ಮಣಿಕ್ಕರ :ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1

manikkara_2

ಸವಣೂರು; ವಿದ್ಯಾರ್ಥಿಗಳ ದೈಹಿಕ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ.ಇಂದಿನ ದಿನಗಳಲ್ಲಿ ಕ್ರೀಡೆ ಮಹತ್ವದ ಸ್ಥಾನ ಪಡೆದಿದ್ದು, ಪ್ರತಿಯೊಬ್ಬರೂ ಯಾವುದೇ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಉತ್ತಮ ಎಂದು ಮಣಿಕ್ಕರ ಸ.ಪ್ರೌ.ಶಾಲಾಭಿವೃದ್ಧಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಸುನೀಲ್ ರೈ ಪಾಲ್ತಾಡು ಹೇಳಿದರು.

ಅವರು ಮಣಿಕ್ಕರ  ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮಣಿಕ್ಕರ ಸ.ಪ್ರೌ.ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸೈಯ್ಯದ್ ಗಫೂರ್ ಸಾಹೇಬ್ ಮಾತನಾಡಿ, ಕ್ರೀಡೆಯಿಂದ ಆರೋಗ್ಯ ವರ್ಧನೆಯ ಜತೆಗೆ ಮಾನಸಿಕ ನೆಮ್ಮದಿ, ಆತ್ಮ ವಿಶ್ವಾಸ, ಶಿಸ್ತು, ಸಹಕಾರ ಮನೋಭಾವನೆ ಬೆಳೆಯಲು ಸಾಧ್ಯ ಎಂದರು.

ಶಾಲಾ ಮುಖ್ಯಗುರು ಮಹಾಲಿಂಗೇಶ್ವರ ಭಟ್ ಸ್ವಾಗತಿಸಿ, ದೈ.ಶಿ.ಶಿಕ್ಷಕ ಕರುಣಾಕರ ಮಣಿಯಾಣಿ ವಂದಿಸಿದರು. ಶಿಕ್ಷಕಿ ಗೀತಾ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.