ದ.18 ಪಡ್ಡಾಯೂರಿನಲ್ಲಿ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಓಂ ಫ್ರೆಂಡ್ಸ್ ಪಡ್ಡಾಯೂರು ಇದರ ಆಶ್ರಯದಲ್ಲಿ ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ಹಿಂದು ಬಾಂಧವರಿಗಾಗಿ ಜಿಲ್ಲಾ ಮಟ್ಟದ 65 ಕೆ.ಜಿ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ’ಓಂ ಟ್ರೋಫಿ’ ದ.18ರಂದು ಪಡ್ಡಾಯೂರು ವಿವೇಕಾನಂದ ಕಾಲೇಜು ಬಳಿ ನಡೆಯಲಿದೆ. ಪ್ರಥಮ ರೂ10,111ದ್ವಿತೀಯ ರೂ.6111, ತೃತೀಯ ರೂ.3111, ಚತುರ್ಥ ರೂ.2111 ನಗದು ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ದಾಳಿಗಾರ, ಹಿಡಿತಗಾರ ಸವ್ಯಸಾಚಿ ಪ್ರಶಸ್ತಿ ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೂ ಸ್ಮರಣಿಕೆ ನೀಡಲಾಗುವುದು. ಬೆಳಿಗ್ಗೆ ನಡೆಯುವ ಪಂದ್ಯಾಟದ ಉದ್ಘಾಟನೆಯನ್ನು ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ನೆರವೇರಿಸಲಿದ್ದಾರೆ. ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಲಿದ್ದು, ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಜೀವಂದರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಭಾರತ್‌ನ ರಾಜ್ಯ ಪ್ರಭಾರಿ ನಿಕೇತ್‌ರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ವೈದ್ಯ ಡಾ. ಎಂ.ಕೆ ಪ್ರಸಾದ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳಿಗೆ ಸನ್ಮಾನ, ಅನಾಥ ಮಗುವಿನ ದತ್ತು ಸ್ವೀಕಾರ, ಬಡಜನರಿಗೆ ಸಹಾಯಧನ, ಭಾರತೀಯ ಸೈನಿಕ ನಿಧಿಗೆ ಕಿರು ಸಹಾಯಧನ ನೀಡಲಾಗುವುದು. ಬಳಿಕ ಅನ್ನಸಂತರ್ಪಣೆ ನಡೆದು ಅರುಣ್‌ಚಂದ್ರ ಬಿ.ಸಿ ರೋಡ್ ಮತ್ತು ಉಮೇಶ್ ಮಿಜಾರು ಇವರಿಂದ ’ಬಲೆ ತೆಲಿಪಾಲೆ’ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.