ಕಡಬ: ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಿಲಾದ್-ಮಕ್ಕಳ ಕಾರ‍್ಯಕ್ರಮ

Puttur_Advt_NewsUnder_1
Puttur_Advt_NewsUnder_1

kadaba-1ಕಡಬ: ಮಹಮ್ಮದ್ ಪೈಗಂಬರ್‌ರ ಜನ್ಮ ದಿನಾಚರಣೆಯ ಅಂಗವಾಗಿ ಇಲ್ಲಿಯ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಡಿ.11 ರಂದು ಮಕ್ಕಳ ಕಾರ‍್ಯಕ್ರಮ ನಡೆಯಿತು. ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶೆರೀಫ್ ಅಡ್ಡಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಸಲ್ಮಾನರಾದ ನಾವೆಲ್ಲರೂ ನೆಬಿಯವರ ಅನುಯಾಯಿಗಳಾಗಿ ಅವರ ತತ್ವ ಸಿದ್ದಾಂತಗಳನ್ನು ಪರಿಪಾಲಿಸಿಕೊಂಡು ಇತರರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ದೀನಿ ವಿದ್ಯಾಭ್ಯಾಸವನ್ನು ನೀಡಬೇಕಾಗಿದೆ ಎಂದರು. ಜಮಾಅತಿನ ಖತೀಬರಾದ ಅಬ್ದುಲ್ ಮಜೀದ್ ಸಖಾಫಿ ಮಲ್ಲಿಯವರು ದುಃವಾಶೀರ್ವಚನ ಗೈದು ದೀನಿ ಸಂದೇಶ ಸಾರಿದರು. ಕೇಪು ಮಸ್ಜಿದ್ ಮದರಸದ ಹಝ್ರತ್ ಯೂನುಸ್ ರಝಾ ರಝ್ವಿ ಪ್ರಭಾಷಣಗೈದರು. ಕಡಬ ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಪ್ರಧಾನ ಕಾರ‍್ಯದರ್ಶಿ ಹಾಜಿ ಹಮೀದ್ ಎಚ್.ಕೆ ಉಪಸ್ಥಿತರಿದ್ದರು. ಕಡಬ ಅಡ್ಡಗದ್ದೆ ಕೇಪು ಕಲ್ಲುಗುಡ್ಡೆ ಮದ್ರಸದ ವಿದ್ಯಾರ್ಥಿಗಳಿಂದ ಕನ್ನಡ, ಇಂಗ್ಲೀಷ್, ಮಲಯಾಳ, ಉರ್ದು, ಹಿಂದಿ, ಪ್ರಭಾಷಣ, ಗಾನ, ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷ ಆದಂ ಕುಂಡೋಳಿ ಸ್ವಾಗತಿಸಿ,  ಪ್ರಧಾನ ಕಾರ‍್ಯದರ್ಶಿ ಫೈಝಲ್ ಎಸ್‌ಇಎಸ್ ವಂದಿಸಿದರು. ಸದರ್ ಮುಅಲ್ಲಿಂ ಅಬ್ದುಲ್ ರವೂಫ್ ಲತೀಫಿ ಕಾರ‍್ಯಕ್ರಮ ನಿರೂಪಿಸಿದರು. ಜತೆ ಕಾರ‍್ಯದರ್ಶಿ ಇಬ್ರಾಹಿಂ ಕೋಡಿಬೈಲ್ ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.