HomePage_Banner
HomePage_Banner
HomePage_Banner
HomePage_Banner

ಬೆಳಂದೂರು ಗ್ರಾ.ಪಂ: ಕಂದಾಯ ಅದಾಲತ್

Puttur_Advt_NewsUnder_1
Puttur_Advt_NewsUnder_1

balandooru-kandayaಕಾಣಿಯೂರು: ಕಂದಾಯ ಅದಾಲತ್‌ನಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಗ್ರಾಮ ಮಟ್ಟದಲ್ಲಿಯೇ ಪರಿಹರಿಸುವ ಕಾರ್ಯಕ್ರಮ ಇದಾಗಿದೆ. ಈ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕು ಎಂದು ಕಡಬ ವಿಶೇಷ ತಹಶೀಲ್ದಾರ್ ಲಿಂಗಯ್ಯರವರು ಹೇಳಿದರು. ಅವರು ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ವಿಶೇಷ ತಹಶೀಲ್ದಾರರ ಕಚೇರಿ ಕಡಬ ಇದರ ವತಿಯಿಂದ ಬೆಳಂದೂರು ಗ್ರಾ.ಪಂ ಸಭಾಂಗಣದಲ್ಲಿ ದ 14 ರಂದು ನಡೆದ ಬೆಳಂದೂರು, ಕುದ್ಮಾರು, ಕಾಮಣ ಗ್ರಾಮಗಳ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಹೆಚ್ಚಿನ ಜನರಿಗೆ ತಮ್ಮ ಜಾಗದ ಪಹಣಿ ಪತ್ರದಲ್ಲಿ ತಪ್ಪುಗಳಿದ್ದಲ್ಲಿ ಗೊತ್ತಿರುವುದಿಲ್ಲ. ಅದಾಲತ್‌ನಲ್ಲಿ ಅರ್ಜಿ ಕೊಟ್ಟು ಸರಿಪಡಿಸಿಕೊಳ್ಳಲು ಸುಲಭ ಅವಕಾಶವಿದೆ ಎಂದು ಹೇಳಿದರು. ಬೆಳಂದೂರು  ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಕೆರನಾರ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯೆ ಲಲಿತಾ ಈಶ್ವರ್, ಆರ್.ಐ ಕೊರಗಪ್ಪ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್‌ರವರು ಸ್ವಾಗತಿಸಿ, ಬೆಳಂದೂರು ಗ್ರಾಮಕರಣಿಕ ಪುಷ್ಪರಾಜ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.