ದ.17: ಶಾಂತಿನಗರದಲ್ಲಿ ಹೊನಲು ಬೆಳಕಿನ ‘ಇಯರ್ ಎಂಡ್ ಟ್ರೋಫಿ’ ಕ್ರಿಕೆಟ್-ಗಾಲಿ ಕುರ್ಚಿ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಂತಿನಗರ ಕ್ರಿಕೆಟ್ ಕ್ಲಬ್ ವತಿಯಿಂದ ೪ನೇ ವರ್ಷದ ೭ ಜನರ ಮುಕ್ತ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ’ಇಯರ್ ಎಂಡ್ ಟ್ರೋಫಿ-೨೦೧೬’ ಮತ್ತು ವಿಕಲಚೇತನರಿಗೆ ಗಾಲಿ ಖುರ್ಚಿ ವಿತರಣೆ ದ.17ರಂದು ರಾತ್ರಿ ಕೋಡಿಂಬಾಡಿಯ ಶಾಂತಿನಗರದ ಪೂಜಾ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ ರೂ ೧೦ ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ೬ ಸಾವಿರ ಮತ್ತು ಟ್ರೋಫಿ, ತೃತೀಯ, ಚತುರ್ಥ ಬಹುಮಾನ, ಅಲ್ಲದೆ, ಉತ್ತಮ ದಾಂಡಿಗ ಪ್ರಶಸ್ತಿ, ಉತ್ತಮ ಎಸೆತಗಾರ, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ  ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದ. ೧೭ರಂದು ರಾತ್ರಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಿಕಲಚೇತನರಿಗೆ ಗಾಲಿ ಕುರ್ಚಿ ವಿತರಣೆ ಮಾಡಲಾಗುವುದು ಮತ್ತು ದ.೧೮ರಂದು ಬೆಳಿಗ್ಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಮಳೆ ಬಂದರೂ ಪಂದ್ಯಾಕೂಟ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.