ಕುಂತೂರು ಅರ್ಬಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

kunthuru-arbiಪೆರಾಬೆ: ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬೈಲುವಾರು ಸಭೆಯು ದ.8ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.  ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ರೈ ಅಗತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು, ವಿವಿಧ ಸಮಿತಿಯ ಸಂಚಾಲಕರು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೈಲುವಾರು ಸಮಿತಿಯ ಮೂಲಕ ಪ್ರತಿ ಮನೆಗಳಿಗೆ ಕಾಗದ ಬಟವಾಡೆ ಮಾಡುವುದಾಗಿ ಮತ್ತು ಮನೆ ಸಂಪರ್ಕ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಪವಿತ್ರಪಾಣಿ ನಾರಾಯಣ ಆಚಾರ್, ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಪಾಧ್ಯಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಕೆ.ಜಿ.ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ. ನಾಗಪ್ಪ ಗೌಡ ಮರುವಂತಿಲ, ಅಣ್ಣು ಶೆಟ್ಟಿ ಕೇವಳ ಪಟ್ಟೆ, ನಾಗಪ್ಪ ಗೌಡ ಪಾಲೆಚ್ಚಾರು, ನೇಮಿರಾಜ್ ಶೇಡಿ, ಕೆ.ಎಸ್. ಬಾಬು ಗೌಡ ಕುಂಡಡ್ಕ, ಕೆ.ಎಸ್. ತಿಮ್ಮಪ್ಪ ಗೌಡ ಕುಂಡಡ್ಕ, ಸೋಮಪ್ಪ ಗೌಡ ಎರ್ಮಾಳ, ಚಂದ್ರಶೇಖರ ಎರ್ಮಾಳ, ಲೋಕೇಶ್ ಗೌಡ ಅರ್ಬಿ, ಬಾಬು ನಾಯ್ಕ ಎಲ್ಲಾಜೆಮೂಲೆ, ಜನಾರ್ದನ ರೈ ಗುತ್ತುಪಾಲು, ಆನಂದ ಶೆಟ್ಟಿ ಶೇಡಿ, ಈಶ್ವರ ಗೌಡ ಕುಂತೂರು, ಗುರುಕಿರಣ್ ಶೆಟ್ಟಿ ಬಾಲಾಜೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.