Breaking News

ಪ್ರವಾದಿ(ಸ.ಅ)ರನ್ನು ಪ್ರೀತಿಸಿದರೆ ಮಾತ್ರ ಪರಿಪೂರ್ಣ ಮುಸ್ಲಿಮನಾಗಬಹುದು ಬೆಳಂದೂರು ಧಾರ್ಮಿಕ ಮತ ಪ್ರವಚನದಲ್ಲಿ ಅಹ್ಸನಿ ಕಾಂತಪುರಂ

Puttur_Advt_NewsUnder_1
Puttur_Advt_NewsUnder_1

 

belandooruಕಾಣಿಯೂರು: ಅಬ್ದುಲ್ ಕರೀಂ ಹಾಜಿ ಎಟಿಸಿ ಕಾಣಿಯೂರುರವರು ಬೆಳಂದೂರಿನಲ್ಲಿ ನಿರ್ಮಿಸಿದ ನೂತನ ಮಸೀದಿ ಉದ್ಘಾಟನೆ ಮತ್ತು 4ದಿನಗಳ  ಮತ ಪ್ರವಚನ ಕಾರ್ಯಕ್ರಮದ ಮೂರನೇ ದಿನವಾದ ದ 17ರಂದು ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಪ್ರಸಿದ್ಧ ಪ್ರಭಾಷಣಗಾರ ಬಹು| ರಾಫಿ ಅಹ್ಸನಿ ಕಾಂತಪುರಂ ರವರು ಮಾತನಾಡಿ, ಒಬ್ಬ ಪರಿಪೂರ್ಣ ಮುಸ್ಲಿಮನಾಗಬೇಕಾದರೆ ಈ ಲೋಕದಲ್ಲಿರುವ ತಂದೆ ತಾಯಿ, ಪತ್ನಿ ಮಕ್ಕಳು, ಸ್ನೇಹಿತರು, ಗುರು ಹಿರಿಯರು, ಪ್ರಾಣಿ ಪಕ್ಷಿಗಳು ಹೀಗೆ ಸರ್ವಕ್ಕಿಂತಲೂ ಮಿಗಿಲಾಗಿ ಹಬೀಬ್ ಮುಹಮ್ಮದ್ ಮುಸ್ತಾಫಾ (ಸ.ಅ)ರನ್ನು ಪ್ರೀತಿಸಿದಲ್ಲಿ ಮಾತ್ರ ಸಾಧ್ಯ. ಕೇವಲ ಅವರ ಜನ್ಮದಿನದಂದೋ ಜನಿಸಿದ ತಿಂಗಳಲ್ಲೊ, ಅವರ ಗುಣಗಾನ ಮಾಡಿ ಪ್ರಯೋಜನವಿಲ್ಲ. ಜೀವನ ಪೂರ್ತಿ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮಸೀದಿ ನಿರ್ಮಾಪಕ ಅಬ್ದುಲ್ ಕರೀಂ ಹಾಜಿ ಎಟಿಸಿ ಕಾಣಿಯೂರು,  ಸಾಬು ಹಾಜಿ ಕೆಲಂಬೀರಿ, ಬಿ.ಎಸ್ ಇಸ್ಮಾಯಿಲ್ ಹಾಜಿ ಬೈತಡ್ಕ, ಬಹು| ಯೂಸೂಫ್ ಸಖಾಫಿ ದೇವಸ್ಯ, ಸಮೀರ್ ಎಣ್ಮೂರು, ಬೈತಡ್ಕ ಎಂವೈಎಫ್ ಇದರ ಅಧ್ಯಕ್ಷ ಅಬ್ದುಲ್ ಜಲೀಲ್ ಬೈತಡ್ಕರವರವರು ಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.