ನರಿಮೊಗರು: ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾದಿನೋತ್ಸವ

22 33 11

ಸವಣೂರು : ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳು ಬೆಳೆಯುವಲ್ಲಿ ಸಮಾಜ, ವಿದ್ಯಾಸಂಸ್ಥೆಗಳು, ಹೆತ್ತವರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪುತ್ತೂರು ನಗರ ಪೋಲಿಸ್ ಠಾಣೆಯ ಪೋಲಿಸ್ ಕಾನ್ ಸ್ಟೇಬಲ್ ಹರೀಶ್ .ಪಿ  ಹೇಳಿದರು.

ಅವರು  ನರಿಮೊಗರು  ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ  ಪ್ರತಿಭಾದಿನೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಉಪ್ಪಿನಂಗಡಿಯ ಖ್ಯಾತ ಮಕ್ಕಳ ತಜ್ಞರಾದ  ಎಂ.ಎನ್.ಭಟ್ ಹಾಗೂ ಕೆ.ಎಂ.ಎಫ್, ಮಂಗಳೂರು ಇದರ ನಿರ್ದೇಶಕರಾದ ವೀಣಾ ಆರ್. ರೈ ಬೆದ್ರಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.

ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರರವರು ಅಧ್ಯಕ್ಷತೆ ವಹಿಸಿದ್ದರು.

ಪ್ರತಿಭಾದಿನೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿ ಗೌರವಿಸಿದರು. ನಂತರ ನಡೆದ ಸಾಂಸ್ಕ್ತ್ರತಿಕ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಂಸ್ಕ್ತ್ರತ, ಕನ್ನಡ, ಇಂಗ್ಲೀಷ್ ಭಾಷೆಯ ನಾಟಕಗಳ ಪ್ರದರ್ಶನ ಹಾಗೂ ನೃತ್ಯ ವೈವಿಧ್ಯಗಳು ನಡೆಯಿತು.

ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್‌ಹಿಂದಾರ್, ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಕೆದಿಲಾಯ, ಸದಸ್ಯರಾದ ಹರೀಶ್ ಪುತ್ತೂರಾಯ, ಪ್ರಸನ್ನ.ಎನ್.ಭಟ್, ವೆಂಕಟ ಕೃಷ್ಣ.ಕೆ.ಕೆ, ಎಸ್.ಜಿ.ಕಷ್ಣ, ಸುಬ್ರಾಯ ಬಿ.ಎಸ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ.ಎನ್ ಸ್ವಾಗತಿಸಿ, ಸಹಶಿಕ್ಷಕಿ ಗೀತಾ ಎಚ್.ಎಸ್ ವಂದಿಸಿದರು.ಸಹಶಿPಕರಾದ ಮುರಳಿಕೃಷ್ಣ ಪಿ ಮತ್ತು ಸಹಶಿಕ್ಷಕಿ ಮಹಾಲಕ್ಷ್ಮಿ ಕಾರ್ಯಕ್ರಮದ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.