ಪಂಡ್‌ದ್ ಸುಖ ಇಜ್ಜಿ ತುಳು ನಾಟಕದ ಉದ್ಘಾಟನೆ ಕಲೆ,ಕಲಾವಿದರಿಂದ ಸಮಾಜಕ್ಕೆ ಗೌರವ-ಮಠಂದೂರು

Puttur_Advt_NewsUnder_1
Puttur_Advt_NewsUnder_1

 

 pand-d-sukha-ijjipand-d-sukha-ijji1ನಾಟಕದಿಂದ ಸಮಾಜಕ್ಕೆ ಉತ್ತಮ ಸಂದೇಶ-ಚನಿಲ

 ಬೂಡಿಯಾರ್ ನಾಯಕತ್ವದಲ್ಲಿ ಸಂಸ್ಥೆ ಬೆಳೆಯಲಿ-ಪುರಂದರ ರೈ

 ಪುತ್ತೂರಿಗೆ ಗೌರವ ತರಲಿ -ಜಯಂತ್ ನಡುಬೈಲು

 ನಾಟಕದಿಂದ ಮನಸಂತೃಪ್ತಿ-ದುರ್ಗಾಪ್ರಸಾದ್ ರೈ

 ಅಕಾಡೆಮಿಯಿಂದ ಸಹಕಾರ-ಚಂದ್ರಹಾಸ್ ರೈ

 ಸಂಸ್ಥೆಯಿಂದ ಕಲಾವಿದರಿಗೆ ಸಹಕಾರ-ಬೂಡಿಯಾರ್

ಪುತ್ತೂರು: ಕಲೆ ಮತ್ತು ಕಲಾವಿದರಿಂದ ಸಮಾಜಕ್ಕೆ ಗೌರವ ತರುವ ಕೆಲಸವಾಗುತ್ತಿದೆ.  ಈ ನಿಟ್ಟಿನಲ್ಲಿ ಬೂಡಿಯಾರ್ ರಾಧಾಕೃಷ್ಣ ರೈರವರ ಮುಂದಾಳತ್ವದಲ್ಲಿ ಆರಂಭಗೊಂಡಿರುವ ಪುತ್ತೂರು ಕಲಾವಿದೆರ್ ಸಂಘಟನೆಯಿಂದ ಕಲಾವಿದರಿಗೆ ದೇಶ-ವಿದೇಶಗಳಲ್ಲಿ ಗೌರವ ದೊರೆಯಲಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.

ಅವರು. ದ.14ರಂದು  ಪುತ್ತೂರು ಪುರಭವನದಲ್ಲಿ  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾದ, ಪುತ್ತೂರು ಕಲಾವಿದೆರ್ ಅಭಿನಯಿಸುವ ’ಪಂಡ್‌ದ್ ಸುಖ ಇಜ್ಜಿ’ ತುಳುನಾಟಕದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ತುಳು ಭಾಷೆಗೆ ಪ್ರೋತ್ಸಾಹ ದೊರೆಯುವ ಕೆಲಸ ನಾಟಕಗಳಿಂದ ಆಗುತ್ತಿದ್ದು, ಪುತ್ತೂರಿನ ಗೌರವವನ್ನು  ಹತ್ತೂರುಗಳಿಗೆ ಮುಟ್ಟಿಸುವ ಕಾರ‍್ಯ ಈ ಸಂಸ್ಥೆಯಿಂದ  ಆಗಲಿ ಎಂದರು.

ಪುತ್ತೂರು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿರವರು ಮಾತನಾಡಿ ನಾಟಕದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಬೇಕು ಎಂದು ಹೇಳಿ,ತುಳು ನಾಟಕರಂಗದ ಈ ಸಂಸ್ಥೆಯು ಉನ್ನತಿ ಸಾಧಿಸಲಿ ಎಂದರು. ಉದ್ಯಮಿ ಮಿತ್ರಂಪಾಡಿ ಪುರಂದರ ರೈರವರು ಮಾತನಾಡಿ ಬೂಡಿಯಾರ್ ರಾಧಾಕೃಷ್ಣ ರೈರವರ ನಾಯಕತ್ವದಲ್ಲಿ ಪುತ್ತೂರು ಕಲಾವಿದೆರ್ ಸಂಘಟನೆಯು ಉತ್ತಮವಾದ ಹೆಸರನ್ನು ಪಡೆಯಲಿ ಎಂದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಮಾತನಾಡಿ ಪುತ್ತೂರಿಗೆ ಗೌರವವನ್ನು ತರುವ ಕೆಲಸ ಸಂಸ್ಥೆಯಿಂದ ಆಗಲಿ ಎಂದು ಶುಭಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈರವರು ಮಾತನಾಡಿ ನಾಟಕದಿಂದ ಮನಸಂತೃಪ್ತಿ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ್ ರೈ ಮಾತನಾಡಿ ಅಕಾಡೆಮಿಯಿಂದ ತುಳು ನಾಟಕಕ್ಕೆ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಪುತ್ತೂರು ಕಲಾವಿದೆರ್ ತಂಡದ ಯಜಮಾನ ಬೂಡಿಯಾರ್ ರಾಧಾಕೃಷ್ಣ ರೈರವರು ಪ್ರಾಸ್ತಾವಿಕವಾಗಿ ಮಾತನಾಡಿ  ತಂಡದ ನಾಟಕಕ್ಕೆ ಈಗಾಗಲೇ 5 ಕಡೆ ಬುಕ್ಕಿಂಗ್ ಆಗಿದ್ದು, ತಂಡದಿಂದ ಉಳಿಕೆ ಆಗುವ ಹಣದಿಂದ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುವುದಾಗಿ ತಿಳಿಸಿ,ಕಲಾಭಿಮಾನಿಗಳ ಸಹಕಾರವನ್ನು ಬಯಸಿದರು.

ಸನ್ಮಾನ: ನಾಟಕದ ನಿರ್ದೇಶಕ ಪ್ರಕಾಶ್ ಕೆ.ತೂಮಿನಾಡುರವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಮತ್ತು ಉದ್ಯಮಿ ಪುರಂದರ ರೈ ಮಿತ್ರಂಪಾಡಿರವರು ಸನ್ಮಾನಿಸಿದರು.

ಬಲ್ನಾಡು ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಕಾಶಚಂಧ್ರ ಆಳ್ವ, ಪುತ್ತೂರಿನ ವೈದ್ಯ ಡಾ.ಸುರೇಶ್ ಪುತ್ತೂರಾಯರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ, ಉದ್ಯಮಿಗಳಾದ ಅರುಣ್ ಕುಮಾರ್ ರೈ ಅನಾಜೆ, ಭರತ್ ರೈ ಕೈಕಾರ, ತಾ.ಪಂ,.ಸದಸ್ಯ ಸಾಜ ರಾಧಾಕೃಷ್ಣ ರೈ, ತುಳು ಸಿನಿಮಾ ನಿರ್ದೇಶಕ ಸುಂದರ ರೈ ಮಂದಾರ, ಕುಂಬ್ರ  ಸಿ.ಎ.ಬ್ಯಾಂಕ್ ನಿರ್ದೇಶಕ ವಿನೋದ್ ಶೆಟ್ಟಿ ಅರಿಯಡ್ಕರವರುಗಳು ಉಪಸ್ಥಿತರಿದ್ದರು. ಪುತ್ತೂರು ಜಾನಪದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು. ಬಳಿಕ ಪಂಡ್‌ದ್ ಸುಖ ಇಜ್ಜಿ ತುಳುನಾಟಕ ಪ್ರದರ್ಶನ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.