Breaking News

ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ; 11 ನಾಮಪತ್ರ ಸಲ್ಲಿಕೆ

Puttur_Advt_NewsUnder_1
Puttur_Advt_NewsUnder_1

ದ.18: ನಾಮಪತ್ರ ಸಲ್ಲಿಸಲು ಕೊನೆಯ ದಿನ 

ದ.19: ನಾಮಪತ್ರ ಪರಿಶೀಲನೆ

ದ.20: ನಾಮಪತ್ರ ಹಿಂತೆಗೆಯಲು ಕೊನೆಯ ದಿನ

ದ.26: ಚುನಾವಣೆ, ಮತ ಎಣಿಕೆ, ಫಲಿತಾಂಶ ಪ್ರಕಟ

ಪುತ್ತೂರು: ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ 5 ವರ್ಷ ಅವಧಿಗೆ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಕ್ಕೆ ದ.26 ರಂದು ನಡೆಯಲಿರುವ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ದ.11 ರಿಂದ ಆರಂಭಗೊಂಡಿದ್ದು, ದ.15 ರ ತನಕ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿದೆ.

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ನಾರಾಯಣ ನಾಯ್ಕ ನರಿಮೊಗರು ಮತ್ತು ಶಿವಪ್ಪ ಪುರುಷ ಕೂಡುರಸ್ತೆ (ಸಾಮಾನ್ಯ), ರಘುನಾಥ್ ಬಿ.ಎಸ್. ಶೆಟ್ಟಿಮಜಲು (ಹಿ.ವ.), ಕಮಲ ಜನತಾ ಕಾಲನಿ ನರಿಮೊಗರು (ಪರಿಶಿಷ್ಟ ಜಾತಿ), ಜಗನ್ನಾಥ ಶಾಂತಿಗೋಡು (ಸಾಮಾನ್ಯ), ಕೇಶವ ಪೂಜಾರಿ ಮುಕ್ವೆ (ಹಿ.ವ.), ಪದ್ಮಯ್ಯ ಗೌಡ ಆನಡ್ಕ (ಸಾಮಾನ್ಯ), ಉಷಾ ಆನಡ್ಕ  (ಮಹಿಳೆ ಮೀಸಲು), ಕರುಣಾಕರ ನಾಯಕ್ ನರಿಮೊಗರು (ಸಾಮಾನ್ಯ), ರತ್ನಾಕರ ಮೇಲಾಂಟ ನರಿಮೊಗರು (ಸಾಮಾನ್ಯ) ಹಾಗೂ ವಿಜಯಲಕ್ಷ್ಮೀ ಕೂಡುರಸ್ತೆ (ಮಹಿಳಾ ಸಾಮಾನ್ಯ) ರವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ದ.18 ಕೊನೆಯ ದಿನವಾಗಿದೆ. ದ.19 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ದ.20 ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು, ಅದೇ ದಿನ ಅಪರಾಹ್ನ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ದ.26 ರಂದು ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ  ಎಂದು ಚುನಾವಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.