ಕಡಮಜಲು ಸುಭಾಸ್ ರೈಯವರ ಕೃತಿ ’ಬಯಸದೆ ಬಂದ ಭಾಗ್ಯ’ ಅಮೇರಿಕಾದಲ್ಲಿ ಅನಾವರಣ

Puttur_Advt_NewsUnder_1
Puttur_Advt_NewsUnder_1

kajamajalu kajamajalu1

ಪುತ್ತೂರು: ಕಡಮಜಲು ಸುಭಾಸ್ ರೈಯವರು ಬರೆದ ’ಬಯಸದೇ ಬಂದ ಭಾಗ್ಯ’ – ಅಮೇರಿಕಾ ಅಮೇರಿಕಾ ಕೃತಿ ಅನಾವರಣ ದ. 13ರಂದು ಅಮೇರಿಕಾದ ಕ್ಯಾಲಿಫೊರ್ನಿಯಾ ರಾಜ್ಯದ ಲಾಸ್‌ಏಂಜೆಲ್ಸ್‌ನ ವೆಂಕಟಕೃಷ್ಣ ದೇವಸ್ಥಾನದಲ್ಲಿ ಜರಗಿತು. ಕೃತಿಯನ್ನು ಸುಜ್ಞಾನ ರಿಲೀಜಿಯಸ್ ಮತ್ತು ಚಾರಿಟೇಬಲ್ ಫೌಂಡೇಶನ್‌ನ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅನಾವರಣಗೊಳಿಸಿ ಮಾತನಾಡಿ, ಕಡಮಜಲು ಸುಭಾಸ್ ರೈಯವರು ತನ್ನ ಪ್ರವಾಸ ಅನುಭವ ಮತ್ತು ಭಾವನೆಯನ್ನು ಕೃತಿಯ ರೂಪದಲ್ಲಿಜಗತ್ತಿಗೆ ನೀಡಿದ್ದಾರೆ ಎಂದರು. ಮರುಮುದ್ರಣಗೊಂಡ ಎಮ್ಮೆತಂದ ಹೆಮ್ಮೆ ಪುಸ್ತಕವನ್ನು ಲಾಸ್ ಏಂಜಲ್ಸ್ ಶ್ರೀ ವೆಂಕಟಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಜ್ಞಾನಮೂರ್ತಿ ಭಟ್ ರವರು ಅನಾವರಣಗೊಳಿಸಿದರು.

ಪುಸ್ತಕವನ್ನು ಪರಿಚಯಿಸಿದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಇದರ ರಿಸರ್ಚ್ ಸೈಂಟಿಸ್ಟ್ ಇಂಜಿನಿಯರ್ ಮೋಹನಚಂದ್ರ ಕೆ.ಪಿ.ಯವರು, ಕಡಮಜಲು ಸುಭಾಸ್ ರೈಯವರು ತಮ್ಮಅಮೇರಿಕಾ ಪ್ರವಾಸದ ಅನುಭವವನ್ನು ಸರಳವಾಗಿ ಲೌಕಿಕ ಮತ್ತು ಆಧ್ಯಾಮಿಕ ಬೆಸುಗೆಯೊಂದಿಗೆ ಓದುಗನ ಮನಸ್ಸಿಗೆನಾಟುವಂತೆ ವಿಶ್ಲೇಷಿಸಿದ್ದಾರೆ ಎಂದರು.   ಲಾಸ್‌ಏಂಜೆಲ್ಸ್‌ನ ಉಡುಪಿ ಮಠದ ವತಿಯಿಂದ ಶ್ರೀ ವೆಂಕಟಕೃಷ್ಣ ದೇವಸ್ಥಾನದಲ್ಲಿ ಕಡಮಜಲು ಸುಭಾಸ್ ರೈಯವರನ್ನು ಸನ್ಮಾನಿಸಲಾಯಿತು. ಪ್ರೀತಿ ಸುಭಾಸ್ ರೈ ಉಪಸ್ಥಿತರಿದ್ದರು. ಕಡಮಜಲು ಸುಭಾಸ್ ರೈಯವರ ಪುತ್ರ ವಿಪುಲ್ ರೈ ಸ್ವಾಗತಿಸಿ, ಸ್ಫೂರ್ತಿ ವಿಪುಲ್ ರೈ ವಂದಿಸಿದರು. ನ್ಯೂರೋ ಸರ್ಚ್ ಇಂಕ್‌ನ ರಿಸರ್ಚ್ ಅಸಿಸ್ಟೆಂಟ್ ಡಾ| ಇಂದುಮತಿ ಮೋಹನಚಂದ್ರ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.