ಕಾಸರಗೋಡಿನಲ್ಲಿ ಬೃಹತ್ ರೈತ ಸಮ್ಮೇಳನ; ವಸ್ತು ಪ್ರದರ್ಶನ, ಕ್ಯಾಂಪ್ಕೋ ಉತ್ಪನ್ನ  ಕಲ್ಪ ಡಾರ್ಕ್ ಚಾಕಲೇಟ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

kasaragoduಪುತ್ತೂರು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿ.ಪಿ.ಸಿ.ಆರ್.ಐ) ಕಾಸರಗೋಡು ಇದರ ಶತಮಾನೋತ್ಸವದ ಅಂಗವಾಗಿ ಬೃಹತ್ ರೈತ ಸಮ್ಮೇಳನ ಹಾಗೂ ವಸ್ತು ಪ್ರದರ್ಶನ ಡಿಸೆಂಬರ್ 10 ರಿಂದ13ರವರೆಗೆ ಕಾಸರಗೋಡಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಿಸೆಂಬರ್ 10 ರಂದು ಕೇಂದ್ರ ಕೃಷಿ ಹಾಗೂ ರೈತ ಅಭಿವೃದ್ದಿ ಖಾತೆಯ ಸಚಿವ  ರಾಧಾ ಮೋಹನ್ ಸಿಂಗ್ ಇವರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯು ಐ.ಸಿ.ಎ.ಆರ್ (Indian Council for Agricultural research ಕೃಷಿ ಭವನ, ನವದೆಹಲಿ) ಹಾಗೂ C.P.CR.I ಜೊತೆಯಲ್ಲಿ ಅಭಿವೃದ್ದಿ ಪಡಿಸಿದ ಸ್ವದೇಶಿ ಉತ್ಪನ್ನವಾದ  ಕ್ಯಾಂಪ್ಕೋ ಕಲ್ಪ ಡಾರ್ಕ್ ಚಾಕಲೇಟ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಕ್ಯಾಂಪ್ಕೋ ಕಲ್ಪ ಡಾರ್ಕ್ ಚಾಕಲೇಟನ್ನು ಇದೀಗ ಪುತ್ತೂರು ಮಾರುಕಟ್ಟೆಗೂ ವಿತರಿಸಲಾಗಿದ್ದು, 40 ಗ್ರಾಂ ತೂಕದ ಚಾಕಲೇಟ್ ಒಂದರ ಗರಿಷ್ಟ ಮಾರಾಟ ಬೆಲೆ ರೂ.100/- ಆಗಿರುತ್ತದೆ. ಈ ಚಾಕಲೇಟ್  ಉತ್ವನ್ನವು ತಾಳೆ ಹಾಗೂ ತೆಂಗಿನ ಎಳೆ ಚಿಗುರುಗಳಿಂದ ಪರಿಷ್ಕರಿಸಿದ ಸಕ್ಕರೆಯನ್ನು ಸೇರಿಸಿ (ಕೊಕೊ ಸ್ಯಾಪ್ ಚಿಲ್ಲರ್ ಟೆಕ್ನಾಲಜಿ)ಎಂಬ ಹೊಸ ಆವಿಷ್ಕಾರದೊಂದಿಗೆ ಐ.ಸಿ.ಎ.ಆರ್ ಹಾಗೂ ಸಿ.ಪಿ.ಸಿ.ಆರ್.ಐ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ್ದು ಬಹಳಷ್ಟು ಪುಷ್ಟಿದಾಯಕ ಅಂಶಗಳನ್ನು ಒಳಗೊಂಡಿರುವುದು ಈಗಾಗಲೇ ದೃಢಪಟ್ಟಿದೆ. ಈ ಉತ್ಪನ್ನವು ಶರೀರಕ್ಕೆ ಬೇಕಾದ ಪೂರಕ ಶಕ್ತಿಯನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಪೊಟಾಶಿಯಂ, ಮೆಗ್ನೇಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಒಳಗೊಂಡಿದ್ದು ವಿಟಮಿನ್ ಇ, ಬಿ, ಸಿ ಹಾಗೂ ನಾರಿನ ಅಂಶವನ್ನು ಹೆಚ್ಚಿಗೆ ಹೊಂದಿರುತ್ತದೆ ಎಂದು ತಿಳಿದು ಬಂದಿದೆ.

ಪುತ್ತೂರಿನ ಬಹುತೇಕ ಬೇಕರಿ, ಔಷಧಾಲಯಗಳು, ಹೊಟೇಲ್‌ಗಳು, ಸುಪರ್ ಮಾರ್ಕೆಟ್ ಹಾಗೂ ಇನ್ನಿತರ ಸ್ಥಳಗಳಲ್ಲಿ  ಕ್ಯಾಂಪ್ಕೋ ಕಲ್ಪ ಡಾರ್ಕ್ ಚಾಕಲೇಟ್ ಮಾರಾಟಕ್ಕೆ ಲಭ್ಯವಿದ್ದು ಗ್ರಾಹಕರು, ಚಾಕಲೇಟ್ ಪ್ರಿಯರು ಖರೀದಿಸಿ ಪ್ರೋತ್ಸಾಹಿಸಬೇಕಾಗಿ ಕ್ಯಾಂಪ್ಕೋ ಸಂಸ್ಥೆ ವಿನಂತಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.