Breaking News

ಸಮಸ್ತ ಅಧ್ಯಕ್ಷ ಎ.ಪಿ. ಮುಹಮ್ಮದ್ ಮುಸ್ಲಿಯಾರ್ ನಿಧನ ಸಾತ್ವಿಕ ಉಲಮಾಗಳ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ -ದಾರಿಮಿ

Puttur_Advt_NewsUnder_1
Puttur_Advt_NewsUnder_1

 

samasthaಪುತ್ತೂರು: ಮುಸ್ಲಿಂ ಸಮಾಜಕ್ಕೆ ಧಾರ್ಮಿಕವಾಗಿ ನಾಯಕತ್ವ ನೀಡುತ್ತಿರುವ ’ಸಮಸ್ತ’ ಉಲಮಾ ಒಕ್ಕೂಟದ ಅಧ್ಯಕ್ಷ ಶೈಖುನಾ ಕುಮಾರಂಪುತ್ತೂರು ಉಸ್ತಾದ್‌ರವರ ನಿಧನಕ್ಕೆ ಸಂತಾಪ ಸೂಚಕ ಪ್ರಾರ್ಥನಾ ಸಭೆಯು  ಸಮಸ್ತದ   ವಿವಿಧ ಸಂಘಟನೆಗಳ ವತಿಯಿಂದ  ಪುತ್ತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಸಲಾಯಿತು

 ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ  ಎಸ್.ಬಿ. ಮುಹಮ್ಮದ್ ದಾರಿಮಿರವರು ಮಾತನಾಡಿ, ’ಸಮಸ್ತ’ದ ಸಾರಥಿಯಾಗಿದ್ದ ಮುಹಮ್ಮದ್ ಉಸ್ತಾದ್‌ರವರು ತಳಮಟ್ಟ ದಲ್ಲಿ ಸಂಘಟನೆಗಾಗಿ ಹಲವಾರು ವರ್ಷಗಳ ಕಾಲ ದುಡಿದು ಎತ್ತರಕ್ಕೆ ಏರಿದವರು, ಮಾದರಿ ಜೀವನದ ಮೂಲಕ ಜನಮನ್ನಣೆ ಪಡೆದವರಾಗಿದ್ದು ಅವರ ಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

  ಸಮಾರಂಭದಲ್ಲಿ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿ ಮೀನ್ ಅಧ್ಯಕ್ಷ ಆಸಿಫ್ ಅಝ್ಹರಿ, ಕೋಡಿಂಬಾಡಿ ಖತೀಬ್  ಕೆ.ಎಂ.ಎ. ಕೊಡುಂಗಾಯಿ ಮೊದಲಾದವರು ಮಾತನಾಡಿದರು. ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಯು. ಅಬ್ದು ಹಾಜಿ, ಕಾರ್ಯದರ್ಶಿ ಎಲ.ಟಿ. ಅಬ್ದುಲ್ ರಜಾಕ್ ಹಾಜಿ, ಜಿ ವಕ್ಫ್ ಸಲಹಾ ಸಮಿತಿ ಸದಸ್ಯ ಪಿ.ಬಿ. ಹಸನ್ ಹಾಜಿ, ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಹುಸೈನ್ ಕೆನರಾ, ದ.ಕ. ಜಿ ಮದ್ರಸ ಮೆನೇಜ್‌ಮೆಂಟ್ ಉಪಾಧ್ಯಕ್ಷ ಅಬ್ದುಲ್ ರಹಮಾನ್ ಅಝಾದ್, ಯಾಕೂಬ್  ಹಾಜಿ  ದರ್ಬೆ, ಕೆ.ಐ.ಸಿ. ಮೆನೇಜರ್ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ದ.ಕ. ಜಿ ಎಸ್‌ಕೆಎಸ್‌ಎಸ್‌ಎಫ್ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಅಬ್ದುಲ್ ಹಮೀದ್ ಹನೀಫಿ ದರ್ಬೆ, ಅಬ್ದುಲ್ ರಹ್ಮಾನ್ ಹಾಜಿ ಅರಮನೆ, ಹಾಜಿ ಯು.ಪಿ. ಅಬ್ಬಾಸ್, ಹಸೈನಾರ್ ಹಾಜಿ ಸಿಟಿ ಬಝಾರ್, ಮುಫತ್ತಿಶ್ ಉಮರ್ ದಾರಿಮಿ, ಮೆನೇಜರ್ ಇಬ್ರಾಹಿಂ ಮುಸ್ಲಿಯಾರ್, ಹುಸೈನ್ ಮುಹದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.