Breaking News

ಡಿ.26: ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಮುಂಡೂರು ಕರೆಮನೆಯಲ್ಲಿ ಗುರುವಂದನಾ ಕಾರ್ಯಕ್ರಮ; ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

adichunchanaನರಿಮೊಗರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಗೌಡ ಮಹಿಳಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಧರ್ಮ ಜಾಗೃತಿ ಮೂಡಿಸಲು ಡಿ.26ರಂದು ಮುಂಡೂರು, ಕೆಮ್ಮಿಂಜೆ, ಆರ್ಯಾಪು ಗ್ರಾಮಗಳ ಭೇಟಿ ಕಾರ್ಯಕ್ರಮದ ಸಲುವಾಗಿ ಮುಂಡೂರು ಕರೆಮನೆ ನಳಿನಿ ಲೋಕಪ್ಪ ಗೌಡರ ಮನೆಯಲ್ಲಿ ಅದೇ ದಿನ ಮಧ್ಯಾಹ್ನ ನಡೆಯಲಿರುವ ಗುರುವಂದನಾ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ಡಿ.18ರಂದು ಮುಂಡೂರು ಕರೆಮನೆ ನಳಿನಿ ಲೋಕಪ್ಪ ಗೌಡರ ಮನೆಯಲ್ಲಿ ನಡೆಯಿತು.

ಡಿ.26ರಂದು ಮಧ್ಯಾಹ್ನ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆಯಲಿರುವರು. ಬಳಿಕ ಅಲ್ಲಿಂದ ಸ್ವಾಮೀಜಿಯವರು ಮುಂಡೂರು ಕರೆಮನೆ ನಳಿನಿ ಲೋಕಪ್ಪ ಗೌಡರ ಮನೆಗೆ ತೆರಳಿ ಅಲ್ಲಿ ಗುರುವಂದನೆ ಸ್ವೀಕರಿಸಲಿದ್ದಾರೆ. ನಂತರ ಶ್ರೀ ಗುರುಗಳ ಆಶೀರ್ವಚನ, ಭೋಜನ ಪ್ರಸಾದ ನೆರವೇರಲಿದೆ. ಬಳಿಕ ಶ್ರೀ ಗುರುಗಳು ನಿರ್ಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿರವರು ತಿಳಿಸಿದರು. ವೇದಿಕೆಯಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಕೆ.ಶ್ರೀಧರ ಗೌಡ ಕಣಜಾಲು, ಪುತ್ತೂರು ವಲಯಾಧ್ಯಕ್ಷ ಲಿಂಗಪ್ಪ ಗೌಡ ತೆಂಕಿಲ, ನಳಿನಿ ಲೋಕಪ್ಪ ಗೌಡ, ಲೋಕಪ್ಪ ಗೌಡ ಕರೆಮನೆ, ಮುಂಡೂರು ಗ್ರಾಮ ಸಮಿತಿ ಅಧ್ಯಕ್ಷ ಸುಂದರ ಗೌಡ ನಡುಬೈಲು, ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ಜಯಾನಂದ ಗೌಡ, ಕೆಮ್ಮಿಂಜೆ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಗೌಡ, ಮುಂಡೂರು ಗ್ರಾಮ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಗೌಡ ಕಡ್ಯರವರು ಉಪಸ್ಥಿತರಿದ್ದರು. ಸಭೆಯಲ್ಲಿ ಯುವ ಒಕ್ಕಲಿಗ ಮುಂಡೂರು ಗ್ರಾಮಸಮಿತಿ ಗೌರವಾಧ್ಯಕ್ಷ ಬಾಲಚಂದ್ರ ಕಡ್ಯ, ಪ್ರಚಾರ ಸಮಿತಿಯ ಮೋಹನ ಗೌಡ ನಡುಬೈಲು, ತಿಮ್ಮಪ್ಪ ಗೌಡ ಕೆ., ರಾಮಣ್ಣ ಮುಂಡೂರು, ಲಲಿತಾ ಬಿ.ಜಿ., ರಜನಿ, ತಿಮ್ಮಪ್ಪ ಗೌಡ, ಸಂತೋಷ್, ಕುಶಾಲಪ್ಪ ಗೌಡ, ಜೀವನ್ ಗೌಡ, ಸಂಪ್ರೀತ್ ಕೆ.ಎನ್., ರಾಜೇಶ್ ಗೌಡ, ಉಮೇಶ್ ಗುತ್ತಿನಪಾಲು, ಎಲ್ಯಣ್ಣ ಗೌಡ ಮರ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಪೂರ್ವಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.