Breaking News

ನರಿಮೊಗರು ಮರಾಟಿ ಯುವ ವೇದಿಕೆ ಅಧ್ಯಕ್ಷ: ಶ್ರೀಧರ ನಾಯ್ಕ, ಕಾರ್ಯದರ್ಶಿ: ಗಣೇಶ್ ನಾಯ್ಕ

Puttur_Advt_NewsUnder_1
Puttur_Advt_NewsUnder_1

 

narimoagaru-maratiಪುತ್ತೂರು: ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಯುವ ವೇದಿಕೆ ನರಿಮೊಗರು ಇದರ ರಚನೆ ಮಾಡಲಾಯಿತು. ಅಧ್ಯಕ್ಷ ರಾಗಿ ಶ್ರೀಧರ ನಾಯ್ಕ ಪುತ್ತಿಲ, ಉಪಾಧ್ಯಕ್ಷರುಗಳಾಗಿ ಜಯರಾಮ ಬೊಳಿಂಜ, ವಿಶ್ವನಾಥ ನಾಯ್ಕ ಬಜಪ್ಪಾಲ, ಕಾರ್ಯದರ್ಶಿಯಾಗಿ ಗಣೇಶ್ ನಾಯ್ಕ ನರಿಮೊಗರು, ಜತೆ ಕಾರ್ಯದರ್ಶಿಯಾಗಿ ನರೇಶ್ ನಾಯ್ಕ ಪುತ್ತಿಲ, ಕೋಶಾಧಿಕಾರಿಯಾಗಿ ವಿನಯ ನಾಯ್ಕ ಪುತ್ತಿಲ, ಕ್ರೀಡಾ ಕಾರ್ಯದರ್ಶಿಯಾಗಿ ಪುರುಷೋತ್ತಮ ನಾಯ್ಕ ಬರೆಕೋಲಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜೀವಿಕ ಮುಂಡೂರು, ಸಂಘಟನಾ ಕಾರ್ಯದರ್ಶಿಗಳಾಗಿ ಅವಿನಾಶ್ ನಾಯ್ಕ ಕೇದಗೆತಡಿ, ಶ್ವೇತಾ ಮಾಯಂಗಲ, ಯತೀಶ್ ಬಜಪ್ಪಾಲ, ಮಧು ನಾಯ್ಕ ಬಜಪ್ಪಾಲ, ಸಂತೋಷ್ ಎರ‍್ಲೆಕೊಟ್ಯ ಹಾಗೂ 12 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ನೂತನ ಕಾರ್ಯಕಾರಿ ಸಮಿತಿಗೆ ಸಂಘದ ಮಾಜಿ ಅಧ್ಯಕ್ಷೆ ಅಶ್ವಿನಿ ಬಿ.ಕೆ., ಶ್ವೇತಾ ಮಾಯಂಗಲ, ಸಂಘದ ಪ್ರಧಾನ ಕಾರ್ಯದರ್ಶಿ ದೇವಪ್ಪ ನಾಯ್ಕ ಕೇದಗೆತಡಿ ಶುಭಹಾರೈಸಿದರು. ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು ಸಭೆಯ ಅಧ್ಯಕ್ಷತೆ ವಹಿಸಿ, ನೂತನವಾಗಿ ಆಯ್ಕೆಯಾದ ಯುವ ವೇದಿಕೆಯ ನಿಬಂಧನೆ ಗಳನ್ನು ಸಭೆಗೆ ಮಂಡಿಸಿ ಯುವ ವೇದಿಕೆಗೆ ಶುಭಹಾರೈಸಿದರು. ಸಂಘದ ಉಪಾಧ್ಯಕ್ಷೆ ಪುಷ್ಪಾವತಿ ಸುಂದರ ನಾಯ್ಕ ಮಾಯಂಗಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.