Breaking News

ಬಡಗು ತಿಟ್ಟಿನ ಹಿರಿಯ ಸ್ತ್ರೀ ಪಾತ್ರಧಾರಿ ವಂಡ್ಸೆ ನಾರಾಯಣ ಗಾಣಿಗರಿಗೆ ಪಾತಾಳ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

 

narayana-ganigaಪುತ್ತೂರು: ಬಡಗು ತಿಟ್ಟಿನ ಹಿರಿಯ ಸ್ತ್ರೀಪಾತ್ರಧಾರಿ ವಂಡ್ಸೆ ನಾರಾಯಣ ಗಾಣಿಗರಿಗೆ ಈ ಸಾಲಿನ ’ಪಾತಾಳ ಪ್ರಶಸ್ತಿ’ ಘೋಷಣೆಯಾಗಿದೆ. 2017  ಜ.1 ರಂದು ಸಂಜೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಶ್ರೀ ಎಡನೀರು ಮೇಳದ ಯಕ್ಷಗಾನ ಸಪ್ತಾಹದ ಸಮಾರೋಪದಂದು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಉಪ್ಪಿನಂಗಡಿ ಸನಿಹದ ಪಾತಾಳ ವೆಂಕಟ್ರಮಣ ಭಟ್ಟರು ತನ್ನ ಯಕ್ಷಗಾನ ಕಲಾ ಸೇವೆಗಾಗಿ ಮತ್ತು ತನಗೆ ಯಕ್ಷಗಾನವು ತಂದಿತ್ತ ಖ್ಯಾತಿಗಾಗಿ ’ಪಾತಾಳ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಾರೆ. ಇದಕ್ಕಾಗಿ ’ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು’ ಎನ್ನುವ ಪ್ರತಿಷ್ಠಾನವನ್ನು ರೂಪಿಸಿದ್ದಾರೆ. ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಪ್ರತಿಷ್ಠಾನದ ಗೌರವಾಧ್ಯಕ್ಷರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷರು. ಹದಿಮೂರನೇ ವರುಷದ ಪ್ರಶಸ್ತಿಗೆ ವಂಡ್ಸೆ ನಾರಾಯಣ ಗಾಣಿಗರು ಆಯ್ಕೆಯಾಗಿದ್ದಾರೆ.  ಎಪ್ಪತ್ತೊಂಭತ್ತರ ಹರೆಯದ ನಾರಾಯಣ ಗಾಣಿಗರು ವಿವಿಧ ಮೇಳಗಳಲ್ಲಿ ಐದು ದಶಕಗಳ ಕಾಲ ವ್ಯವಸಾಯ ಮಾಡಿದ್ದರು. ಎಲೆ ಮರೆಯ ಕಾಯಾಗಿ ನಿವೃತ್ತ ಜೀವನವನ್ನು ಸಾಗಿಸುತ್ತಿರುವ ಗಾಣಿಗರು ಬಯಲಾಟ ರಂಗಸ್ಥಳದ ಅಪ್ರತಿಮ ಸ್ತ್ರೀಪಾತ್ರಧಾರಿಯಾಗಿ ಖ್ಯಾತರಾದವರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.