ದ.17-18: ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳದಲ್ಲಿ ಧಾರ್ಮಿಕ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಳುನಾಡಿನ ಕಾರಣಿಕ ವೀರಪುರುಷರಾದ ಕೋಟಿ ಚೆನ್ನಯರ ಜನ್ಮ ಸ್ಥಳವಾದ ಪಡುಮಲೆ ಕ್ಷೇತ್ರದಲ್ಲಿ ದ.೧೭ ಹಾಗೂ ೧೮ರಂದು ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಕುಂಟಾರು ರವೀಶ ತಂತ್ರಿ ಹಾಗೂ ಅನಂತರಾಜ ಭಟ್ ಮಜೂರ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಪಡುಮಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನರ ಅಪೇಕ್ಷೆಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕೋಟಿ ಚೆನ್ನಯರ ಆರಾಧ್ಯ ಕುಲದೈವ ನಾಗಬ್ರಹ್ಮ ದೇವರಿಗೆ ವಿಶೇಷ ಪೂಜೆ, ಕೋಟಿ ಚೆನ್ನಯರ ಕೈಯಲ್ಲಿ ವಧೆಗೊಂಡ ಮಲ್ಲಯ್ಯ ಬುದ್ಧಿವಂತ ಬ್ರಹ್ಮರಾಕ್ಷಸನಾಗಿ ನಾಗಬ್ರಹ್ಮರ ಕೈಯಲ್ಲಿದ್ದು ಆತನ ಆತ್ಮಕ್ಕೆ ಮೋಕ್ಷ ನೀಡಿ ಪರಿಹಾರ ಕೊಡುವ ಕಾರ್ಯಕ್ರಮ ನಡೆಯಲಿದೆ ಎಂದು ಪಡುಮಲೆಯ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.