ವಿಶ್ವ ತುಳು ಆಯನೋದಲ್ಲಿ ’ಅಪ್ಪೆನ ತ್ಯಾಗ’ ಕಿರುನಾಟಕ ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

appena-tyago-1ಪುತ್ತೂರು: ಡಿ.9ರಿಂದ ಡಿ.13 ರವರೆಗೆ ಬದಿಯಡ್ಕದಲ್ಲಿ ನಡೆದ ವಿಶ್ವ ತುಳು ಆಯನೋ ಕಾರ‍್ಯಕ್ರಮದಲ್ಲಿ ಅನಿವಾಸಿ ಭಾರತೀಯ ಕಲಾವಿದರಿಂದ ’ಅಪ್ಪೆನ ತ್ಯಾಗ ’ ಎನ್ನುವ ತುಳು ಕಿರುನಾಟಕ ಪ್ರದರ್ಶನಗೊಂಡಿತು.

ಅನಿವಾಸಿ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರು ರಚಿಸಿ, ನಿರ್ದೇಶನದ ಜೊತೆಗೆ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಈ ಕಿರುನಾಟಕದಲ್ಲಿ ತಾಯಿಯ ಪ್ರೀತಿ ಮತ್ತು ತ್ಯಾಗ ಎಷ್ಟೊಂದು ಶ್ರೇಷ್ಠ ಎನ್ನುವುದು ಸಮಾಜಕ್ಕೆ ತೋರಿಸಿಕೊಡುವ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಈಗಾಗಲೇ ದುಬೈ ಮತ್ತು ಅಬುದಾಬಿಯಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಜಯರಾಮ ರೈ ಸೇರಿದಂತೆ ಸುವರ್ಣ ಸತೀಶ್, ಸಂಪತ್ ಶೆಟ್ಟಿ, ಸುರೇಖಾ ಶೆಟ್ಟಿ ಮೊದಲಾದ ಯುಎಇ ಕಲಾವಿದರು ಪಾತ್ರ ವಹಿಸಿದ್ದಾರೆ. ವಿಶ್ವ ತುಳು ಆಯನೋದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಇದೇ ಸಂದರ್ಭದಲ್ಲಿ ಕಲಾವಿದರೆಲ್ಲರನ್ನು ಗೌರವಿಸಿ ತುಳು ಭಾಷೆಯ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.