Breaking News

ಮರ್ದಾಳ ಪಾಲೆತ್ತಡ್ಕ ಹಿ.ಪ್ರಾ. ಶಾಲೆಯಲ್ಲಿ ಕ್ರೀಡೋತ್ಸವ ಕ್ರೀಡೆಯಿಂದ ಜೀವನ ವೃದ್ದಿ-ಶಿವಪ್ರಸಾದ್ ಕೈಕುರೆ

Puttur_Advt_NewsUnder_1
Puttur_Advt_NewsUnder_1

mardla-palethadkaಕಡಬ: ಮನುಷ್ಯನ ಆರೋಗ್ಯಕ್ಕೆ ಕ್ರೀಡೆ ಅತೀ ಅಗತ್ಯವಾಗಿದ್ದು, ಕ್ರೀಡೆಯಿಂದ ಆರೋಗ್ಯ ಮತ್ತು ಮನಶಾಂತಿ ಲಭಿಸುತ್ತದೆ ಎಂದು ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ ಹೇಳಿದರು.

ಅವರು ಮರ್ಧಾಳ ಗ್ರಾಮದ ಪಾಲೆತ್ತಡ್ಕ ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಡಿ.18ರಂದು ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಈ ಶಾಲೆಯಲ್ಲಿ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪಠ್ಯೇತರ ಚಟುವಟಿಕೆಯಾದ ಕ್ರೀಡೆಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಮಕ್ಕಳನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ, ಇದರಿಂದ ಇಂತಹ ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ರಾಷ್ಟ್ರಮಟ್ಟದಲ್ಲಿ ಮಿಂಚಲು ಸಹಾಯಕವಾಗುತ್ತದೆ ಎಂದರು. ಹಿಂದಿನ ಆಡಳಿತ ಇದ್ದಾಗ ತನ್ನ ಜೆಸಿಬಿಯಿಂದ ಆಟದ ಮೈದಾನ ಸಮತಟ್ಟು ಮಾಡಿದ್ದೇನೆ. ಅದು ಇಂದು ಉತ್ತಮ ಕ್ರೀಡಾ ಮೈದಾನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರೈ ಮುಂಡ್ರಾಡಿಯವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವದಂತಹ ಕಾರ‍್ಯಕ್ರಮಗಳನ್ನು ಆಯೋಜಿಸುವಾಗ ಎಲ್ಲರೂ ಸಹಕಾರ ನೀಡಿದರೆ, ಶಾಲೆಯ ಅಭಿವೃದ್ದಿ ಅಲ್ಲದೆ ಮಕ್ಕಳ ಬೆಳವಣಿಗೆಗೂ ಸಹಾಯವಾಗುತ್ತದೆ ಎಂದರು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಾಲಿನಿ ನಾಗೇಶ್‌ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆ ಸಮಾಜದಲ್ಲಿ ಗುರುತಿಸುವಂತಾಗಬೇಕು, ಇದಕ್ಕೆ ಮಕ್ಕಳ ಪೋಷಕರ, ಊರಿನವರ ಸಹಾಯ ಪ್ರೋತ್ಸಾಹ ಅತೀ ಅಗತ್ಯ. ಕಳೆದ 15 ವರ್ಷಗಳಿಂದ ಈ ಶಾಲೆ ಯಶಸ್ವಿಯತ್ತ ಸಾಗುವಲ್ಲಿ ಊರಿನ ಎಲ್ಲರ ಸಹಕಾರ ಇದೆ ಎಂದರು.

ಮರ್ದಾಳ ಗ್ರಾ.ಪಂ. ಸದಸ್ಯ ಹರೀಶ್ ಕೊಡಂದೂರು ಮಾತನಾಡಿ, ಶಾಲೆಯಲ್ಲಿ ವಾರ್ಷಿಕೋತ್ಸವ ಆಚರಿಸುವುದೆಂದರೆ ನಮಗೆ ದೀಪಾವಳಿ ಹಬ್ಬವಿದ್ದಂತೆ, ಆದರೆ ಈಗೀಗ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದರು.

ನೂಜಿಬಾಳ್ತಿಲ ಉ.ಹಿ.ಪ್ರಾ,ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಮಾತನಾಡಿ, ಮನುಷ್ಯನಿಗೆ ಉಚಿತವಾಗಿ ಸಿಗುವ ಟಾನಿಕ್ ಎಂದರೆ ಕ್ರೀಡೆಯಾಗಿದ್ದು, ಕ್ರೀಡೆಯಿಂದ ಮನುಷ್ಯನ ಎಲ್ಲ ರೋಗಗಳು ನಿವಾರಣೆಯಾಗುತ್ತದೆ ಎಂದರು.

ಉದನೆ ಪ್ರೌಢಶಾಲೆ ಶಿಕ್ಷಕ ಸತ್ಯನಾರಾಯಣ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸೆ ಗಿರಿಜಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಯಾಜ್, ಆರ್ಥಿಕ ಸಮಿತಿ ಸಹ ಸಂಚಾಲಕ ನಿರಂಜನ ರೈ, ಆಹಾರ ಸಮಿತಿ ಸಂಚಾಲಕ ನಾರಾಯಣ ರೈ ಮುನಿಯಾಪು ಉಪಸ್ಥಿತರಿದ್ದರು. ಮರ್ದಾಳ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮೈಮುನಾ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪುತ್ತು, ಮರ್ದಾಳ ಗ್ರಾ.ಪಂ. ಗ್ರಂಥಪಾಲಕ ನಾಗೇಶ್, ಪ್ರಮುಖರಾದ ಗಂಗಾಧರ ಬಸವಪಾಲ್, ರಮೇಶ್ ಅಲೇರಿ, ರಾಜೀವಿ  ಪಾಲೆತ್ತಡ್ಕ, ರಫೀಕ್ ಮುಂಡ್ರಾಡಿ, ಶಾರದಾ ಕೆಳಗಿನ ಮನೆ, ವಿನೋದ್ ಪಾಲೆತ್ತಡ್ಕ, ಸಂತೋಷ್ ಪಾಲೆತ್ತಡ್ಕ, ರಮೇಶ್ ಪೆರ್ಲ, ಶಿವಪ್ಪ ನಾಯ್ಕ ಪಾಲೆತ್ತಡ್ಕ, ಉಸ್ಮಾನ್ ಖಾನ್ ಪೆರಲ, ಸೀತಾರಾಮ ರೈ ಪಾಲೆತ್ತಡ್ಕ, ಬಾಲಕೃಷ್ಣ ರೈ ಕಾಂಚನ ಪಾಲೆತ್ತಡ್ಕ, ಅಡುಗೆ ಸಹಾಯಕರಾದ ಯಮುನಾ, ಸರೋಜಿನಿ ಅಂಗನವಾಡಿ ಸಹಾಯಕಿ ಜಯಂತಿ ಸೇರಿದಂತೆ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃದ್ದಿ ಸಮಿತಿಯವರು ಉಪಸ್ಥಿತರರಿದ್ದರು. ಶಾರೀರಿಕ ಶಿಕ್ಷಕ ಬಾಲಕೃಷ್ಣ, ಶಾಲಾ ಅತಿಥಿ ಶಿಕ್ಷಕಿ ನಳಿನಿ, ಗೌರವ ಶಿಕ್ಷಕಿಯರಾದ ರಜಿಯಾ, ಶಾಯಿದಾ, ಪಾಲೆತ್ತಡ್ಕ ಅಂಗನವಾಡಿ ಕಾರ‍್ಯಕರ್ತೆ ಪಾರ್ವತಿ ಆಟೋಟ ಸ್ಪರ್ಧೇ ನಡೆಸಿಕೊಟ್ಟರು. ಶಾಲಾ ಮುಖ್ಯ ಗುರು ರೇಖಾ ಸ್ವಾಗತಿಸಿ, ನೂಜಿಬಾಳ್ತಿಲ ಸಿಆರ್‌ಪಿ ಗೋವಿಂದ ನಾಯ್ಕ ವಂದಿಸಿದರು. ಶಿಕ್ಷಕ ಪ್ರವೀಣ್ ಕಾರ‍್ಯಕ್ರಮ ನಿರೂಪಿಸಿದರು.

ಕಲ್ಲುಗುಡ್ಡೆ ಅಂಗನವಾಡಿ ದೇಶಕ್ಕೆ ಮಾದರಿ

ನಾನು ಕಲ್ಲುಗುಡ್ಡೆ ಶಾಲೆಯಲ್ಲಿ ಶಾರೀರಿಕ ಶಿಕ್ಷಕನಾಗಿದ್ದು ಕಲ್ಲುಗುಡ್ಡೆ ಅಂಗನವಾಡಿಯ ಎಲ್ಲಾ ಕಾರ‍್ಯಕ್ರಮಗಳಿಗೆ ಹೋಗಿ ಕಾರ‍್ಯಕ್ರಮ ನಿರ್ವಹಿಸುತ್ತೇನೆ, ಅಲ್ಲಿಯ ಪುಟಾಣಿಗಳ ದೇಶಭಕ್ತಿ, ಸ್ವಾಗತ ನೃತ್ಯ ಮಾದರಿಯಾಗಿದೆ. ಮಕ್ಕಳು ಹಿರಿಯರನ್ನು ಸಂಸ್ಕೃತಿ, ಅಂಗನವಾಡಿ ಸ್ವಚ್ಚತಾ ಚಟುವಟಿಕೆಗಳು ದೇಶಕ್ಕೆ ಮಾದರಿಯಾಗಿದೆ. ಅಲ್ಲಿಯ ಅಂಗನವಾಡಿ ಕಾರ‍್ಯಕರ್ತೆಯ ಶ್ರಮವನ್ನು ಮೆಚ್ಚಲೇಬೇಕು ಎಂದು ಬಾಲಕೃಷ್ಣ ಗೌಡ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.