ದೈವಾರಾಧಕರ ಸಮಾವೇಶ-ಕೃತಜ್ಞತಾ ಸಭೆ ಎಲ್ಲರ ಸಹಕಾರದಿಂದ ಅಭೂತಪೂರ್ವ ಯಶಸ್ಸು -ಜಯಂತ್ ನಡುಬೈಲು

Puttur_Advt_NewsUnder_1
Puttur_Advt_NewsUnder_1

 

daivaradhakaಪುತ್ತೂರು: ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಡಾ.ದಯಾನಂದ ಪೈ ಮತ್ತು ಸತೀಶ್ ಪೈ, ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವ ವಿದ್ಯಾನಿಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸಹಭಾಗಿತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ವಠಾರದಲ್ಲಿ ದೈವಾ ರಾಧಕರಕೂಟ ಕೇಂದ್ರ ಸಮಿತಿ ಪುತ್ತೂರು ಆಯೋಜಿಸಿದ್ದ ‘ದೈವಾರಾಧಕರ ಪ್ರಥಮ ಸಮಾವೇಶ-2016’ ಯಶಸ್ವಿಯಾಗಿ ನಡೆದ ಹಿನ್ನಲೆಯಲ್ಲಿ ದ.11 ರಂದು ಪುತ್ತೂರು ಬಿಲ್ಲವ ಸಂಘದಲ್ಲಿ ಕೃತಜ್ಞತಾ ಸಭೆ ನಡೆಯಿತು.

ಎಲ್ಲರ ಸಹಕಾರದಿಂದ ಅಭೂತಪೂರ್ವ ಯಶಸ್ಸುಜಯಂತ್ ನಡುಬೈಲು: ದೈವಾರಾಧಕರ ಸಮಾವೇಶ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ರವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿ ಸಂಘಟಿಸಿದ ದೈವಾರಾಧಕರ ಸಮಾವೇಶವು ಇಷ್ಟೊಂದು ಯಶಸ್ವಿಯಾಗಿ ನಡೆಯುತ್ತದೆ ಎಂದು ಊಹಿಸಿರಲಿಲ್ಲ. ಜನರು ತಂಡೋಪತಂಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿದ್ದು, ಇಂತಹ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಹಮ್ಮಿಕೊಂಡದ್ದು ಸಾರ್ಥಕವೆನಿಸಿತು. ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳು, ವಿಚಾರಗೋಷ್ಠಿಗಳು ನಿರಾತಂಕವಾಗಿ ನಡೆದು ಅಭೂತಪೂರ್ವ ಯಶಸ್ಸು ಸಿಗಲು ಯುವಕರ ಶ್ರಮವನ್ನು ಖಂಡಿತಾ ಶ್ಲಾಘಿಸ ಬೇಕಾಗುತ್ತದೆ. ಇಂತಹ ಸಮಾವೇಶ ಎಂದಿಗೂ ಆಗಿಲ್ಲ ಮತ್ತು ಸಮಾನ ಮನಸ್ಕರ ಪ್ರಾಂಜಲ ಮನಸ್ಸಿನಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಲು ಸಾಧ್ಯವಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ದೈವಾರಾಧಕರ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಚಂದ್ರಶೇಖರ ಎಸ್.ಪಿ ಪರಕ್ಕಮೆ, ರವೀಂದ್ರ ಪೂಜಾರಿ ಸಂಪ್ಯ, ಜಯಪ್ರಸಾದ್ ರೈ ನೂಜಿ, ದೈವಾರಾಧಕರಕೂಟ ಕೇಂದ್ರ ಸಮಿತಿಯ ಕೋಶಾಧಿಕಾರಿ ಸಂಕೇತ್ ಪೂಜಾರಿ, ಉಪಾಧ್ಯಕ್ಷ ಸೀತಾರಾಮ ರೈ ಚೆಲ್ಯಡ್ಕ, ಸದಾಶಿವ ಮಣಿಯಾಣಿ, ವಾಸು ಪೂಜಾರಿ, ಹರೀಶ್ ಮಂಜೊಟ್ಟಿ, ವಸಂತ ಪೂಜಾರಿ ಕಲ್ಲರ್ಪೆ, ಸುರೇಂದ್ರ ಮೊಟ್ಟೆತ್ತಡ್ಕ, ರಕ್ಷಿತ್ ರೈ ತೊಟ್ಲ, ಅಶೋಕ್ ಕುಮಾರ್ ಬೇಳಾಡಿ, ಪ್ರದೀಪ್, ಸಂದೇಶ್, ರಾಘವ ಪೂಜಾರಿ, ಪ್ರದೀಪ್ ಕುಮಾರ್ ಸಹಿತ ಹಲವರು ಉಪಸ್ಥಿತರಿದ್ದರು. ದೈವಾರಾಧಕರ ಸಮಿತಿಯ ಸಂಚಾಲಕ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.