ವಿಕಲಚೇತನರ ಉಚಿತ ತಪಾಸಣೆ, ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆ ಶಿಬಿರ ಪುತ್ತೂರಿಗೆ 5 ಮೋಟಾರ್ ಫಿಕ್ಸ್ ವಾಹನಕ್ಕೆ ಪ್ರಸ್ತಾವನೆ: ಶಕುಂತಳಾ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

 

vikalachethanaಪುತ್ತೂರು: ವಿಕಲಚೇತನರ ಉಚಿತ ತಪಾಸಣೆ ಮತ್ತು ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತುಸುವಿಕೆಯ ವಿಶೇಷ ಶಿಬಿರ ದ.18ರಂದು ಪುತ್ತೂರು ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು.

ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ, ಇತರ ಇಲಾಖೆ ಹಾಗೂ  ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಶಿಬಿರವನ್ನು ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ವಿಕಲಚೇತರನರೀರ್ವರು ಉದ್ಘಾಟಿಸಿದರು. ಬಳಿಕ ಶಾಸಕರು ಮಾತನಾಡಿ, ವಿಕಲಚೇತನರಿಗಾಗಿ ಪುತ್ತೂರಿಗೆ5 ಮೋಟಾರ್ ಫಿಕ್ಸ್ ವಾಹನ ಬೇಕೆಂದು ನಾನು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ. ಅದು ಮಂಗಳೂರಿಗೆ ಬಂದರೆ ಪುತ್ತೂರಿಗೆ ತರಿಸುವ ಪ್ರಯತ್ನ ಮಾಡುತ್ತೇನೆ. ವಿಕಲಚೇತನರಿಗೆ ಸಾಧನ ಸಲಕರಣೆ ಸಿಕ್ಕದಿದ್ದರೆ ಸಿಗುವಂತೆ ಮತ್ತು ಮುಂದೆ ಊಣತೆ ಬಂದಾಗ ಪರಿಹಾರ ನೀಡುವ ಕಾರ್ಯಕ್ಕಾಗಿ ಇಂತಹ ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್‌ರವರು ಮಾತನಾಡಿ ಸಾಧನ ಸಲಕರಣೆ ಪಡೆಯದಿದ್ದವರು ಈ ಶಿಬಿರದ ಸದುಪಯೋಗ ಪಡೆದು ಕೊಳ್ಳಿ. ಎಲ್ಲರೂ ಸರಿಯಾದ ದಾಖಲೆ ಪತ್ರ ನೀಡಿ ತಮ್ಮ ಆಯ್ಕೆ ಖಚಿತಪಡಿಸಿಕೊಳ್ಳಿ ಎಂದರು. ಜಿಲ್ಲಾ ಆರೋಗ್ಯಅಧಿಕಾರಿ ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ವಿಕಲಚೇತನರ ಹಿರಿಯ ಅಧಿಕಾರಿ ಶೋಭಾ, ನೋಡೆಲ್ ಆಫೀಸರ್ ಡಾ. ರಾಜೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಗೌಡ, ಕಸ್ತೂರ್ಬಾ ಆಸ್ಪತ್ರೆಯ ಕೆ.ಆರ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಶ್ರೀ, ಸರೋಜಿನಿ, ರೇಶ್ಮ, ವಿಜಯ, ಗುರುರಾಜ್, ತೇಜಸ್ವಿ ಅತಿಥಿಗಳನ್ನು ಗೌರವಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಬಿರ ನಡೆಯಿತು.

ವಿಕಲಚೇತನ ಫಲಾನುಭವಿಗಳ ಗುರುತಿಸುವಿಕೆಗಾಗಿ ಸುಮಾರು 10ಕ್ಕೂ ಅಧಿಕ ವಿವಿಧ ಪರೀಕ್ಷಾ ಕೊಠಡಿಗಳನ್ನು ಮಾಡಲಾಗಿದ್ದು, 15ಕ್ಕೂ ಅಧಿಕ ವೈದ್ಯರು ತಪಾಸಣೆ ನೆಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.