Breaking News

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ- ಪಿ.ಡಿ.ಒ, ಇಲಾಖಾ ಅಧಿಕಾರಿಗಳಿಗೆ ಜಿ.ಪಂ ಸಿ.ಇ.ಒ ಕರೆ

Puttur_Advt_NewsUnder_1
Puttur_Advt_NewsUnder_1

neeru pdo

* ಕುಡಿಯುವ ನೀರಿನ ಸಮಸ್ಯೆಯಾಗದಂತೆ ಆಕ್ಷನ್ ಪ್ಲ್ಯಾನ್ ಮಾಡಿ

* ಕಿಂಡಿ ಅಣೆಕಟ್ಟುಗಳ ಪರಿಸ್ಥಿತಿ ಹೇಗಿದೆ ?

* ಸರಕಾರದ ಯೋಜನೆ ಅನುಷ್ಠಾನದಲ್ಲಿ ವಿಳಂಬ ಬೇಡ-ಸಕಾಲದಲ್ಲಿ ಮಾಡಿ ಮುಗಿಸಿ

* ಜನರ ಸಮಸ್ಯೆ, ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಬೇಡಿ

* ವಸತಿ ಯೋಜನೆ, ನಿವೇಶನ ಹಂಚಿಕೆಯ ಪ್ರಗತಿ ಸಾಲದು  ಎನ್‌ಆರ್‌ಇಜಿ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ

ಪುತ್ತೂರು: ಮಳೆಯ ಅಭಾವದಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ದಟ್ಟವಾಗಿದ್ದು, ಹಾಗಾಗಿ ಗ್ರಾಮಾಂತರ, ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗೃತವಾಗಿ ಎಚ್ಚರವಹಿಸಿ ಆಕ್ಷನ್ ಪ್ಲ್ಯಾನ್ ಮಾಡುವಂತೆ ಗ್ರಾ.ಪಂ ಪಿ.ಡಿ.ಒ ಹಾಗೂ ಇತರ ಇಲಾಖಾ ಅಧಿಕಾರಿಗಳಿಗೆ ಜಿ.ಪಂನ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿಯವರು ಕರೆ ನೀಡಿದರು.

ಅವರು ದ.14ರಂದು ತಾ.ಪಂ ಸಭಾಂಗಣದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾ.ಪಂ ಪಿಡಿಒ, ಕಾರ್ಯದರ್ಶಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಆಕ್ಷನ್ ಪ್ಲ್ಯಾನ್ ಮಾಡಿ: ಮುಂದಿನ ಬೇಸಿಗೆಯಲ್ಲಿ ನಾಲ್ಕು ತಿಂಗಳು ನೀರಿನ ಸಮಸ್ಯೆ ಉದ್ಭವಿಸುವುದು ಸಹಜ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪೂರ್ವಸಿದ್ಧತೆ ಬೇಕಾಗಿದೆ ಅದಕ್ಕಾಗಿ ಎಲ್ಲಾ ಗ್ರಾ.ಪಂ, ಸಂಬಂಧಿಸಿದ ಇಲಾಖೆಗಳಲ್ಲಿ ಆಕ್ಷನ್ ಪ್ಲ್ಯಾನ್ ಮಾಡಿಕೊಳ್ಳಬೇಕು, ಸಮಸ್ಯೆ ಅಲ್ಲಿಯೇ ಇತ್ಯರ್ಥ ಆಗುವಂತಿದ್ದರೆ ಅದನ್ನು ಬೇರೆ ಕಡೆ ಹಸ್ತಾಂತರ ಮಾಡಬೇಡಿ ಎಂದು ಸಿ.ಇ.ಒರವರು ಹೇಳಿದರು.

ಕಿಂಡಿ ಅಣೆಕಟ್ಟುಗಳ ಪರಿಸ್ಥಿತಿ ಹೇಗಿದೆ?: ಜಿಲ್ಲೆಯಲ್ಲಿ ಸುಮಾರು ೨ಸಾವಿರಕ್ಕಿಂತಲೂ ಹೆಚ್ಚು ಕಿಂಡಿ ಅಣೆಕಟ್ಟುಗಳಿವೆ ಎಂದು ನನಗೆ ಮಾಹಿತಿ ಬಂದಿದೆ, ಪುತ್ತೂರಿನಲ್ಲಿ ಎಷ್ಟು ಕಿಂಡಿ ಅಣೆಕಟ್ಟುಗಳಿವೆ ಮತ್ತು ಅದರ ಸ್ಥಿತಿಗತಿ ಹೇಗಿದೆ ಎಂದು ನೀರಾವರಿ ಇಲಾಖಾಧಿಕಾರಿಯವರಲ್ಲಿ ಸಿ.ಇ.ಒ ರವರು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿಯವರು ತಾಲೂಕಿನಲ್ಲಿ ಈಗಾಗಲೇ ೨೮೯ ಕಿಂಡಿ ಅಣೆಕಟ್ಟುಗಳು ಇದ್ದು ಅವುಗಳಲ್ಲಿ ೩೦ ನಾದುರಸ್ಥಿಯಲ್ಲಿದೆ ಎಂದರು. ಕಿಂಡಿ ಅಣೆಕಟ್ಟುಗಳನ್ನು ಮೈಂಟೇನೆನ್ಸ್ ಮಾಡಿಕೊಂಡು ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸಿ.ಇ.ಒ ರವರು ಹೇಳಿದರು.

ಸರಕಾರದ ಯೋಜನೆ ಅನುಷ್ಠಾನದಲ್ಲಿ ವಿಳಂಬ ಬೇಡ-ಸಕಾಲದಲ್ಲಿ ಮಾಡಿ ಮುಗಿಸಿ: ಕೆಲವೊಂದು ಅಧಿಕಾರಿಗಳ ಅರ್ಪಣಾ ಮನೋಭಾವದ ಕೊರತೆಯಿಂದಾಗಿ ಪುತ್ತೂರಿನಲ್ಲಿ ನಿರೀಕ್ಷೆಯ ಪ್ರಗತಿ ಕಂಡಿಲ್ಲ. ಹಾಗಾಗಿ ಸರಕಾರದ ಯೋಜನೆ, ಸೌಲಭ್ಯಗಳ ಅನುಷ್ಠಾನದಲ್ಲಿ ವಿಳಂಬ ಮಾಡದೇ, ಸಕಾಲದಲ್ಲಿ ಮಾಡಿ ಮುಗಿಸಬೇಕು ಎಂದು ಗ್ರಾ.ಪಂ ಪಿಡಿಒ ಗಳನ್ನು ಎಚ್ಚರಿಸಿದ ಸಿ.ಇ.ಒ ರವರು ನಿಮ್ಮಲ್ಲಿ ಸಾಕಷ್ಟು ಯಂಗ್‌ಸ್ಟಾರ‍್ಸ್ ಇದ್ದಾರೆ, ನಿಮ್ಮ ವಿವೇಚನಾ ಶಕ್ತಿಯನ್ನು ಕರ್ತವ್ಯದಲ್ಲಿ ಸರಿಯಾಗಿ ಬಳಸಿಕೊಂಡರೆ ಗ್ರಾ.ಪಂ ನ ಅಭಿವೃದ್ಧಿಯ ಜತೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯವಿದೆ ಎಂದು ಸಿ.ಇ.ಒ ರವರು ಹೇಳಿದರು.

ಜನರ ಸಮಸ್ಯೆ, ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಬೇಡಿ: ಜನರು ಅಧಿಕಾರಿಗಳ ಮೇಲೆ ಸಾಕಷ್ಟು ಭರವಸೆ, ನಿರೀಕ್ಷೆ ಇಟ್ಟುಕೊಂಡಿರುತ್ತಾರೆ, ಹಾಗಾಗಿ ಅಧಿಕಾರಿಗಳ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ, ಅಧಿಕಾರಿಗಳು ಜನರ ಸಮಸ್ಯೆ, ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡದೇ, ತಮ್ಮ ಕರ್ತವ್ಯಕ್ಕೆ ದ್ರೋಹ ಬಗೆಯದೇ, ಆರೋಪ ಪ್ರತ್ಯಾರೋಪಗಳು ಬಾರದಂತೆ ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಿ ಸರಕಾರದ ಯೋಜನೆ, ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಬೇಕು. ಅದಾಗ್ಯೂ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಉzಶ ಪೂರ್ವಕವಾಗಿ ನಿರ್ಲಕ್ಷ್ಯವನ್ನು ಮಾಡಿದರೆ ಮುಂದೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿ.ಇ.ಒ ರವರು ಇಲಾಖಾ ಅಧಿಕಾರಿಗಳನ್ನು ಎಚ್ಚರಿಸಿದರು. ಯಾವುದೇ ಕೆಲಸಕ್ಕೂ ಗುರಿ ಇಟ್ಟುಕೊಳ್ಳಿ

ಗ್ರಾ.ಪಂನ್ನು ಆದರ್ಶ ಗ್ರಾಮ ಮಾಡಬೇಕೆನ್ನುವ ಚಿಂತನೆಯೊಂದಿಗೆ ಗುರಿ ಇಟ್ಟುಕೊಂಡು ಕೆಲಸ ನಿರ್ವಹಿಸಿ, ಈ ನಿಟ್ಟಿನಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ವರ್ಷಕ್ಕೆ ಒಂದು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ಎಂದು ಪಿಡಿಒಗಳಿಗೆ ಕರೆ ನೀಡಿದರು.

ವಸತಿ ಯೋಜನೆ, ನಿವೇಶನ ಹಂಚಿಕೆಯ ಪ್ರಗತಿ ಸಾಲದು: ಜಿಲ್ಲೆಯಲ್ಲಿ ವಸತಿ ಯೋಜನೆ ಮತ್ತು ನಿವೇಶನ ಹಂಚಿಕೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೇ ಇದ್ದು, ಇದರ ಬಗ್ಗೆ ಪಿ.ಡಿ.ಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಗಮನಹರಿಸುವಂತೆ ಸಿ.ಇ.ಒ ರವರು ಹೇಳಿದರು.

ಎನ್‌ಆರ್‌ಇಜಿ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ:  ಜಿ.ಪಂ ಉಪಕಾರ್ಯದರ್ಶಿ ಉಮೇಶ್‌ರವರು ಮಾತನಾಡಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಲ್ಲಿ ರೂ. ೩೬.೯೩ ಕೋಟಿ ಖರ್ಚು ಮಾಡಿ ನಾವು ಗುರಿ ಮೀರಿದ ಸಾಧನೆ ಮಾಡಿzವೆ. ಹಾಗಾಗಿ ಹೆಚ್ಚುವರಿಯಾಗಿ ಮಾನವ ದಿನಗಳ ಸಾಧನೆಗೆ ರೂ. ೪೯ ಕೋಟಿ ಖರ್ಚು ಮಾಡಲು ನಮಗೆ ಅವಕಾಶ ಸಿಕ್ಕಿದೆ ಎಂದರು. ಜಾಬ್ ಕಾರ್ಡ್‌ಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು, ಎಸ್ಸಿ,ಎಸ್ಟಿಯವರಿಗೆ ನೂರಕ್ಕೆ ನೂರು ಜಾಬ್‌ಕಾರ್ಡ್ ಕೊಡಬೇಕು ಎಂದ ಅವರು ಮತ್ತಿತರ ವಿವಿಧ ಕಾಮಗಾರಿ, ಯೋಜನೆ ಅನುಷ್ಠಾನಗಳ ಕುರಿತು ಗ್ರಾ.ಪಂ ಪಿಡಿಒಗಳಿಗೆ ಸಲಹೆ ನೀಡಿದರು.  ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿ, ವಂದಿಸಿದರು. ಗ್ರಾ..ಪಂ ಪಿಡಿಒ, ಕಾರ್ಯದರ್ಶಿ ಮತ್ತು ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಪ್ರಾರಂಭದಲ್ಲಿ ಸಿ.ಇ.ಒ ರವರು ಎಲ್ಲಾ ಅಧಿಕಾರಿಗಳ ಪರಿಚಯವನ್ನು ಪಡೆದುಕೊಂಡರು.

ಒಂದು ಗಂಟೆ ತಡವಾಗಿ ಪ್ರಾರಂಭವಾದ ಸಭೆ ಮಧ್ಯಾಹ್ನ ಗಂಟೆ ೨.೩೦ಕ್ಕೆ ಸಭೆ ಪ್ರಾರಂಭವಾಗುವ ಕುರಿತು ಸೂಚಿಸಲಾಗಿತ್ತು. ಅದರೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸುಮಾರು ಒಂದು ಗಂಟೆ ತಡವಾಗಿ ಬಂದ ಹಿನ್ನೆಯಲ್ಲಿ ಸಂಜೆ ಗಂಟೆ ೪ಕ್ಕೆ ಸಭೆ ಪ್ರಾರಂಭಗೊಂಡಿತು. ಸುಳ್ಯದಲ್ಲಿ ಸಭೆ ನಡೆಸಿ ಕೆಲವೊಂದು ಸೈಟ್‌ಗಳಿಗೆ ವಿಸಿಟ್ ಮಾಡಿ ಬರುವಾಗ ತಡವಾಗಿದೆ ಎಂದು ಸಿ.ಇ.ಒ ರವರು ಸಭೆಯಲ್ಲಿ ತಿಳಿಸಿದರು.

ನನಗೆ ಅಭಿವೃದ್ಧಿ ಒಂದೇ ಗೊತ್ತಿರೋದು, ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ, ಬಹುಶಃ ನೀವು ಕೂಡಾ ಅದೇ ಲ್ಯಾಂಗ್ವೇಜ್‌ನಲ್ಲಿ ಮಾತನಾಡಿದರೆ ನನಗೂ ಒಳ್ಳೆಯದು ನಿಮಗೂ ಒಳ್ಳೆಯದು.

– ಡಾ. ಎಂ.ಆರ್. ರವಿ, ಜಿ.ಪಂ ಸಿ.ಇ.ಒ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.