ಉರ್ಲಾಂಡಿ ಕಿರುರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ

Puttur_Advt_NewsUnder_1
Puttur_Advt_NewsUnder_1

urlandyವಾರ್ಡುಗಳ ರಸ್ತೆಯ ಅಭಿವೃದ್ಧಿಗೆ ಆದ್ಯತೆ – ಜಯಂತಿ ಬಲ್ನಾಡು

ಪುತ್ತೂರು: ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡುಗಳ ರಸ್ತೆಗೆಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.

ನಗರಸಭೆಯ 15ನೇ ವಾರ್ಡಿನ ಉರ್ಲಾಂಡಿ ಕಿರು ರಸ್ತೆಯ ಕಾಂಕ್ರೀಟೀಕರಣದ ಚಾಲನೆಗೆ ಗುದ್ಧಲಿ ಪೂಜೆ ಮಾಡಿದ ಬಳಿಕ ಅವರು ಮಾತನಾಡಿದರು. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವರೇ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.  ಪ್ರೊ.ಬಿ.ಜೆ ಸುವರ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮೆಲ್ಲರ ಕೋರಿಕೆಗೆ ತಕ್ಷಣ ಸ್ಪಂದನೆ ಮಾಡಿ ನಗರಸಭೆಯ ಅಧ್ಯಕ್ಷರು ಹಾಗೂ  ಸದಸ್ಯರು ಈ ರಸ್ತೆಯ ಕಾಮಗಾರಿಗೆ ಅನುದಾನ ಮಂಜೂರು ಮಾಡಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.  ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಬಿ.ವಿಶ್ವನಾಥ ಗೌಡ, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಎಚ್.ಮಹಮ್ಮದ್ ಆಲಿ, ಶಕ್ತಿಸಿನ್ಹ, ರಸ್ತೆಗೆ ಸ್ಥಳ ದಾನ ಮಾಡಿರುವ ರಾಜೀವಿ ವಿದ್ವಾನ್, ಕಚ್ಛಾ ರಸ್ತೆ ನಿರ್ಮಿಸಿರುವ ಎ.ಜೆ, ಉಮೇಶ್ ಹೆಗ್ಡೆ, ಸ್ವರ್ಣಲತಾ ಹಗ್ಡೆ, ಯಶೋಧ, ಅನಿಲ್ ಕುಮಾರ್ ಉರ್ಲಾಂಡಿ, ಜಯಶ್ರೀ, ಗುತ್ತಿಗೆದಾರರಾದ ಹಂಝ ರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.