Breaking News

ರಿಪೇರಿಗೆ ನೀಡಿದ ಮೊಬೈಲನ್ನು ಹಿಂದಕ್ಕೆ ನೀಡದೆ ಸತಾಯಿಸಿದ ಆರೋಪ ; ಸೆಲ್ ಸೊಲ್ಯೂಷನ್ ಮಾಲಕ ಪ್ರದೀಪ್ ವಿರುದ್ಧ ಪೊಲೀಸರಿಗೆ ದೂರು

Puttur_Advt_NewsUnder_1
Puttur_Advt_NewsUnder_1
ಪ್ರದೀಪ್ ಶೆಟ್ಟಿ
ಪ್ರದೀಪ್ ಶೆಟ್ಟಿ
ಕುಸುಮಾಧರ ರೈ
ಕುಸುಮಾಧರ ರೈ
ವಿತೇಶ್ ಶೆಟ್ಟಿ
ವಿತೇಶ್ ಶೆಟ್ಟಿ

ಪುತ್ತೂರು: ರಿಪೇರಿಗೆಂದು ಮೊಬೈಲ್ ಅಂಗಡಿಯಲ್ಲಿ ನೀಡಿದ್ದ ಮೊಬೈಲನ್ನು ಹಿಂದಕ್ಕೆ ನೀಡದೆ ಸತಾಯಿಸುತ್ತಿರುವ ಕುರಿತು ಗ್ರಾಹಕರೋರ್ವರು ಇಲ್ಲಿನ ಕೋರ್ಟ್‌ರಸ್ತೆ ಸೆಲ್ ಸೊಲ್ಯೂಷನ್ ಮೊಬೈಲ್ ಅಂಗಡಿ ಮಾಲಕ ಪ್ರದೀಪ್ ಶೆಟ್ಟಿ ವಿರುದ್ಧ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರ ವಿಚಾರಣೆ ವೇಳೆ ಅಂಗಡಿ ಮಾಲಕ ನನ್ನಲ್ಲಿ ಯಾರೂ ಮೊಬೈಲ್ ನೀಡಿಲ್ಲ. ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದರಿಂದ ಪೊಲೀಸರು ದೂರುದಾರರಿಗೆ ಆ ರೀತಿ ಹಿಂಬರಹ ನೀಡಿರುವ ಮತ್ತು ಮೊಬೈಲ್ ಕಳೆದುಕೊಂಡವರು ಕಾರಣಿಕಕ್ಷೇತ್ರ ಕಾನತ್ತೂರಿನ ಮೊರೆ ಹೋಗುವುದಾಗಿ ಹೇಳಿ ಠಾಣೆಯಿಂದ ನಿರ್ಗಮಿಸಿದ ಮತ್ತು ತನ್ನ ಪರಿಚಯದವರೆಂದು ಹೇಳಿ ಮೊಬೈಲ್ ಅಂಗಡಿಗೆ ಕರೆದೊಯ್ದಿದ್ದಾತ ಸಮಸ್ಯೆ ಬಂದಾಗ ನೆರವಿಗೆ ಬಾರದೆ ಇರುವ ಘಟನೆ ತಡವಾಗಿ ವರದಿಯಾಗಿದೆ.

ಚಾರ್ವಾಕ ಗ್ರಾಮದ ಕಾಸ್ಪಾಡಿಗುತ್ತು ಕುಸುಮಾಧರ ರೈಯವರ ಪುತ್ರ ರಂಜಿತ್ ರೈ ದೂರು ನೀಡಿದವರು. ನಾನು ೭-೧೧-೨೦೧೬ರಂದು ನನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ ೭ ಮೊಬೈಲ್‌ನ ಕನೆಕ್ಟರ್ ಹೋಗಿದೆ ಎಂದು ಬದಲಾಯಿಸಲು ಕೋರ್ಟು ರಸ್ತೆಯಲ್ಲಿರುವ ಸೆಲ್ ಸೊಲ್ಯೂಷನ್ ಮೊಬೈಲ್ ಅಂಗಡಿಯಲ್ಲಿ ನೀಡಿದ್ದೆ.ಅದಕ್ಕೆ ರೂ.೨ ಸಾವಿರ ಚಾರ್ಜ್ ಆಗುತ್ತದೆ ಎಂದು ಅಂಗಡಿ ಮಾಲಿಕರು ಹೇಳಿದ್ದಕ್ಕೆ ಒಪ್ಪಿಗೆ ನೀಡಿದ್ದೆ.ಈಗ ಮೊಬೈಲ್‌ನ್ನು ಹಿಂತಿರುಗಿಸಿ ಎಂದು ಕೇಳಿದರೆ ಸಕಾರಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಪುತ್ತೂರು ನಗರ ಠಾಣೆಗೆ ನ.೨೯ರಂದು ರಂಜಿತ್ ರೈ ದೂರು ನೀಡಿ ಈ ಕುರಿತು ವಿಚಾರಣೆ ನಡೆಸಿ ನನ್ನ ಮೊಬೈಲ್ ನನಗೆ ನೀಡುವಂತೆ ನ್ಯಾಯ ಒದಗಿಸಬೇಕಾಗಿ ಅವರು ಕೋರಿಕೊಂಡಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ಸೆಲ್ ಸೊಲ್ಯೂಷನ್ ಮೊಬೈಲ್ ಅಂಗಡಿಯ ಪ್ರದೀಪ್ ಶೆಟ್ಟಿ ಎಂಬವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಆ ಸಂದರ್ಭ ಪ್ರದೀಪ್ ಶೆಟ್ಟಿ ತನ್ನ ಮೇಲಿನ ಆರೋಪ ನಿರಾಕರಿಸಿದ್ದು ರಂಜಿತ್ ರೈ ನನ್ನ ಅಂಗಡಿಗೆ ಬರಲೇ ಇಲ್ಲ ಎಂದು ಹೇಳಿ ಕೊಂಡಿದ್ದರು. ನಿಮ್ಮ ದೂರಿನಂತೆ ಪ್ರದೀಪ್ ಎಂಬವರನ್ನು ಠಾಣೆಗೆ ಕರೆಸಿ ನಿಮ್ಮ ಸಮಕ್ಷಮ ವಿಚಾರಣೆ ನಡೆಸಲಾಗಿದೆ.ವಿಚಾರಣೆ ಸಮಯ ಪ್ರದೀಪ್ ಎಂಬವರು, ಚಾರ್ವಾಕ ಗ್ರಾಮದ ಕಾಸ್ಪಾಡಿ ಕುಸುಮಾಧರ ರೈ ಎಂಬವರ ಮಗ ರಂಜಿತ್ ರೈ ಎಂಬವರು ದೂರು ನೀಡಿರುವ ವಿಷಯ ತಿಳಿಯಿತು.ಆದರೆ ರಂಜಿತ್ ರೈ ಎಂಬವರು ನನ್ನಲ್ಲಿ ಮೊಬೈಲ್ ಕೊಟ್ಟಿರುವುದಿಲ್ಲ.ಅವರು ತಿಳಿಸಿದ ಮೊಬೈಲ್‌ಗೂ ನನಗೂ ಯವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದು ಅವರುಗಳ ಹೇಳಿಕೆಯನ್ನು ಪಡೆಯಲಾಗಿದೆ.ನೀವು ಮುಂದಿನ ಇತ್ಯರ್ಥದ ಬಗ್ಗೆ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸಿ ಕಾನೂನು ಕ್ರಮದಲ್ಲಿ ಮುಂದುವರಿಯುವುದು.ಈ ಬಗ್ಗೆ ಯಾವುದೇ ತಂಟೆ ತಕ್ಷೀರಿಗೆ ಅವಕಾಶವನ್ನು ನೀಡಬಾರದು ಎಂದು ಪೊಲೀಸರು ದೂರುದಾರರಿಗೆ ಹಿಂಬರಹ  ನೀಡಿದ್ದಾರೆ.

ಕಾನತ್ತೂರು ಸಹಿತ ಒಳ್ಳೆ ಜಾಗಕ್ಕಿಡುತ್ತೇವೆ: ಸೆಲ್ ಸೊಲ್ಯೂಷನ್ ಅಂಗಡಿಯಲ್ಲಿ ಮೊಬೈಲ್ ರಿಪೇರಿಗೆ ನೀಡಿದ್ದ ಕುರಿತು ದೂರುದಾರರು ಯಾವುದೇ ರಶೀದಿಯನ್ನು ಪಡೆದುಕೊಂಡಿರಲಿಲ್ಲ.ರಂಜಿತ್ ರೈ ನನ್ನಲ್ಲಿ ಮೊಬೈಲ್ ನೀಡಿಲ್ಲ.ಅವರು ತಿಳಿಸಿದ ಮೊಬೈಲ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ವಿಚಾರಣೆ ವೇಳೆ ಪ್ರದೀಪ್ ಹೇಳಿದ್ದು ಆ ಸಂದರ್ಭ ಉಪಸ್ಥಿತರಿದ್ದ, ದೂರುದಾರ ರಂಜಿತ್ ರೈ ತಂದೆ ಕುಸುಮಾಧರ ರೈಯವರು ಮೊಬೈಲ್(೧೯೪೦೦ರೂ.ಬೆಲೆ)ಹೋದರೆ ಹೋಗಲಿ ತೊಂದರೆಯಿಲ್ಲ.ನಾವು ಕೃಷಿಕರು ದುಡಿದ ಹಣ.ಯಾರನ್ನೂ ಲಬಡ್ಡಿ ತೆಗೆದ ಹಣವಲ್ಲ.ಆದರೆ ಕಾನತ್ತೂರು ಸೇರಿದಂತೆ ಒಳ್ಳೆಯ ಜಾಗಕ್ಕೆ ಇಡುತ್ತೇವೆ, ಪುತ್ತೂರು ಮಹಾಲಿಂಗೇಶ್ವರ ಎದುರೇ ಇದ್ದಾನೆ ಅವ ನೋಡಿಕೊಳ್ಳುತ್ತಾನೆ ಎಂದು ಹೇಳಿ ಠಾಣೆಯಿಂದ ಹೊರ ಬರಲು ಮಂದಾದಾಗ, ದೂರಿನ ವಿಚಾರಣೆ ನಡೆಸಿದ್ದ ಎಎಸ್‌ಐಯವರು ಕೇಸು, ಕಾನೂನು ಜತೆಗೆ ದೈವ, ದೇವರು ಎನ್ನುವುದು ಬೇರೆಯೇ ಇದೆ.ಇದು ನಮಗೆ ತಿಳಿದಿರಬೇಕು ಎಂದು ಪ್ರದೀಪ್ ಅವರಿಗೆ ಹೇಳಿದ ಘಟನೆಯೂ ನಡೆದಿದೆ.

ಸೆಲ್ ಸೊಲ್ಯೂಷನ್‌ಗೆ ಕರೆದೊಯ್ದಾತ ನೆರವಿಗೆ ಬರಲಿಲ್ಲ

ಕುಸುಮಾಧರ ರೈಯವರಿಗೆ ಸೆಲ್ ಸೊಲ್ಯೂಷನ್ ಅಂಗಡಿಯವರ ಪರಿಚಯವಿರಲಿಲ್ಲ.ಮೊಬೈಲನ್ನು ಎಲ್ಲಿ ರಿಪೇರಿಗೆ ಕೊಡುವುದೆಂದು ಯೋಚಿಸುತ್ತಿದ್ದಾಗ ಅವರ ನೆರವಿಗೆ ಬಂದವರು ಅವರ ಸಂಬಂಧಿಕರೂ ಆಗಿರುವ, ಚಾರ್ವಾಕ ಲತೇಶ್ ಶೆಟ್ಟಿ ಸಹೋದರ ವಿತೇಶ್ ಶೆಟ್ಟಿ.ನಂತರದ ಬೆಳವಣಿಗೆಯಲ್ಲಿ ಪ್ರದೀಪ್ ಶೆಟ್ಟಿ ಮೊಬೈಲ್ ಹಿಂತಿರುಗಿಸದೆ ಸತಾಯಿಸುತ್ತಿದ್ದ ಕುರಿತೂ ಕುಸುಮಾಧರ ರೈಯವರು ವಿತೇಶ್ ಶೆಟ್ಟಿಗೆ ಹೇಳಿದ್ದರು.ಆದರೆ ಆತ ಅವರ ನೆರವಿಗೆ  ಬರಲಿಲ್ಲ  ಎಂದು ಹೇಳಲಾಗಿದೆ.

ಕಾನತ್ತೂರು ಕ್ಷೇತ್ರದ  ಮೊರೆ ಹೋಗುತ್ತೇವೆ

ಅಲ್ಲಿ ಒಳ್ಳೆ ರೀತಿಯಲ್ಲಿ ರಿಪೇರಿ ಮಾಡಿಕೊಡುತ್ತಾರೆ ಎಂದು ವಿತೇಶ್ ಶೆಟ್ಟಿ ನನ್ನನ್ನು ಸೆಲ್ ಸೊಲ್ಯೂಷನ್ ಅಂಗಡಿಗೆ ಕರೆದುಕೊಂಡು ಹೋಗಿ ಪರಿಚಯಿಸಿದ್ದು ಅವರು ಹೇಳಿದ್ದರಿಂದಲೇ ಅಲ್ಲಿ ಮೊಬೈಲ್ ರಿಪೇರಿಗೆ ನೀಡಿದ್ದೆ. ಆ ಸಂದರ್ಭದಲ್ಲಿ ನಾವು ಯಾವುದೇ ಬಿಲ್ ಪಡೆದುಕೊಳ್ಳದ ಕಾರಣ ಕಾನೂನು ರೀತಿಯಲ್ಲಿ ನಮಗೆ ಮುಂದುವರಿಯಲು ಯಾವುದೇ ಆಧಾರವಿಲ್ಲ.ನನಗಾದ ಅನ್ಯಾಯದ ಕುರಿತು ನಾನು ವಿತೇಶ್ ಶೆಟ್ಟಿಗೆ ತಿಳಿಸಿದೆ.ನಾನಿರಲಿಲ್ಲ. ಆದರೆ ನಾನು ಅಲ್ಲಿಗೆ ಕರೆದುಕೊಂಡು ಹೋಗಿರುವುದು ಮಾತ್ರ ಎಂದು ಹೇಳಿದ್ದ ಆತ ಫುಲ್ ಬ್ಯೂಸಿಯಿದ್ದಂತೆ ಮಾಡುತ್ತಿದ್ದರು.ನಿನ್ನೆ ಫೋನ್ ಮಾಡಿದರೆ ಫೋನ್ ಕರೆ ಸ್ವೀಕರಿಸಲಿಲ್ಲ.ಆತನ ಅಣ್ಣ ಲತೇಶ್ ಶೆಟ್ಟಿಗೆ ಹೇಳಿದಾಗ ಕೇಳಿzನೆ ಮಾವ, ಕೇಳಿzನೆ ನಾನು ಎಂದು ಹೇಳಿದ್ದಾರೆ.ಅವರು ನಮಗೆ ಮೊಬೈಲ್ ತೆಗೆಸಿಕೊಡಬೇಕಾಗಿರಲಿಲ್ಲ.ಆದರೆ ಒಂದೇ ಊರಿನವರಾಗಿದ್ದು ದಿನನಿತ್ಯ ಮುಖ ನೋಡುವವರು ಕನಿಷ್ಟ ನಮ್ಮ ಜತೆ ಬಂದು ಕೇಳುವ ಸೌಜನ್ಯವನ್ನೂ ಅವರು ತೋರಲಿಲ್ಲ ಎನ್ನುವುದು ಬೇಸರದ ಸಂಗತಿ.ಕಾನೂನು, ಕೇಸಲ್ಲಿ ಮುಂದುವರಿಯಲು ನಮಗೆ ಯಾವುದೇ ಆಧಾರವಿಲ್ಲದಿರಬಹುದು.ಆದರೆ ನಾವು ಯಾವುದೇ ಮೋಸ ಮಾಡಿಲ್ಲ.ದೈವ, ದೇವರಿಗೆ ಸತ್ಯ ತಿಳಿಯುತ್ತದೆ.ಅವರು ಕೊಡುವ ಶಿಕ್ಷೆ ಶಾಶ್ವತವಾಗಿರುತ್ತದೆ.ಈ ನಿಟ್ಟಿನಲ್ಲಿ ಕಾನತ್ತೂರು ಕ್ಷೇತ್ರದ ಮೊರೆ ಹೋಗುವುದಾಗಿ ಪ್ರದೀಪ್ ಶೆಟ್ಟಿ ಎದುರೇ ಠಾಣೆಯಲ್ಲಿ ಹೇಳಿ ಬಂದಿzವೆ ಎಂದು ದೂರುದಾರ ರಂಜಿತ್ ರೈಯವರ ತಂದೆ ಕುಸುಮಾಧರ ರೈ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.