Breaking News

’ಸ್ವಚ್ಛತೆ ನಮ್ಮ ಕೈಯಲ್ಲಿ’ರೋಯಲ್ ಟ್ರಸ್ಟ್‌ನಿಂದ ಜಾಗೃತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

royal-trustಪುತ್ತೂರು: ಬೊಳುವಾರು ರೋಯಲ್ ಟ್ರಸ್ಟ್ ವತಿಯಿಂದ ನಗರಸಭೆಯ ಸಹಯೋಗದೊಂದಿಗೆ ’ಸ್ವಚ್ಚತೆ ನಮ್ಮ ಕೈಯಲ್ಲಿ’ ಎಂಬ ಸ್ಟಿಕ್ಕರ್ ನೀಡುವ ಮೂಲಕ ರಾಜ್ಯಮಟ್ಟದ ವಿಶಿಷ್ಠ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ದ.18 ರಂದು ಬೊಳುವಾರು ರೋಯಲ್ ಟ್ರಸ್ಟ್ ಕೇಂದ್ರ ಕಚೇರಿಯ ಬಳಿ ಉದ್ಘಾಟನೆಗೊಂಡಿತು.

ಎಎಸ್ಪಿ ರಿಷ್ಯಂತ್ ಸಿ.ಬಿ.ಯವರು ಅಭಿಯಾನದ ಉದ್ಘಾಟಿಸಿ ಮಾತನಾಡಿ, ನಮ್ಮ ನಗರವನ್ನು ನಾವೇ ಶುಚಿಯಾಗಿರಿಸಿದರೆ ಸ್ವಚ್ಚತೆಯಾಗುವುದರಲ್ಲಿ ಅನುಮಾನವೇ ಇಲ್ಲ. ನಗರಸಭೆ ಆಡಳಿತ ತನ್ನ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ನಮ್ಮ ಸಹಕಾರವೂ ಅತೀ ಅಮೂಲ್ಯವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿ ನಗರಸಭೆ ಆಯುಕ್ತೆ ರೂಪಾ ಶೆಟ್ಟಿ ಮಾತನಾಡಿ ಸ್ವಚ್ಚತೆ ಅನ್ನುವುದು ನಮ್ಮ ಮನಸ್ಸಲ್ಲಿರಬೇಕು. ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಶಾಶ್ವತವಾಗಿರಬೇಕು. ಪ್ಲಾಸ್ಟಿಕ್ ಕೂಡಾ ಪರಿಸರಕ್ಕೆ ತುಂಬಾ ಹಾನಿಕಾರಕ ಅದಕ್ಕಾಗಿ ಈಗಾಗಲೇ ನಗರದ ವಿವಿಧ ಅಂಗಡಿಗಳಿಗೆ ದಾಳಿ ಮಾಡಿ 600 ಕೆ.ಜಿ ಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದೇವೆ. ಮಾತ್ರವಲ್ಲದೆ ಬಯಲು ಮುಕ್ತ ಶೌಚಕ್ಕಾಗಿ ಉಚಿತ ಶೌಚಾಲಯಗಳನ್ನು ನೀಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಸ್ವಚ್ಚತೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಅತೀ ಮುಖ್ಯವಾಗಿದೆ ಎಂದರು.

ಅತಿಥಿಗಳನ್ನು ಗೌರವಿಸಿ ಮಾತನಾಡಿದ ನ್ಯಾಯಾವಾದಿ ಮಹೇಶ್ ಕಜೆ, ವಿದೇಶದಲ್ಲಿ ಕಸವನ್ನು ದೇಶದೊಳಗೆ ಹಾಕುವುದಿಲ್ಲ. ಕಾರಣ ಅಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚು ಜಾಗೃತಿಯಾಗಿದೆ, ನಮ್ಮ ದೇಶದಲ್ಲೂ ಇದರ ಬಗ್ಗೆ ಹೆಚ್ಚು ಗಮನಹರಿಸುವ ಅವಶ್ಯಕತೆ ಇದೆ. ನಮ್ಮ ಅಂತರಂಗದಿಂದ ಸ್ವಚ್ಚತೆಯ ಬಗ್ಗೆ ಅರಿವು ಮೂಡಬೇಕು ಇದು ಆಂದೋಲನವಾಗಿ ರೂಪುಗೊಂಡಾಗ ಮಾತ್ರ ಇಂತಹ ಅಭಿಯಾನಗಳು ಯಶಸ್ವಿಯಾಗುತ್ತವೆ ಎಂದರು. ಬಳಿಕ ಪೇಟೆಯಲ್ಲಿ ವಿವಿಧ ಅಂಗಡಿಗಳಿಗೆ ಅಭಿಯಾನದ ಮೂಲಕ ಸ್ವಚ್ಚತೆ ನಮ್ಮ ಕೈಯಲ್ಲಿ ಎಂಬ ಘೋಷಣೆಯಿರುವ ಸ್ಟಿಕ್ಕರನ್ನು ಹಂಚಲಾಯಿತು. ರೋಯಲ್ ಟ್ರಸ್ಟ್‌ನ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಸ್ವಾಗತಿಸಿ,  ಸಹ ಖಜಾಂಚಿ ಆನಂದ ರೈ ವಂದಿಸಿದರು. ಕಾರ್ಯದರ್ಶಿ ಉಪನ್ಯಾಸಕ ಡಾ| ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಮುಂದಿನ ತಲೆಮಾರಿಗೆ ಜಾಗೃತಿ ಮೂಡಿಸಲು ನಾವು ಸ್ವಚ್ಚತೆಯ ಕಡೆಗೆ ಹೆಚ್ಚು ಗಮನಹರಿಸಬೇಕಾಗಿದೆ. ಆಗ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಲು ಸಾಧ್ಯವಿದೆ. ವೇಸ್ಟೇಜ್ ವಸ್ತುಗಳನ್ನು ಅಲ್ಲಲ್ಲಿ ಬಿಸಾಡದೆ ಸ್ವಚ್ಛತ ಕಾಪಾಡಿ. ರೋಯಲ್ ಟ್ರಸ್ಟ್ ಕೈಗೊಂಡ ಈ ಅಭಿಯಾನ ತುಂಬಾ ಅರ್ಥಪೂರ್ಣವಾಗಿದ್ದು, ಸ್ವಚ್ಚ ಪುತ್ತೂರಿಗೆ ಪೂರಕವಾಗಿದೆ.

-ರಿಷ್ಯಂತ್ ಸಿ.ಬಿ., ಎಎಸ್ಪಿ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.