Breaking News

ಪೆರ್ನೆ: ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ  ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1

perne1 perne2

ಉಪ್ಪಿನಂಗಡಿ: ಪ್ರತಿಯೋರ್ವರಲ್ಲೂ ಪ್ರತಿಭೆಯಿದ್ದು, ಸತತ ಪರಿಶ್ರಮವಿದ್ದಾಗ ಮಾತ್ರ ಆ ಪ್ರತಿಭೆ ಅರಳಲು ಸಾಧ್ಯ ಎಂದು ಮಂಗಳೂರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿ.ಎ. ಶಾಂತಾರಾಮ ಶೆಟ್ಟಿ ತಿಳಿಸಿದರು.

ಪೆರ್ನೆ ಅಯೋಧ್ಯಾನಗರ  ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಧಿಸುವ ಮನೋಭಾವದೊಂದಿಗೆ ಛಲದ ಬದುಕು ನಮ್ಮದಾದಾಗ ಗುರಿ ತಲುಪಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಭವಿಷ್ಯದ ಕನಸುಗಳನ್ನು ನನಸಾಗಿಸಲು ಈಗಿಂದಲೇ ನಿರಂತರ ಪ್ರಯತ್ನದಲ್ಲಿ ತೊಡಗಿಕೊಳ್ಳಬೇಕು ಎಂದರು.

ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷ ರಿತೇಶ್ ಬಾಳಿಗ ಮಾತನಾಡಿ, ಧೈರ್ಯದಿಂದ ಹೆಜ್ಚೆಯಿಟ್ಟಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಶಿಕ್ಷಣವು ಬಾಳಿಗೆ ಬೆಳಕು ನೀಡಲಿದ್ದು, ಪ್ರತಿಯೋರ್ವರು ಶಿಕ್ಷಿತರಾಗಿ ನಿರಂತರ ಪ್ರೀತಿ, ವಿಶ್ವಾಸ, ಛಲದಿಂದ ಮುನ್ನಡೆದಾಗ ಮಾತ್ರ ಕಾರ್ಯ ಸಿದ್ಧಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಮಾಸ್ಟರ್ ಪ್ಲಾನರಿಯ ಆನಂದ ಕುಮಾರ್ ಎಸ್.ಕೆ. ಮಾತನಾಡಿ, ವಿದ್ಯಾಲಯ ಸ್ಥಾಪಕರ ಶ್ರಮ, ತ್ಯಾಗ ಮನೋಭಾವದಿಂದ ಶಿಕ್ಷಣ ಸಂಸ್ಥೆಯೊಂದು ಇಲ್ಲಿ ಅರಳಲು ಸಾಧ್ಯವಾಗಿದೆ. ಈ ಶಿಕ್ಷಣ ಸಂಸ್ಥೆಯು ಇನ್ನಷ್ಟು ಬೆಳೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ವಿದ್ಯಾಲಯದ ಸಂಚಾಲಕ ಹರೀಶ್ ಭಂಡಾರಿ ಟಿ. ಧ್ವಜಾರೋಹಣಗೈದರು. ರೋ. ಪುಷ್ಪರಾಜ ಹೆಗ್ಡೆ ವಿದ್ಯುತ್ ಸಂಪರ್ಕ ಉದ್ಘಾಟಿಸಿದರು. ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಮತ್ತು ಅತ್ಯಧಿಕ ಅಂಕಗಳಿಸಿರುವ ವಿದಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಅಲ್ಲದೇ, ರಾಜ್ಯಮಟ್ಟದ ತ್ರೋಬಾಲ್ ಕ್ರೀಡಾ ಪಟು ಮುಹಮ್ಮದ್ ಆಸೀಫ್ ಸಿನಾನ್‌ನನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪೋಷಕರು, ಊರವರು, ಶಾಲಾ ಹಿತೈಷಿಗಳು ಭಾಗವಹಿಸಿದ್ದರು.   ಶಾಲಾ ಸಂಚಾಲಕ ಹರೀಶ್ ಭಂಡಾರಿ ಟಿ. ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಐತ್ತಪ್ಪ ಸೇನವ ವಂದಿಸಿದರು. ಪ್ರಾಂಶುಪಾಲ ಶೇಖರ ರೈ ವರದಿ ವಾಚಿಸಿದರು. ಉಪನ್ಯಾಸಕರಾದ ಮಮತಾ, ಇಂದಿರಾ, ಅನಿಲ್, ಶಿಕ್ಷಕರಾದ ಚಂದ್ರಹಾಸ ರೈ, ಸತ್ಯನಾರಾಯಣ ಬಹುಮಾನದ ಪಟ್ಟಿ ವಾಚಿಸಿದರು. ಸಹಾಯಕ ಅಧ್ಯಾಪಕ ಎಚ್. ಶಿವರಾಮ ಭಟ್ ಹತ್ತೊಕ್ಕಲು ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.