Breaking News

ಡಿ.20-24: ಕೊಂಬಾರು ಬೀಡು ಶ್ರೀ ಸಿದ್ದಪ್ಪ ದೇವರು, ಉಳ್ಳಾಕ್ಲು ಬಚ್ಚನಾಯಕ ದೈವಸ್ಥಾನದಲ್ಲಿ ನಾಗಶಿಲಾ ಪ್ರತಿಷ್ಠೆ, ದೈವಸಾನಿಧ್ಯಗಳ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1

 

kombarubeedu2-1 kombarubeedu1ಕಡಬ: ಕೊಂಬಾರು ಗ್ರಾಮದ ಬೀಡು ಶ್ರೀ ಸಿದ್ದಪ್ಪ ದೇವರು, ಉಳ್ಳಾಕ್ಲು ಬಚ್ಚನಾಯಕ ದೈವಸ್ಥಾನದಲ್ಲಿ ನಾಗಶಿಲಾ ಪ್ರತಿಷ್ಠೆ, ದೈವಸಾನಿಧ್ಯಗಳ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಕಾರ‍್ಯಕ್ರಮ ಡಿ.20ರಿಂದ 24ರವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾರ‍್ಯಕ್ರಮಕ್ಕೆ ಸಿದ್ದತೆ ಭರದಿಂದ ಸಾಗುತ್ತಿದೆ.

ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ‍್ಯಕ್ರಮಗಳೊಂದಿಗೆ ನಡೆಯಲಿದೆ. ಡಿ.20ರಂದು ಬೆಳಿಗ್ಗೆ ಸರ್ಪಸಂಸ್ಕಾರ ಕ್ರಿಯೆ ಪ್ರಾರಂಭ, ಡಿ.22ರಂದು  ಬೆಳಿಗ್ಗೆ ಕ್ಷೇತ್ರಕ್ಕೆ ಹೊರೆ ಕಾಣಿಕೆ ಸಮರ್ಪಣೆ. ಸಂಜೆ ಕ್ಷೇತ್ರದ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ, ಬಿಂಬಪರಿಗ್ರಹ, ಸ್ವಸ್ತಿ ಪುಣ್ಯಾಃ ವಾಚನ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಅನ್ನಸಂತರ್ಪಣೆ ನಡೆಯಲಿದೆ. ಡಿ.23ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪ್ರತಿಷ್ಠಾ ಹೋಮ, ಆಶ್ಲೇಷಾ ಬಲಿ, ಅಷ್ಟವಟು ಆರಾಧನೆ, ಬಳಿಕ 9.17ರ ಮಕರ ಲಗ್ನ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಟೆ ಮತ್ತು ದೈವಸಾನಿಧ್ಯಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ತಂಬಿಲ ಸೇವೆಗಳು, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಪ್ರಥಮ ಧರ್ಮನಡಾವಳಿ ನೇಮೋತ್ಸವ ನಡೆಯಲಿದೆ. ಡಿ.24ರಂದು ರಾತ್ರಿ ನಡಾವಳಿ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮೋಕ್ತೇಸರ ಸುಬ್ರಾಯ ಗೌಡ ಕೂತೂರು ಅಧ್ಯಕ್ಷ ಗುಡ್ಡಪ್ಪ ಗೌಡ, ಕೆಂಜಾಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್, ಅರ್ಚಕ ಕಾರ್ತಿಕ್ ಗೌಡ ಕೊಂಬಾರು ಪೂಜಾರಿ ಮನೆ, ಪುಟ್ಟಣ್ಣ ಗೌಡ ಕಮರ್ಕಜೆ, ನಾಲ್ವೇಕಿಯವರಾದ ಚೆನ್ನಪ್ಪ ಗೌಡ ಪೆರೊಂದೋಡಿ, ಅಣ್ಣಪ್ಪ ಗೌಡ ಅಮ್ಚೂರು, ಪೂವಣಿ ಗೌಡ ಅನಿಲ, ಹುಕ್ರಪ್ಪ ಮಲೆ ಕುಡಿಯ ಎನ್ಕಾಲ, ಮೋನಪ್ಪ ಮಡಿವಾಳ ಸರಪಾಡಿ, ಬಾಳಪ್ಪ ಪೂಜಾರಿ ಕಾಯರ್ತಡ್ಕ, ಸುಬ್ಬ ಪರವ ಕೊಂಬಾರು, ತನಿಯ ಮುಗೇರ ಕೋಲ್ಕಜೆ, ಮುತ್ತ ಅಜಿಲ ಅಂಗಡಿಮಜಲು, ಆನಂದ ಆಚಾರಿ ಸರಪಾಡಿ, ಸುಂದರ ಆಚಾರ್ಯ ಕೆಂಜಲರವರು ತಿಳಿಸಿದ್ದಾರೆ.

ಸ್ತ್ರೀ ಶಕ್ತಿ ಸಂಘದ ಸದಸ್ಯೆಯರಿಂದ ಶ್ರಮದಾನ

ದೇವಸ್ಥಾನದಲ್ಲಿ ಕೆಂಜಾಳ ಪಂಚಲಿಂಗೇಶ್ವರ ಮತ್ತು ಶಾರದಾ ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ ಡಿ.೧೮ರಂದು ಶ್ರಮದಾನ ನಡೆಯಿತು. ಕೊಂಬಾರು ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀರಾಮಚಂದ್ರ ಗೌಡ, ಬಿಳಿನೆಲೆ ಸಿಎ ಬ್ಯಾಂಕ್ ನಿರ್ದೇಶಕಿ ಶಶಿಲೇಖಾ, ಕೆಂಜಾಳ ಅಂಗನವಾಡಿ ಕಾರ‍್ಯಕರ್ತೆ ಮೋಹಿನಿ, ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಸರೋಜಿನಿ, ಸುಶೀಲ, ಜಯ ಕಾಪಾರು, ಜಯಾ ಹೊಳ್ಳಾರು, ಚಂದ್ರಾವತಿ ಹೊಳ್ಳಾರು, ಡೀಕಮ್ಮ ಮುಗೇರ್,ಜಾನಕಿ ಕೋಲ್ಕಜೆ, ಶೋಬಿತಾ, ಕುಸುಮಾವತಿ, ವೇದಾವತಿ, ಪೂರ್ಣಿಮ, ಚಂದ್ರಾವತಿ, ಭುವನೆಶ್ವರಿ, ವಾರಿಜಾಕ್ಷಿ ಕೆರೆಂದೆರೆ, ಬೇಬಿ ಕಾಪಾರು, ಪುಷ್ಪಾವತಿ ಕೂತೂರು, ಶೀಲಾವತಿ ಕಟ್ಟೆ ಮಠ, ಶಿವಮ್ಮ ಕಟ್ಟೆಮಠ, ಗೀತಾ ಕಾಪಾರು, ಪುಷ್ಪಾವತಿ ಕೂತೂರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.