Breaking News

ಕಂಬಳ ನಿಷೇಧ ವಿಚಾರ; ಇಂದು ಹೈಕೋರ್ಟ್‌ನಲ್ಲಿ ಅಂತಿಮ ಆದೇಶ ಸಾಧ್ಯತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಳುನಾಡಿನ ಪ್ರಾಚೀನ ಕ್ರೀಡೆಯಾಗಿರುವ ಕಂಬಳವನ್ನು ನಿಷೇಧಿಸಿ ಈ ಹಿಂದೆ ತಾತ್ಕಾಲಿಕ ಆದೇಶ ನೀಡಿದ್ದ ಹೈಕೋರ್ಟ್ ದ.15ರಂದು ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಕಂಬಳ ಕೂಟದಲ್ಲಿ ಪ್ರಾಣಿಹಿಂಸೆ ನಡೆಯುತ್ತಿರುವುದರಿಂದ ಕಂಬಳವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಪ್ರಾಣಿದಯಾ ಸಂಘದವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠವು ಕಂಬಳಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಮತ್ತು ದ.ಕ.ಜಿಲ್ಲೆಯಲ್ಲಿ ನಿಗದಿಯಾಗಿದ್ದ ಕಂಬಳ ಕೂಟ ರದ್ದಾಗಿತ್ತು. ಈ ಮಧ್ಯೆ ಈ ಹಿಂದೆ ಕಂಬಳ ಕೂಟದ ವಿರುದ್ಧ ವಾದ ಮಂಡನೆ ಮಾಡಿದ್ದ ರಾಜ್ಯ ಸರಕಾರವು ಇದೀಗ ಕಂಬಳದ ಪರವಾಗಿ ನೋಟಿಫಿಕೇಶನ್ ಮಾಡಿದೆ. ಅಲ್ಲದೇ ಸರಕಾರವು ಕಂಬಳದ ಪರವಾಗಿ ನಿಲ್ಲಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸಚಿವ ಟಿ.ಬಿ.ಜಯಚಂದ್ರರವರ ನಿರ್ದೇಶನದಂತೆ ದ.೧೫ರಂದು ರಾಜ್ಯ ಸರಕಾರದ ಪರ ವಕೀಲರು ಕಂಬಳದ ಪರವಾಗಿ ಹೈಕೋರ್ಟ್‌ನಲ್ಲಿ ವಾದಮಂಡಿಸಲಿದ್ದಾರೆ. ಪ್ರಾಣಿದಯಾ ಸಂಘ ಮತ್ತು ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನಾಲಿಸಿ ಹೈಕೋರ್ಟ್ ದ.೧೫ರಂದು ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಹೈಕೋರ್ಟ್‌ನ ತೀರ್ಪಿನ ಆಧಾರದಲ್ಲಿ ಪುತ್ತೂರಿನ ಕೋಟಿಚೆನ್ನಯ, ಉಪ್ಪಿನಂಗಡಿಯ ವಿಜಯವಿಕ್ರಮ ಜೋಡುಕರೆ ಕಂಬಳ ಸೇರಿದಂತೆ ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ಭವಿಷ್ಯ ನಿರ್ಧಾರವಾಗಲಿದೆ.

ಪೂರಕ ತೀರ್ಪು ಬರುವ ನಿರೀಕ್ಷೆ: ರೈ: ಕಂಬಳದ ಅಳಿವು ಉಳಿವಿನ ಬಗ್ಗೆ ದ.15ರಂದು ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟವಾಗಲಿದೆ. ತುಳುನಾಡಿನ ಜನಪದ ಕ್ರೀಡೆಯ ಉಳಿವಿಗೆ ಪೂರಕವಾದ ತೀರ್ಪು ಹೈಕೋರ್ಟ್‌ನಿಂದ ಬರುವ ನಿರೀಕ್ಷೆ ಇದೆ. ನ್ಯಾಯ ದೊರಕದೇ ಇದ್ದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡಿಯಾದರೂ ಕಂಬಳವನ್ನು ಉಳಿಸುತ್ತೇವೆ ಎಂದು ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷೆ ಅಶೋಕ್ ಕುಮಾರ್ ರೈ ’ಸುದ್ದಿ’ಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.