Breaking News

ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಸಾಮೂಹಿಕ ಶ್ರೀ ಗುರುಪಾದ ಪೂಜೆ, ಶ್ರೀ ದುರ್ಗಾನಮಸ್ಕಾರ ಪೂಜೆ 

Puttur_Advt_NewsUnder_1
Puttur_Advt_NewsUnder_1

vishwakarma vishwakarma1 vishwakarma2

ಪರಮಾತ್ಮನ ಅನುಗ್ರಹವಿಲ್ಲದಿದ್ದರೆ ಎಲ್ಲವೂ ಶೂನ್ಯ-ಕಾಳಹಸ್ತೇಂದ್ರ ಸರಸ್ವತಿ ಶ್ರೀ

ಪುತ್ತೂರು: ಬಲವಾದ ಮತ್ತು ದೃಢವಾದ ಸಂಕಲ್ಪದೊಂದಿಗೆ ಸಮಾಜಕ್ಕೆ ಹಿತವಾದ ಕೆಲಸ ಮಾಡುವವರು ಮುಂದೆ ಬದುಕಿನಲ್ಲಿ ಶ್ರೇಷ್ಠತೆಯನ್ನು ಪಡೆಯುತ್ತಾರೆ. ಹಣಬಲ, ಜನಬಲ ವಿದ್ದರೂ ಪರಮಾತ್ಮನ ಅನುಗ್ರಹವಿಲ್ಲದಿದ್ದರೆ ಅವರಲ್ಲಿರುವ ಎಲ್ಲವೂ ಶೂನ್ಯವಾಗಿರುತ್ತದೆ. ಜೀವನದಲ್ಲಿ ಸುಖ ಪಡೆಯುವ ಹಂಬಲವಿರುವ ಪ್ರತಿಯೋರ್ವರು ಕಷ್ಟಗಳನ್ನೆದುರಿಸಲು ಸಿದ್ದರಾಗಬೇಕು ಎಂದು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನಮ್ ಸರಸ್ವತಿ ಪೀಠಾಧೀಶ್ವರ ಅಷ್ಟೋತ್ತರಶತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ನುಡಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ವತಿಯಿಂದ ದ18ರಂದು ಪುತ್ತೂರು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆದ ಸಾಮೂಹಿಕ ಶ್ರೀ ಗುರು ಪಾದ ಪೂಜೆ ಮತ್ತು ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದುಶ್ಚಟಗಳು, ದ್ವೇಷ ಅಸೂಯೆಗಳಿಂದ ನಾವು ಬದುಕಿನಲ್ಲಿ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಶಾಸ್ತ್ರಕ್ಕೆ ವಿರುದ್ಧವಾಗಿ ಮಾಡುವ ಅನುಷ್ಠಾನಗಳಿಂದ ಕೆಡುಕು ಉಂಟಾಗುತ್ತದೆ. ನಮಗೆ ಸುಲಭದಲ್ಲಿ ಎಲ್ಲವೂ ಸಿಗಬೇಕು ಎಂದು ಇನ್ನೊಬ್ಬರ ವಸ್ತುಗಳ, ಆಸ್ತಿಯ ಬಗ್ಗೆ ಆಸೆ ಪಡೆಯುವುದು ದೊಡ್ಡ ತಪ್ಪು ಎಂದ ಅವರು ಸಮಾಜ ಬಾಂಧವರು ಒಡನಾಡಿಗಳಾಗಿ ಬೆಳೆದಾಗ ಉತ್ತಮ ಚಿಂತನೆ, ಸಮಾಜಮುಖಿ ಕಾರ್ಯ ಹೊರಹೊಮ್ಮಲು ಸಾಧ್ಯ. ಯುವ ಮನಸ್ಸುಗಳನ್ನು ಒಂದುಗೂಡಿಸಿ, ಸಮಾಜ ಕಟ್ಟುವ ಕಾರ್ಯ ನಡೆಯಲಿ ಎಂದು ಹೇಳಿ ಶುಭಹಾರೈಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಇಳಂತಿಲರವರು ಮಾತನಾಡಿ, ನಾವು ಧಾರ್ಮಿಕವಾಗಿ ಬಹಳಷ್ಟು ಮುಂದಿzವೆ. ಆದರೆ ರಾಜಕೀಯದಲ್ಲಿ ಬಹಳ ಹಿಂದೆ ಇzವೆ. ನಮಗೆ ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನರವರನ್ನು ಬಿಟ್ಟರೆ ರಾಜ್ಯದಲ್ಲಿಯೇ ಬೇರೆ ಯಾರು ಜನಪ್ರತಿನಿಧಿಗಳು ಇಲ್ಲ. ಈ ವಿಚಾರವಾಗಿ ನಾವು ಚಿಂತನೆ ಮಾಡಬೇಕಾಗಿದೆ. ಮುಂದೆ ವಿಧಾನ ಸಭೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಮಾಜ ಮುಂದೆ ಬರಬೇಕು ಎಂದರು.

ದ.ಕ ವಿಶ್ವಬ್ರಾಹ್ಮಣ ಸಂಘದ ನಿಕಟಪೂರ್ವ ಅಧ್ಯಕ್ಷರಾದ  ಹರಿಶ್ಚಂದ್ರ ಆಚಾರ್ಯ ಬೆಂಗಳೂರು, ವಿಟ್ಲ ಶ್ರವಣ ಜ್ಯುವೆಲ್ಲರ‍್ಸ್ ಮಾಲಕ ಸದಾಶಿವ ಆಚಾರ್ಯ ವಿಟ್ಲ, ಉಜಿರೆ ಶಾಂತಾರಾಮ ಜ್ಯುವೆಲ್ಲರ‍್ಸ್ ಮಾಲಕ ಆನಂದ ಆಚಾರ್ಯ ಉಜಿರೆಯವರು ಶುಭಹಾರೈಸಿದರು. ಸುರೇಂದ್ರ ಆಚಾರ್ಯ ಬಪ್ಪಳಿಗೆ, ಸಂಜೀವ ಆಚಾರ್ಯ, ಅಶೋಕ್ ಆಚಾರ್ಯ ನೆಲ್ಲಿಕಟ್ಟೆ, ಚಂದ್ರಯ್ಯ ಆಚಾರ್ಯ ಕಾಣಿಯೂರು, ಜಗದೀಶ್ ಆಚಾರ್ಯ ಕೂರ್ನಡ್ಕರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.

ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವ ಸಲಹೆಗಾರ ನಲ್ಕ ಗೋಪಾಲಕೃಷ್ಣ ಆಚಾರ್ಯ ಪ್ರಸ್ತಾವನೆಗೈದರು. ಸಂಘದ ಕಾರ್ಯಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಸ್ವಾಗತಿಸಿ, ಗೌರವಾಧ್ಯಕ್ಷ ಉದಯಕುಮಾರ್ ಆಚಾರ್ಯ  ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ಶ್ರೀ ದುರ್ಗೆಯ ಪ್ರತಿರೂಪ

ಶ್ರೀ ದುರ್ಗಾನಮಸ್ಕಾರ ಪೂಜೆಯ ಸಂದರ್ಭದಲ್ಲಿ ಕಾರ್ಕಳ ಸೂರ್ಯ ಪುರೋಹಿತ್‌ರವರ ಕೈಚಳಕದಿಂದ ರಂಗೋಲಿಯ ಮೂಲಕ ಮೂಡಿಬಂದ ಶ್ರೀ ದುರ್ಗೆಯ ಚಿತ್ರ ಎಲ್ಲರ ಗಮನ ಸೆಳೆಯಿತು.

ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ  ವಿಶ್ವೇಶ್ವರ ಪುರೋಹಿತರ ಆಚಾರ್ಯತ್ವದಲ್ಲಿ ಸಾಮೂಹಿಕ ಶ್ರೀ ಗುರುಪಾದ ಪೂಜೆ ಮತ್ತು ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಬೆಳಿಗ್ಗೆ ಆಗಮಿಸಿದ ಶ್ರೀ ಗುರುಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ ಶ್ರೀ ಗುರುಪಾದ ಪೂಜೆ ನಡೆದು, ಸಂಜೆ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಂಧ್ಯಾಕಾಲ ಮಹಾಪೂಜೆ, ಅಷ್ಠಾವಧಾನ, ಪ್ರಾರ್ಥನೆ, ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.