ ಮಕ್ಕಳಿರುವಾಗಲೆ ಅವರಿಗೆ ಧರ್ಮ, ಸಮಾಜದ ಬಗ್ಗೆ ಗೌರವ ಹುಟ್ಟಿಸಿದರೆ ದೊಡ್ಡವರಾದ ಮೇಲೆ ಧರ್ಮ ಸಮಾಜದ ಕೆಲಸಗಳಿಲ್ಲಿ ಭಾಗಿಯಾಗುತ್ತಾರೆ. ಯುವ ಪೀಳಿಗೆಯನ್ನು ಒಗ್ಗೂಡಿಸುವ ಕಾರ್ಯ ಕ್ಷೇತ್ರದ ಸ್ವಾಮೀಜಿಯವರಿಂದ ಆಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ’೨೦೧೭ ದಿನದರ್ಶಿಕೆ’ ಎಂಬ ಕಿರುಹೊತ್ತಗೆ ಬಿಡುಗಡೆ ಹಾಗು ಮಂಗಳೂರು ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ದಿ. ಬೋಳಾರ ನಾರಾಯಣ ಶೆಟ್ಟಿ ಜನ್ಮ ಶತಮಾನೋತ್ಸವದ ಸವಿನೆನಪಿನಲ್ಲಿ ಬೋಳಾರ ನಾರಾಯಣ ಶೆಟ್ಟಿ ೧೬ನೇ ವರ್ಷದ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಶೀನಪ್ಪ ರೈ ಸಂಪಾಜೆಯವರಿಗೆ ಪ್ರದಾನ ಮಾಡಲಾಯಿತು.

 ಮುಂಬೈ ಗುರುದೇವ ಸೇವಾಬಳಗದ ಅಧ್ಯಕ್ಷ ಕೃಷ್ಣ ಎಲ್ ಶೆಟ್ಟಿ, ಮುಂಬೈ ನೇರೋಲ್ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಕಿಶೋರ್ ಕುಮಾರ್ ಎಂ ಶೆಟ್ಟಿ, ದೋಹಾ ಕತಾರ್‌ನ ಬೋಳಾರ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಸಂಚಾಲಕ ಟಿ. ತಾರನಾಥ ಕೊಟ್ಟಾರಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿರೂಪಿಸಿದರು. ಕದ್ರಿ ನವನೀತ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ದಿನಕರ ಶೆಟ್ಟಿ ಪ್ರಶಸ್ತಿ ಪತ್ರ ವಾಚಿಸಿದರು. ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಯೋಜನೆ ಮೇಲ್ವಿಚಾರಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ಕನ್ಯಾನ ಮುಗುಳಿ ರಸ್ತೆಯ ಮುಖ್ಯದ್ವಾರದಿಂದ ಒಡಿಯೂರು ಕ್ಷೇತ್ರದವರೆಗೆ ನಾಮಸಂಕೀರ್ತನಾ ಯಾತ್ರೆ ನಡೆಯಿತು. ಬಳಿಕ ಗುರುಚರಿತ್ರೆ-ವೇದ ಪಾರಾಯಣ ಸಮಾಪ್ತಿ, ದತ್ತಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ದತ್ತ ಸಂಪ್ರದಾಯದಂತೆ ಮಧುಕರೀ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.