Breaking News

ವಿದ್ಯಾರಶ್ಮಿಯಲ್ಲಿ ’ಶಿನಾರೆ ರಶ್ಮಿ’ ಲಗೋರಿ ಪಂದ್ಯಕೂಟ – 2016

Puttur_Advt_NewsUnder_1
Puttur_Advt_NewsUnder_1

2 4 3

 

ಚಿತ್ರ-ಉಮಾಪ್ರಸಾದ್ ರೈ ನಡುಬೈಲು

ಸವಣೂರಿನಲ್ಲಿ ಮುಂದಿನ ವರ್ಷ ಜಿಲ್ಲಾ ಮಟ್ಟದ ಲಗೋರಿ ಪಂದ್ಯಕೂಟ-ಸೀತಾರಾಮ ರೈ

ಪುತ್ತೂರು: ಸವಣೂರು ವಿದ್ಯಾರಶ್ಮಿ ಕ್ರೀಡಾಂಗಣದಲ್ಲಿ ಮುಂದಿನ ವರ್ಷ ಜಿಲ್ಲಾ ಮಟ್ಟದ ಲಗೋರಿ ಪಂದ್ಯಕೂಟವನ್ನು ಆಯೋಜಿಸಲಾಗುವುದು ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಹೇಳಿದರು.

ಅವರು ದ.19 ರಂದು ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಶಿನಾರೆ ರಶ್ಮಿ -ಲಗೋರಿ ಪಂದ್ಯಕೂಟವನ್ನು ಉದ್ಘಾಟಿಸಿ, ಮಾತನಾಡಿ ನಮ್ಮ, ಜಾನಪದ ಕ್ರೀಡೆಯಾಗಿರುವ ಲಗೋರಿಯು ಆಧುನಿಕ ಆಟೋಟಗಳ ನಡುವೆ ಕಣ್ಮರೆಯಾಗಿದ್ದು,ಇದನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಬೇಕು, ಲಗೋರಿ ಆಟಕ್ಕೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಾಗ ಅದು ಬೆಳೆಯುತ್ತದೆ ಎಂದು ಹೇಳಿ, ಕ್ರೀಡಾಭಿಮಾನಿಗಳು ಪ್ರೋತ್ಸಾಹವನ್ನು ನೀಡಬೇಕೆಂದರು.

ಉತ್ತಮ ಆರೋಗ್ಯ- ಆಶ್ವಿನ್ ಎಲ್ ಶೆಟ್ಟಿ

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿರವರು ಮಾತನಾಡಿ ಲಗೋರಿ ಕ್ರೀಡೆಯು ಮನಸಿಗೆ ನೆಮ್ಮದಿಯನ್ನು ಕೊಡುವ ಆಟ, ಈ ಆಟದಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾದ ಸುಳ್ಯ ತಾಲೂಕು ಲಗೋರಿ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲುರವರು ಮಾತನಾಡಿ ಸುಳ್ಯದಲ್ಲಿ ಲಗೋರಿ ಅಸೋಸಿಯೇಶನ್ ಸ್ಥಾಪಿಸಲು  ಸವಣೂರು ಸೀತಾರಾಮ ರೈರವರ ಪ್ರೋತ್ಸಾಹವೇ ಕಾರಣ, ಕಳೆದ ೩ ವರ್ಷಗಳಿಂದ ಸವಣೂರಿನಲ್ಲಿ ಲಗೋರಿ ಪಂದ್ಯಾಕೂಟ ನಡೆಯುತ್ತಿರುವುದು ಸಂತೋಷವಾಗಿದೆ. ಮುಂದಿನ ವರ್ಷ ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ಲಗೋರಿಗೆ ಕ್ರೀಡಾಭಿಮಾನಿಗಳ ಸಹಕಾರ ಅಗತ್ಯ ಎಂದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರು ಮಾತನಾಡಿ ಆಧುನಿಕ ಲಗೋರಿಯ ಪಿತಾಮಹನಾಗಿರುವ ದೊಡ್ಡಣ್ಣ ಬರೆಮೇಲುರವರು ಇಂದಿನ ವಿದ್ಯಾರ್ಥಿಗಳಿಗೆ ಲಗೋರಿಯ ಅಭಿರುಚಿಯನ್ನು ಬೆಳೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರಶ್ಮಿ ಸಂಸ್ಥೆಯ ಟ್ರಸ್ಟಿ ಎನ್.ಸುಂದರ್ ರೈ ಸವಣೂರು ಉಪಸ್ಥಿತರಿದ್ದರು. ವಿದ್ಯಾರಶ್ಮಿ  ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲೆ ಮಿಥಾಲಿ ಪ್ರಸನ್ನ ರೈ ಸ್ವಾಗತಿಸಿ, ಉಪನ್ಯಾಸಕ ದರ್ಶನ್ ವಂದಿಸಿದರು. ವಿದ್ಯಾರ್ಥಿಗಳಾದ ಅಂಜಲಿ, ಸೃಜನ್‌ಕಶಾಫ್ ಕಾರ‍್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ರಸಾದ್ ಆಳ್ವ, ರಘುನಾಥ್ ಬಿ.ಎಸ್ ಹಾಗೂ ಬೇಬಿರವರುಗಳು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.