ಪುತ್ತೂರಿನಲ್ಲಿ ಬಜರಂಗದಳ ಆಟೋ ಚಾಲಕ ಮಾಲಕರ ಧರ್ಮಜಾಗೃತಿ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷ ಬಾಲಕೃಷ್ಣ ಗೌಡ, ಕಾರ್ಯದರ್ಶಿ ಶರತ್ ಕುಮಾರ್

bajarangadalaಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಧರ್ಮ ಜಾಗೃತಿಗಾಗಿ ಆಟೋ ಚಾಲಕ ಮಾಲಕರ  ಧರ್ಮಜಾಗೃತಿ ಘಟಕ ಹುಟ್ಟಿಕೊಂಡಿದ್ದು ಘಟಕದ ಗೌರವಾಧ್ಯಕ್ಷರಾಗಿ ಡಾ. ಕೃಷ್ಣ ಪ್ರಸನ್ನ, ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಸೂತ್ರಬೆಟ್ಟು, ಕಾರ್ಯದರ್ಶಿಯಾಗಿ ಶರತ್ ಕುಮಾರ್ ಕಡೇಶಿವಾಲಯ, ಸಂಯೋಜಕರಾಗಿ ರಾಜೇಶ್ ಪೆರಿಗೇರಿ ಆಯ್ಕೆಗೊಂಡಿದ್ದಾರೆ.

ಇಂದು ಗರುಡ ತೇಜ ರಥ: ದ.17ರಂದು ಪುತ್ತೂರಿನಲ್ಲಿ ಧರ್ಮ ಜಾಗೃತಿ ರಥ ಏಕತೆಯ ಪಥ’ಎಂಬ ವಾಕ್ಯದಡಿಯಲ್ಲಿ ಗರುಡ ತೇಜ ವಾಹನ ಜಾಥಾ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷದ್ ಬಜರಂಗದಳ ಆಟೋ ಚಾಲಕ ಮಾಲಕರ ಘಟಕದ ಗೌರವಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಳಿಗ್ಗೆ ದರ್ಬೆ ವೃತ್ತದಿಂದ ರಿಕ್ಷಾ ಚಾಲಕ ಮಲಕರ ವಾಹನ ಜಾಥಾ ಪ್ರಾರಂಭಗೊಂಡು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನ ಸುಧನ್ವ ಆಚಾರ್ಯ ರ‍್ಯಾಲಿ ಉದ್ಘಾಟಿಸಲಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಡಾ. ಎಂ.ಕೆ.ಪ್ರಸಾದ್ ಸಭಾಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ್ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ವಿ.ಹಿಂ.ಪ. ಪುತ್ತೂರು ಜಿಲ್ಲೆ ಅಧ್ಯಕ್ಷ ಯು.ಪೂವಪ್ಪ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಘಟಕದ ಅಧ್ಯಕ್ಷ ಬಾಲಕೃಷ್ಣ ಗೌಡ ಸೂತ್ರಬೆಟ್ಟು, ಸಂಯೋಜಕ ರಾಜೇಶ್ ಪೆರಿಗೇರಿ, ಬಜರಂಗದಳ ಸಂಯೋಜಕ ನಿತಿನ್ ನಿಡ್ಪಳ್ಳಿ ಉಪಸ್ಥಿತರಿದ್ದರು.

ಧರ್ಮದ ಕುರಿತ ಹೋರಾಟಕ್ಕೆ ಸೀಮಿತ ಘಟಕ

ಹಿಂದೂ ಧರ್ಮಕ್ಕೆ, ಮಾತೆಯರಿಗೆ ಅನ್ಯಾಯವಾದಾಗ ಅದರ ವಿರುದ್ಧ ಪ್ರತಿಭಟಿಸುವ ಉzಶ ಮತ್ತು ಹಿಂದೂ ಸಂಘಟನೆಯ ಶಕ್ತಿಯಾಗಿ ಸಮಾಜಕ್ಕೆ ಅರ್ಪಣೆಗೊಳಿಸಲು ಈ ಘಟಕ ಕಾರ್ಯನಿರ್ವಹಿಸಲಿದೆ. ಇಲ್ಲಿ ಯಾವುದೇ ರಿಕ್ಷಾ ಯೂನಿಯನ್ ವಿಚಾರ ಬರುವುದಿಲ್ಲ. ಹಿಂದೂ ಧರ್ಮದ ಪರ ಬರುವವರಿಗೆ ಸಂಘಟನೆ ಸ್ವಾಗತ ನೀಡಲಿದೆ ಎಂದು ವಿಶ್ವಹಿಂದೂ ಪರಿಷದ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.