Breaking News

ಕಬಕ: ಮಿಲಾದ್ ಸಮಾವೇಶ-ಅಂತರ್ ರಾಜ್ಯಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ-ಮಿಲಾದ್ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1

kabaka-milad1-1kabaka-milad2-1 ಪುತ್ತೂರು: ಈದ್ ಮಿಲಾದ್ ಸಮಿತಿ ಕಬಕ ವಲಯ ಇದರ ಆಶ್ರಯದಲ್ಲಿ ನಬಿ(ಸ.ಅ.) ಜನ್ಮದಿನಾಚರಣೆ ಪ್ರಯುಕ್ತ ಮಿಲಾದ್ ಸಮಾವೇಶ, ಬೃಹತ್ ತಾಲೀಮು ಪ್ರದರ್ಶನ, ಅಂತರ್‌ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ ಹಾಗೂ ಮಿಲಾದ್ ಮೆರವಣಿಗೆಯು ದ.12ರಂದು ಕಬಕ ಜಂಕ್ಷನ್ ಬಳಿ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯದ್ ಎ.ಪಿ.ಎಸ್. ಮುಹಮ್ಮದ್ ತಂಙಳ್ ಕಬಕರವರು ವಹಿಸಿದ್ದರು. ಕಬಕ ಮುದರ್ರಿಸ್ ಮುಹಮ್ಮದ್ ಮದನಿ ದುವಾ ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಬಕ ಸದರ್ ಮುಅಲ್ಲಿಂ ಅಬ್ದುಲ್  ರಹಿಮಾನ್ ಸಖಾಫಿರವರು ನೆರವೇರಿಸಿ ಮಾತನಾಡಿ, ಮುಹಮ್ಮದ್ ಪೈಗಂಬರರ ತತ್ವಾದರ್ಶಗಳು, ಅವರು ತೋರಿದ ಶಾಂತಿ, ಸಹನೆ, ಸಹಬಾಳ್ವೆ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರ ಒಂದೊಂದು ನುಡಿಮುತ್ತುಗಳು ನಮ್ಮ ಜೀವನ ಪಾವನಕ್ಕೆ ಸಹಕಾರಿಯಾಗಿದೆ ಎಂದರು.

ಪೈಯ್ಯನ್ನೂರು ಜಾಮಿಯ ಅಝ್ ಹರಿಯಾ ಅರೆಬಿಕ್ ಕಾಲೇಜು ಇದರ ಪ್ರಾಂಶುಪಾಲ ಶೇಖ್ ಮುಹಮ್ಮದ್ ಇರ್ಫಾನಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮುಹಮ್ಮದ್ ಪೈಗಂಬರ್‌ರವರು ಬೋಧಿಸಿದ ಶಾಂತಿ ಮತ್ತು ಸಮಾಧಾನ ಧರ್ಮವೇ ಇಸ್ಲಾಂ ಆಗಿದ್ದು, ಇದು ಮಾನವರಲ್ಲಿ ಸಮಾನತೆ, ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಶುದ್ಧತೆ, ಬಡವರಿಗೆ ದಾನ, ಪ್ರಾರ್ಥನೆಗೆ ಮಹತ್ವ ಮತ್ತಿತರ ಉನ್ನತ ಮೌಲ್ಯಗಳನ್ನು ಸಾರುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಬಕ ಈದ್ ಮಿಲಾದ್ ಸಮಿತಿಯ ಗೌರವಾಧ್ಯಕ್ಷ ಇಸ್ಮಾಯಿಲ್ ಪೋಳ್ಯ ಬ್ರೈಟ್ ಅಧ್ಯಕ್ಷ ರಿಯಾಝ್ ಬ್ರೈಟ್, ಅಬ್ದುಲ್ ಅಝೀಝ್ ಕಬಕ, ಕಬಕ ಯೂತ್ ಫ್ರೆಂಡ್ಸ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಆರ್.ಪಿ., ದ.ಕ. ಹಾಗೂ ಉಡುಪಿ ಜಿಲ್ಲಾ ದಫ್ ಅಸೋಸಿಯೇಶನ್ ಅಧ್ಯಕ್ಷ ಲತೀಫ್ ವಾರ್ತಾ ಭಾರತಿ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ಉದ್ಯಮಿ ಇಬ್ರಾಹಿಂ ಮದುರ, ಉದ್ಯಮಿ ಮುನೀರ್ ಕಬಕ, ಉದ್ಯಮಿ ಸಯ್ಯದ್ ಕಬಕ, ಕಬಕ ಮಿಲಾದ್ ಸಮಿತಿಯ ಸಂಚಾಲಕ ಎಂ.ಪಿ. ಉಮ್ಮರ್ ಮಲ್ನಾಡ್, ಕಂಬಳಬೆಟ್ಟು ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್, ಉದ್ಯಮಿ ರಫೀಕ್ ಅಹಮ್ಮದ್ ಬ್ರೈಟ್ ಪೋಳ್ಯ, ಉದ್ಯಮಿ ಹಂಝ ತಾಜ್‌ಮಹಲ್ ಕಬಕ, ಉದ್ಯಮಿ ಮೊದೀನ್ ಹಾಜಿ ಕಂಬಳಬೆಟ್ಟು, ಉದ್ಯಮಿ ಜುಬೈರ್ ಬ್ರೈಟ್ ಪೋಳ್ಯ, ಉದ್ಯಮಿ ಖಾದರ್ ಎಂ.ಎಂ.ಎಸ್. ಕಲ್ಲಂದಡ್ಕ, ಕಬಕ ಗ್ರಾ.ಪಂ. ಸದಸ್ಯ ಶಾಬ ಕೆ., ಪುತ್ತೂರು ವೈದ್ಯಕೀಯ ಸಮಿತಿ ಸದಸ್ಯ ನಝೀರ್ ಬಲ್ನಾಡು, ಕಬಕ ಮಿಲಾದ್ ಸಮಿತಿ ಕಾರ್ಯದರ್ಶಿ ಫಾರೂಕ್ ತವಕ್ಕಲ್ ಮತ್ತಿತರರು ಉಪಸ್ಥಿತರಿದ್ದರು.

ಬಿ.ಕೆ. ಅಬ್ದುಲ್ ಲತೀಫ್ ಸಅದಿ ಕಬಕ ಕಿರಾಅತ್ ಪಠಿಸಿದರು.  ಉಮ್ಮರ್ ಫಾರೂಕ್ ಕಬಕ ಸ್ವಾಗತಿಸಿದರು. ಸಲಾಂ ಕಬಕ, ಆದಿಲ್ ಕಬಕ, ಕೆಎಸ್ ಆಶೀಫ್ ಕಬಕ, ನಝೀರ್ ವಿದ್ಯಾಪುರ, ಆರಿಫ್ ಯುನೈನ್, ಮಸೂದ್ ಕಬಕ, ಆರೀಫ್ ಕಬಕ ವಿವಿಧ ಕಾರ್ಯಕ್ರಮ ನಿರೂಪಿಸಿದರು.

ಮಿಲಾದ್ ಮೆರವಣಿಗೆ ಉದ್ಘಾಟನೆ: ಈದ್ ಮಿಲಾದ್‌ನ ಅಂಗವಾಗಿ ನಡೆಸಲಾದ ಬೃಹತ್ ಮಿಲಾದ್ ಮೆರವಣಿಗೆಯ ಉದ್ಘಾಟನೆಯನ್ನು ಕಬಕ ಜಂಕ್ಷನ್ ಬಳಿ ಉದ್ಯಮಿ ಎಂ.ಪಿ. ಉಮ್ಮರ್ ಮಲ್ನಾಡುರವರು ನೆರವೇರಿಸಿದರು. ಬಳಿಕ ಮೆರವಣಿಗೆಯು ಕಬಕ ಜಂಕ್ಷನ್‌ನಿಂದ ಹೊರಟು ಕಬಕ ಸೆಂಟ್ರಲ್ ಮೈದಾನದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯುದ್ದಕ್ಕೂ ತಾಲೀಮು ಪ್ರದರ್ಶನ, ದಫ್ ಪ್ರದರ್ಶನ  ನಡೆಸಲಾಯಿತು.

ದಫ್ ಪ್ರದರ್ಶನ ಹಾಗೂ ತಾಲೀಮು ಪ್ರದರ್ಶನ: ಕಾರ್ಯಕ್ರಮದ ಬಳಿಕ ಹೊನಲು ಬೆಳಕಿನ ಅಂತರ್ ರಾಜ್ಯಮಟ್ಟದ ದಫ್ ಪ್ರದರ್ಶನ ಹಾಗೂ ತಾಲೀಮು ಪ್ರದರ್ಶನ ಕಾರ್ಯಕ್ರಮವು ಜರಗಿತು. ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ದಫ್ ಪ್ರದರ್ಶನದಲ್ಲಿ ಬಿ.ಸಿ.ರೋಡ್ ಕಜೆಕಂಬಳ ರಿಫಾಯಿಯಾ ದಫ್ ತಂಡವು ಪ್ರಥಮ ಸ್ಥಾನ, ಪರ್ಲಡ್ಕ ಹಯಾತುಲ್ ಇಸ್ಲಾಂ ದಫ್ ತಂಡವು ದ್ವಿತೀಯ ಸ್ಥಾನ, ಬಿ.ಸಿ.ರೋಡ್ ಮಿತ್ತಬೈಲ್ ಸಂಶುಲ್ ಉಲಮಾ ದಫ್ ತಂಡವು ತೃತೀಯ ಸ್ಥಾನವನ್ನು, ಕೇಪು ಫಕೀರ್ಮಕಟ್ಟೆ ಹಯಾತುಲ್ ಇಸ್ಲಾಂ ದಫ್ ತಂಡವು ಚತುರ್ಥ ಬಹುಮಾನವನ್ನು ಪಡೆದುಕೊಂಡಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.