Breaking News

ಗೋ ಮಂಗಳೋತ್ಸವಕ್ಕೆ ಪೂರ್ವ ಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

go-mangal-1ಪುತ್ತೂರು: ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುವ ಮಂಗಳ ಗೋಯಾತ್ರೆ ಯ ಸಮಾರೋಪ ಸಮಾರಂಭ ಮಂಗಳೂರಿನ ಕೂಳೂರಿನಲ್ಲಿ 2017ನೇ ಜ.29ಕ್ಕೆ ಜರುಗಲಿರುವ ಹಿನ್ನೆಲೆಯಲ್ಲಿ ದ.13ರಂದು ವಿಜಯ ಸುಪಾರಿ ಸಂಸ್ಥೆಯ ಸಭಾಂಗಣದಲ್ಲಿ ಪೂರ್ವ ಭಾವಿ ಸಭೆ ನಡೆಯಿತು.

ಕಾರ್ಯಕ್ರಮದ ಕುರಿತು ಪ್ರಚಾರ, ಆಮಂತ್ರಣ ಪತ್ರಿಕೆ ವಿತರಣೆ, ಜನಸಂಪರ್ಕ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಮಂಗಳ ಗೋ ಯಾತ್ರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಹರಿಣಿ ಪುತ್ತೂರಾಯ, ಶೈಲಜಾ ಕೊಂಕೋಡಿ, ರಾಜರಾಮ ಕಾಡೂರು, ಕೃಷ್ಣಪ್ರಸಾದ್ ಆಲಂಕಾರು, ನ್ಯಾಯವಾದಿ ಅನಿಲ್ ಕುಮಾರ್, ವಿದ್ಯಾಗೌರಿ, ನ್ಯಾಯವಾದಿ ಜಯಾನಂದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.