ವಿಟ್ಲ: ಬಸ್ಸಿನ ಹಿಂಭಾಗಕ್ಕೆ ಪಿಕಪ್‌ನ ಮುಂಭಾಗ ತಾಗಿದ ಪ್ರಕರಣ: ರೋಡ್ ಬ್ಲಾಕ್- ಚಾಲಕರಿಂದ ನಡುರಸ್ತೆಯಲ್ಲೇ ಮಾತಿನ ಚಕಮಕಿ: ಠಾಣೆ ಮೆಟ್ಟಿಲೇರಿದ ಪ್ರಕರಣ ರಾಜಿಯಲ್ಲಿ ಇತ್ಯರ್ಥ

Puttur_Advt_NewsUnder_1
Puttur_Advt_NewsUnder_1

vittla

ವಿಟ್ಲ: ಬಸ್ಸು ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದ ಬಸ್ಸೊಂದರ ಹಿಂಭಾಗ ಪಿಕಾಪ್ ಒಂದರ ಮುಂಭಾಗಕ್ಕೆ ತಾಗಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ವಾಹನ ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದು ಅಲ್ಪ ಹೊತ್ತು ರಸ್ತೆ ಬ್ಲಾಕ್ ಆದ ಘಟನೆ ಡಿ.16ರಂದು ವಿಟ್ಲ ಖಾಸಗಿ ಬಸ್ಸ್‌ನಿಲ್ದಾಣದಲ್ಲಿ ನಡೆದಿದೆ. ಬಳಿಕದ ಬೆಳವಣಿಗೆಯಲ್ಲಿ ಠಾಣೆ ಮೆಟ್ಟಿಲೇರಿದ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ.

ಮಂಗಳೂರಿನಿಂದ ವಿಟ್ಲಕ್ಕೆ ಬಂದು ಖಾಸಗಿ ಬಸ್ಸು ನಿಲ್ದಾಣ ಪ್ರವೇಶಿಸುತ್ತಿದ್ದ ಸೆಲೀನ ಎಂಬ ಖಾಸಗಿ ಬಸ್ಸಿನ ಹಿಂಭಾಗ ಉಪ್ಪಿನಂಗಡಿಯಿಂದ ಅಡಿಕೆ, ತೆಂಗಿನ ಕಾಯಿ ಹೇರಿಕೊಂಡು ಕೆಲಿಂಜ ಭಾಗಕ್ಕೆ ತೆರಳುತ್ತಿದ್ದ ಪಿಕಪ್‌ನ ಮುಂಭಾಗಕ್ಕೆ ಅಲ್ಪ ತಾಗಿತ್ತು. ಇದರಿಂದ ರೊಚ್ಚಿಗೆದ್ದ ಬಸ್ಸು, ಪಿಕಪ್ ಚಾಲಕರು ತಮ್ಮ ವಾಹನವನ್ನು ನಡು ರಸ್ತೆಯಲ್ಲೇ ಬಿಟ್ಟು ಪರಸ್ಪರ ವಾಗ್ವಾದ ನಡೆಸಲಾರಂಭಿಸಿದರು. ಈ ವೇಳೆ ಅವರೊಂದಿಗಿದ್ದ ಕೆಲವರು ದ್ವನಿಗೂಡಿಸಿದರು. ಚಾಲಕರಿಬ್ಬರು ತಮ್ಮ ವಾಹನವನ್ನು ನಡು ರಸ್ತೆಯಲ್ಲೇ ಬಿಟ್ಟು ಗಲಭೆ ಆರಂಭಿಸಿದರಿಂದ ಅಲ್ಪ ಹೊತ್ತು ರಸ್ತೆ ಬ್ಲಾಕ್ ಆಯ್ತು. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ವಾಹನದವರನ್ನೂ ಠಾಣೆಗೆ ಬರುವಂತೆ ಸೂಚಿಸಿದರು. ಠಾಣೆಮೆಟ್ಟಿಲೇರಿದ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲೇ ಇಕ್ಕಟ್ಟಾದ ರಸ್ತೆ ಅದರಲ್ಲೂ ನಡು ರಸ್ತೆಯಲ್ಲಿ ಚಾಲಕರು ವಾಹನವನ್ನು ಬಿಟ್ಟು ಕಚ್ಚಾಡುತ್ತಿದ್ದು ನಾಗರಿಕವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.