ಕಾಣಿಯೂರು: ಬೆಳಂದೂರಿನ ನೂತನ ಮಸೀದಿಯ ಉದ್ಘಾಟನೆಯ ಪ್ರಯುಕ್ತ ನಡೆಯುತ್ತಿರುವ ನಾಲ್ಕು ದಿನಗಳ ಮತ ಪ್ರಭಾಷಣ ಕಾರ್ಯಕ್ರಮದ ಪ್ರಥಮ ದಿನವಾದ ದ 15ರಂದು ಅಸ್ತಮಿಸಿದ ಶುಕ್ರವಾರ ರಾತ್ರಿ ಮತಪ್ರಭಾಷಣಗಾರರಾಗಿ ಆಗಮಿಸಿದ ಆಲಂಬಾಡಿ ಜುಮಾ ಮಸೀದಿಯ ಖತೀಬ್ ಅಶ್ರಫ್ ಜೌಹರಿ ಎಮ್ಮೆಮಾಡುರವರು ಮಾತನಾಡಿ, ಪ್ರವಾದಿ(ಸ.ಅ)ರವರ ಆದರ್ಶ ತತ್ವಗಳನ್ನು ಅನುಸರಿಸಿ ಜೀವಿಸಿದವನಿಗೆ ಮಾತ್ರ ಎರಡೂ ಲೋಕದಲ್ಲಿ ಜಯ. ಪ್ರತಿ ಹೊತ್ತು ಕಡ್ಡಾಯ ನಮಾಜ್,ಕುರ್ಆನ್, ಪಾರಾಯಣ, ದಾನ ಸತ್ಕರ್ಮಗಳನ್ನು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಸ್ಥಾನಮಾನಗಳನ್ನು ಕಲ್ಪಿಸಿದ ಇಸ್ಲಾಂ ಧರ್ಮದಲ್ಲಿ ಸ್ವಹಾಬಿವರ್ಯರು ಧರ್ಮಪತ್ನಿಯರನ್ನು ತಮ್ಮ ಜೀವನ ಶೈಲಿಯಲ್ಲಿ ರೋಲ್ ಮಾಡೆಲ್ಗಳಾಗಿ ಆರಾಧಿಸಬೇಕೆ ಹೊರತು ಸಿನಿಮಾ ತಾರೆಯರನ್ನಲ್ಲ ಎಂದು ಹೇಳಿದರು. ಮತಪ್ರಭಾಷಣ ಕಾರ್ಯಕ್ರಮದ ಉದ್ಘಾಟನೆಯನ್ನು ಕೂರತ್ ಮುದರ್ರಿಸ್ ಅಲ್ಫಾಳಿಲಿ ಅಬ್ದುಲ್ ಖಾದಿರ್ ಹನೀಫಿರವರು ನೆರವೇರಿಸಿದರು. ಬೆಳಂದೂರಿನಲ್ಲಿ ನೂತನ ಮಸೀದಿ ನಿರ್ಮಾಣದ ದಾನಿ ಅಬ್ದುಲ್ ಕರೀಂ ಹಾಜಿ ಎಟಿಸಿ ಕಾಣಿಯೂರು, ಹಾಗೂ ಅವರ ಸಹೋದರ ಅಬ್ದುಲ್ ಕುಂಞ ಹಾಜಿ ಆಲಂಬಾಡಿ, ಪುತ್ತೂರು ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ, ಸಾಬೂ ಹಾಜಿ ಕೆಲೆಂಬ್ರಿ, ಯೂಸೂಫ್ ಸಖಾಫಿ ದೇವಸ್ಯ, ಖತೀಬ್ ಮಾಲೆಂಗ್ರಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಂದೂರು ಗ್ರಾ.ಪಂ ಸದಸ್ಯ ನಝೀರ್ ದೇವಸ್ಯ, ಅತಿಫ್ ಕಜೆ ರೆಂಜಲಾಡಿ, ಮಿಲಾದ್ ಸಮಿತಿಯ ಅಧ್ಯಕ್ಷ ಮತ್ತು ಸರ್ವ ಸದಸ್ಯರು, ಬೆಳಂದೂರಿನ ಮುಸ್ಲಿಂ ಬಾಂದವರು ಸಹಕರಿಸಿದರು. ಅಬ್ದುಲ್ ಲತೀಫ್ ಫಾಳಿಲಿ ಮಿಸ್ಬಾಹಿ ಬೆಳಂದೂರು ಸ್ವಾಗತಿಸಿದರು.