ಬೊಳುವಾರಿನಲ್ಲಿ ಮನೆಗೆ ಆಕಸ್ಮಿಕ ಬೆಂಕಿ  – ಸಾಮಾಗ್ರಿಗಳಿಗೆ ಹಾನಿ

Puttur_Advt_NewsUnder_1
Puttur_Advt_NewsUnder_1

6

1 3 5

ಪುತ್ತೂರು: ಬೊಳುವಾರು ಸ.ಕಿ.ಪ್ರಾ.ಶಾಲೆಯ ಬಳಿಯ ಬಾಡಿಗೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಾಮಾಗ್ರಿಗಳು ಸುಟ್ಟು ಹೋದ ಘಟನೆ ದ.16ರಂದು ಮಧ್ಯಾಹ್ನ ನಡೆದಿದೆ.

ಕೊಂಕಣ್ ಗ್ಯಾಸ್‌ನ ಮಾಲಕ ಬೊಳುವಾರು ನಿವಾಸಿ ಉದಯ ಭಟ್‌ರವರ ಮಾಲಕತ್ವದ ಕಟ್ಟಡವೊಂದರಲ್ಲಿ ಆನಂದ ಮತ್ತು ವಿಜಯ ದಂಪತಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಆನಂದ್ ಮತ್ತು ವಿಜಯರವರು ಅನ್ಯ ಕಾರ್ಯನಿಮಿತ್ತ ಹೊರಗೆ ಹೋಗಿದ್ದರು. ಮಧ್ಯಾಹ್ನ ವೇಳೆ ಮನೆಯೊಳಗಿನಿಂದ ಹೊಗೆ ಬರುತ್ತಿರುವುದು ಗಮನಿಸಿದ ಪಕ್ಕದ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರಾದ ಮಂಜುನಾಥ್, ಯೋಗೀಶ್, ಹರಿದಾಸ್ ಶೆಣೈ, ಕಾರ್ಮಿಕರಾದ ಮಿಥುನ್, ಹರೀಶ್, ಕಿಶೋರ್, ಬಾಲಕೃಷ್ಣ, ಪುರುಷೋತ್ತಮ, ಸುಧೀರ್‌ರವರು ಬೆಂಕಿ ನಂದಿಸಲು ಸಹಕರಿಸಿದರು. ಅಗ್ನಶಾಮಕ ದಳ ಸ್ಥಳಕ್ಕೆ ಆಗಮಿಸಿದ ಬಳಿಕ ಸಿಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಎಸ್.ಐ ಒಮನ ರವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತಿತ್ತು.

ವರ್ಷದ ಹಿಂದೆಯೂ ಇದೇ ಮನೆಗೆ ಬೆಂಕಿ:

ವರ್ಷದ ಹಿಂದೆಯೂ ಇದೇ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹತ್ತಿಕೊಂಡಿತ್ತು. ಆ ಸಮಯದಲ್ಲಿ ಉದಯ ಆಚಾರ್ಯ ಎಂಬವರು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು. ಆ ಘಟನೆಯಲ್ಲಿ ರಿಕ್ಷಾ ಚಾಲಕ ಇಸ್ಮಾಯಿಲ್, ಸ್ಥಳೀಯ ರಾಜು ಮತ್ತು ಉದಯ ಆಚಾರ್ಯರವರು ಗಾಯಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.