ರೆಂಜಿಲಾಡಿ: ಪೊಸೊಳಿಕೆಯಲ್ಲಿ ಮಿಲಾದುನ್ನೆಬಿ ಆಚರಣೆ, ಮಕ್ಕಳ ಕಾರ‍್ಯಕ್ರಮ

Puttur_Advt_NewsUnder_1
Puttur_Advt_NewsUnder_1

renjilady-2ಕಡಬ: ರೆಂಜಿಲಾಡಿ ಗ್ರಾಮದ ಪೊಸೊಳಿಕೆ ಬದ್ರಿಯ ಜುಮ್ಮಾ ಮಸೀದಿಯಲ್ಲಿ ಮಿಲಾದುನ್ನೆಬಿ ಅಂಗವಾಗಿ ಮಕ್ಕಳ ಕಾರ‍್ಯಕ್ರಮ ಡಿ.12 ರಂದು ನಡೆಯಿತು. ಮಹಮ್ಮದ್ ಪೈಗಂಬರ್‌ರವರ ಜನ್ಮದಿನಾಚರಣೆ ಪ್ರಯುಕ್ತ ಬೆಳಿಗ್ಗೆ ಪೊಸೊಳಿಕೆ ಮಸೀದಿ ವಠಾರದಿಂದ ಮಸೀದಿಯ ಖತೀಬರಾದ ಆದಂ ಮುಸ್ಲಿಯಾರ್‌ರವರು ದುಃವಾ ಪ್ರಾರ್ಥನೆಯೊಂದಿಗೆ ಹೊರಟ ಮಿಲಾದ್ ಜಾಥಾ ಪೆಲತ್ರಾಣೆ ಮೂಲಕ ಪೇರಡ್ಕ ಜಂಕ್ಷನ್‌ಗೆ ಹೋಗಿ ಅಲ್ಲಿಂದ ಮೀನಾಡಿ ಮಿಲಾದ್ ಮೈದಾನದಲ್ಲಿ ಸಮಾಪಣೆಗೊಂಡು ಪೊಸೊಳಿಕೆ ಮಸೀದಿಯಲ್ಲಿ ಮಧ್ಯಾಹ್ನ ಮೊಲೂದ್ ಪಾರಾಯಣ ನಡೆಯಿತು. ರಾತ್ರಿ ಮೀನಾಡಿ ಮಿಲಾದ್ ವಠಾರದಲ್ಲಿ ನಡೆದ ಮಕ್ಕಳ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿ ಅಧ್ಯಕ್ಷ ಪುತ್ತುಂಞಿಯವರು, ಪ್ರವಾದಿ ಮಹಮ್ಮದ್ ಪೈಗಂಬರ್ ಆದರ್ಶವನ್ನು ಪರಿಪಾಲಿಸುತ್ತಾ ನಮ್ಮ ಜೀವನವನ್ನು ಸತ್ಯ, ಪ್ರೀತಿ, ವಾತ್ಸಲ್ಯದೊಂದಿಗೆ ನೆರೆಕರೆಯವರನ್ನು ಗೌರವಿಸುತ್ತಾ ಅಲ್ಲಾಹುವಿನ ಪ್ರಾರ್ಥನೆಯೊಂದಿಗೆ ಇಹಪರಗಳಲ್ಲಿ ವಿಜಯಿಗಳಾಗಬೇಕೆಂದರು. ಮಸೀದಿಯ ಖತೀಬರಾದ ಆದಂ ಮುಸ್ಲಿಯಾರ್ ದುಃವಾ ಆಶೀರ್ವಚನದೊಂದಿಗೆ ಮಿಲಾದುನ್ನೇಬಿ ಸಂದೇಶ ಸಾರಿದರು. ವೇದಿಕೆಯಲ್ಲಿ ಪೊಸೊಳಿಕೆ ಜಮಾಅತಿನ ಆಡಳಿತ ಮಂಡಳಿ ಕೋಶಾಧಿಕಾರಿ ಈಸುಫ್ ಪೊಸೊಳಿಕೆ, ಹನೀಫ್ ಮುಸ್ಲಿಯಾರ್ ಮೀನಾಡಿ ಉಪಸ್ಥಿತರಿದ್ದರು. ಜಮಾಅತ್ ಕಮಿಟಿಯ ಹಿರಿಯರಾದ ಬಡ್ವಕುಂಞಿ, ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಸದಸ್ಯ ದಾವೂದ್ ಮೀನಾಡಿ, ಬದ್ರುದ್ದೀನ್, ಉಪಾಧ್ಯಕ್ಷ ಇಬ್ರಾಹಿಂ ಪೆಲತ್ರಾಣೆ, ಮಹಮ್ಮದ್ ಪೆಲತ್ರಾಣೆ, ಹಾಜಿ ಮೊದೀನ್ ಮೀನಾಡಿ, ಇಬ್ರಾಹಿಂ ಪಿ.ಎಚ್, ಯಾಕುಬು ಪೆಲತ್ರಾಣೆ, ಇಲ್ಯಾಸ್, ಪಿ.ಎ ಶೆರೀಫ್, ಉಮ್ಮರ್ ಫಾರೂಕ್, ಹಾರಿಸ್ ಪೆಲತ್ರಾಣೆ, ನಿವೃತ್ತ ಸಿಆರ್‌ಪಿ ರಝಾಕ್ ಪೆಲತ್ರಾಣೆ, ಇಸ್ಮಾಯಿಲ್ ಮೀನಾಡಿ ಸೇರಿದಂತೆ ಜಮಾಅತರು ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ‍್ಯಕ್ರಮ ನಡೆದು ಬಹುಮಾನ ವಿತರಿಸಲಾಯಿತು. ಕಾರ‍್ಯದರ್ಶಿ ಸಿದ್ದೀಕ್ ಸ್ವಾಗತಿಸಿ, ವಂದಿಸಿದರು. ಕೊನೆಗೆ ಎಲ್ಲರಿಗೂ ಶೀರಣಿ ವಿತರಿಸಲಾಯಿತು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.