ತಾ| ಯುವಜನ ಮೇಳ ಸಂಘಟಕರಿಂದ ಸುದ್ದಿ ಬಳಗಕ್ಕೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1

suddi

ಪುತ್ತೂರು: ಕುದ್ಮಾರುವಿನಲ್ಲಿ ನಡೆದ ತಾಲೂಕು ಮಟ್ಟದ ಯುವಜನ ಮೇಳದ ವಿಚಾರಗಳನ್ನು ಒಳ್ಳೆಯ ರೀತಿಯಲ್ಲಿ ಸಮಾಜಕ್ಕೆ ತಲುಪಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪುತ್ತೂರು ಸುದ್ದಿ ಬಿಡುಗಡೆ ದಿನಪತ್ರಿಕೆಯ ಸಂಪಾದಕರಿಗೆ ಮತ್ತು ಸುದ್ದಿ ಬಳಗಕ್ಕೆ ಯುವಜನ ಮೇಳದ ನೇತೃತ್ವ ವಹಿಸಿದ್ದ ಸಂಘಟಕರು ಅಭಿನಂದಿಸಿದ್ದಾರೆ.

ಯುವಜನ ಮೇಳದ ನೇತೃತ್ವ ವಹಿಸಿದ್ದ ತಾಲೂಕು ಯುವಜನ ಒಕ್ಕೂಟದ ಪರವಾಗಿ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರು ದ.13ರಂದು ಸುದ್ದಿ ಬಿಡುಗಡೆಯ ಪ್ರಧಾನ ಕಛೇರಿಗೆ ಭೇಟಿ ನೀಡಿ ಸಂಪಾದಕ ಡಾ. ಯು.ಪಿ ಶಿವಾನಂದರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ರೈ ಸೂಡಿಮುಳ್ಳುರವರು, ಯುವಜನ ಮೇಳದ ಯಶಸ್ಸಿಗಾಗಿ ನಿಮ್ಮ ಪತ್ರಿಕೆಯು ಒಳ್ಳೆಯ ಪ್ರಚಾರ ನೀಡಿದೆ, ಯುವಜನ ಮೇಳದ ದಿನಾಂಕ ನಿಗದಿಯಾದಲ್ಲಿಂದ ಮುಗಿಯುವವರೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಸರಿಯಾದ ರೀತಿಯಲ್ಲಿ ವರದಿಯಾಗಿದೆ ಅದಕ್ಕಾಗಿ ಸುದ್ದಿ ಬಳಗವನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು. ಯುವಜನ ಒಕ್ಕೂಟದ ಸಂಘಟನಾ ಕಾರ್ಯದರ್ಶಿಗಳಾದ ಪ್ರವೀಣ್ ಚೆನ್ನಾವರ, ಸುನೀಲ್ ನಿಧಿಮುಂಡ ಜತೆಗಿದ್ದರು. ಸುದ್ದಿ ಬಳಗದ ಪರವಾಗಿ ಸಿ.ಇ.ಒ ಸೃಜನ್ ಊರುಬೈಲು, ಜಾಹೀರಾತು ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ಉಮಿಗದ್ದೆ, ಶೈಲಜಾ ಸುದೇಶ್, ವರದಿಗಾರ ಉಮಾಪ್ರಸಾದ್ ರೈ ನಡುಬೈಲು ಅಭಿನಂದನೆ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.