Breaking News

ಬೊಳ್ಳಾರು: ಲಾರಿ ಪಲ್ಟಿ-ಚಾಲಕ, ನಿರ್ವಾಹಕ ಪಾರು

Puttur_Advt_NewsUnder_1
Puttur_Advt_NewsUnder_1

bollaru1 bollaru2

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮಗುಚಿ ಬಿದ್ದ ಘಟನೆ 34ನೇ ನೆಕ್ಕಿಲಾಡಿ ಬಳಿಯ ಬೊಳ್ಳಾರ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬೊಳ್ಳಾರಿನ ಪೆಟ್ರೋಲ್ ಪಂಪ್ ಸಮೀಪ ಈ ಘಟನೆ ಸಂಭವಿಸಿದ್ದು, ಮಂಗಳೂರಿನಿಂದ ಕಲ್ಲಿದ್ದಲನ್ನು ಹೇರಿಕೊಂಡು ತುಮಕೂರಿಗೆ ತೆರಳುತ್ತಿದ್ದ ಲಾರಿಯು ಬೊಳ್ಳಾರಿನ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಬಿದ್ದ ರಭಸಕ್ಕೆ ಲಾರಿಯು ಬಿದ್ದ ಸ್ಥಿತಿಯಲ್ಲಿಯೇ ಸುಮಾರು ೨೦-೩೦ ಮೀಟರ್‌ನಷ್ಟು ದೂರ ರಸ್ತೆಯಲ್ಲಿ ಜಾರಿಕೊಂಡು ಹೋಗಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚರಂಡಿಗೆ ಸಿಲುಕಿ ನಿಂತುಕೊಂಡಿದೆ. ಘಟನೆಯಿಂದ ಚಾಲಕ ಬೆಂಗಳೂರು ಮೂಲದ ಭರತ್ ಹಾಗೂ ಕ್ಲೀನರ್ ಸಣ್ಣಪುಟ್ಟ ತರಚಿದ ಗಾಯದಿಂದ ಅಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.